ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಣ್ಣು ಮತ್ತು ಔಷಧೀಯ ಗಿಡ ವಿತರಣಾ ಕಾರ್ಯಕ್ರಮ
ಕುಂದಾಪುರ : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಬೋಧಕ-ಬೋಧಕೇತರ ಸಿಬ್ಬಂದಿ ಸಂಘ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯ ಹಾಗೂ ರೋಟರ್ಯಾಕ್ಟ್ ಕುಂದಾಪುರ ದಕ್ಷಿಣ ವಲಯ ಇವರ ಸಂಯೋಜನೆಯಲ್ಲಿ ಹಣ್ಣು ಮತ್ತು ಔಷಧೀಯ ಗಿಡ ವಿತರಣಾ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ| ಉತ್ತಮ್ ಕುಮಾರ್ ಶೆಟ್ಟಿ, ಉತ್ತಮ್ ಹೋಮಿಯೋ ಕ್ಲಿನಿಕ್, ಕುಂದಾಪುರ ಮಾತನಾಡಿ, ಇಡೀ ಜೀವನ ಪದ್ಧತಿ ಹಾಗೂ ಪ್ರಕೃತಿಯೊಂದಿಗಿನ ಕೊಡು-ಕೊಳ್ಳುವಿಕೆಯಲ್ಲಾದ ಸಕರಾತ್ಮಕ ಮಾರ್ಪಾಡುಗಳಿಂದಲೇ ಮನುಕುಲದ ದೈಹಿಕ […]
ಪರ್ಕಳದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿ ಬಿದ್ದ ವಿದ್ಯುತ್ ಕಂಬ: ಸಹಸವಾರ ಗಂಭೀರ
ಮಣಿಪಾಲ: ಪರ್ಕಳ ಶ್ರೀಕೃಷ್ಣ ಕಲ್ಯಾಣ ಮಂಟಪದ ಎದುರು ರಾಷ್ಟ್ರೀಯ ಹೆದ್ದಾರಿ (169ಎ) ಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ರಸ್ತೆಯ ಬದಿಯ ವಿದ್ಯುತ್ ಕಂಬವೊಂದು ಉರುಳಿ ಬಿದ್ದ ಪರಿಣಾಮ ಸಹಸವಾರ ತೀವ್ರ ಗಾಯಗೊಂಡಿದ್ದಾನೆ. ಗಾಯಗೊಂಡವರನ್ನು ಹಿರಿಯಡ್ಕ ಅಂಜಾರಿನ ಸದಾಶಿವ ಶೇರಿಗಾರ್(58) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರ ಹರೀಶ್ ಯಾವುದೇ ಗಾಯಗಳಾಗದೆ ಪರಾಗಿದ್ದಾರೆ. ಏಕಾಏಕಿಯಾಗಿ ಬೀಸಿದ ಗಾಳಿಗೆ ಮನೆಯ ಕಂಪೌಂಡ್ ಒಳಗಿದ್ದ ತಂಗಿನ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಇದರ […]
ಹೋಟೆಲ್ ಮಾಲೀಕ ಆತ್ಮಹತ್ಯೆಗೆ ಶರಣು
ಮಂಗಳೂರು: ಇಲ್ಲಿನ ಬಜಪೆ ನಗರದ ಹೋಟೆಲ್ ಮಾಲೀಕ ಯಶವಂತ್ ಶೆಟ್ಟಿ (49) ತನ್ನದೇ ಹೋಟೆಲ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಮೃತ ಯಶವಂತ್ ದಕ್ಷಿಣ ಕನ್ನಡ ಜಿಲ್ಲೆಯ ಕಂದಾವರ ತಾಲೂಕು ಪಂಚಾಯತ್ ಸದಸ್ಯ ವಿಶ್ವನಾಥ್ ಶೆಟ್ಟಿ ಅವರ ಸಹೋದರ. ಮೃತ ಯಶವಂತ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದರಿಂದಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಲಂಡನ್ ಆಪ್ಟಿಕಲ್ ಮಾಲೀಕ ಧನರಾಜ ರಾವ್ ( ಅಣ್ಣು) ನಿಧನ
ಉಡುಪಿ: ಪ್ರತಿಷ್ಠಿತ ಲಂಡನ್ ಆಪ್ಟಿಕಲ್ ಮಾಲೀಕ ಧನರಾಜ ರಾವ್ ( 65) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಹೆಬ್ರಿಯಲ್ಲಿ ಮಂಗಗಳ ಮಾರಣಹೋಮ
ಹೆಬ್ರಿ: ಮಂಗಗಳನ್ನು ಕೊಂದು ರಸ್ತೆಬದಿ ಎಸೆದಿರುವ ಅಮಾನವೀಯ ಘಟನೆ ಸೋಮೇಶ್ವರ- ಮಡಾಮಕ್ಕಿ ರಸ್ತೆಯ ನಾಡ್ಪಾಲು ಎಂಬಲ್ಲಿ ನಡೆದಿದೆ. ಕಿಡಿಗೇಡಿಗಳು ಬೇರೆ ಪ್ರದೇಶಗಳಲ್ಲಿ ಮಂಗಗಳನ್ನು ಹತ್ಯೆಗೈದು ಗೋಣಿಚೀಲದಲ್ಲಿ ತುಂಬಿಸಿ ನಾಡ್ಪಾಲು ರಸ್ತೆ ಬದಿಯಲ್ಲಿ ತಂದು ಹಾಕಿದ್ದಾರೆ. ಈ ಹೀನಾಕೃತ್ಯ ಎರಡು ದಿನಗಳ ಹಿಂದೆ ನಡೆದಿರಬಹುದೆಂದು ಶಂಕಿಸಲಾಗಿದೆ. ಮಂಗಗಳ ಮೃತದೇಹಗಳು ಕೊಳೆತು ಹೋಗಿವೆ. ವಿಷಯ ತಿಳಿಯುತ್ತಿದ್ದಂತೆ ಇಂದು ಬೆಳಗ್ಗೆ ಸ್ಥಳಕ್ಕೆ ವನ್ಯಜೀವಿ ವಿಭಾಗದ ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ವನ್ಯಜೀವಿ ವಿಭಾಗದ ಉಪವಲಯ ಅರಣ್ಯಾಧಿಕಾರಿ […]