ನಾಳೆ ಐಪಿಎಲ್ ವೇಳಾಪಟ್ಟಿ ಬಿಡುಗಡೆ

ನವದೆಹಲಿ: ಸೆಪ್ಟೆಂಬರ್‌ 19ರಿಂದ ಯುನೈಟೆಡ್ ಅರಬ್‌ ಎಮಿರೇಟ್ಸ್‌ನಲ್ಲಿ ಆರಂಭವಾಗಲಿರುವ ಐಪಿಎಲ್‌ ಟೂರ್ನಿಯ ವೇಳಾಪಟ್ಟಿಯನ್ನು ನಾಳೆ (ಭಾನುವಾರ) ಬಿಡುಗಡೆ ಮಾಡಲಾಗುವುದು ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಈ ಬಗ್ಗೆ ವರದಿ ಮಾಡಿರುವ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. 53 ದಿನಗಳ ಕಾಲ ನಡೆಯುವ ಐಪಿಎಲ್ ಟೂರ್ನಿಯು ಸೆ. 19 ಆರಂಭಗೊಂಡು ನವೆಂಬರ್ 10ಕ್ಕೆ ಮುಕ್ತಾಯವಾಗಲಿದೆ.

ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳ ಮಕ್ಕಳ ಕೈವಾಡವಿದ್ದರೂ ಹೊರಬರಲಿ: ಸಚಿವ ಸೋಮಣ್ಣ

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ರಾಜಕಾರಣಿಗಳ ಮಕ್ಕಳು ಸೇರಿಕೊಂಡಿದ್ದಾರೆ. ಅವರ ಹೆಸರನ್ನು ಮುಲಾಜಿಲ್ಲದೆ ಬಹಿರಂಗಪಡಿಸಬೇಕು ಎಂದು ವಸತಿ ಸಚಿವ ಸೋಮಣ್ಣ ಅಗ್ರಹಿಸಿದ್ದಾರೆ. ಡ್ರಗ್ಸ್ ಮಾಫಿಯಾದಲ್ಲಿ ಯಾರೆಲ್ಲರು ಇದ್ದಾರೋ ಅವರೆಲ್ಲರನ್ನು ಪತ್ತೆಹಚ್ಚಬೇಕು. ಅದು ಎಷ್ಟೇ ದೊಡ್ಡ ಪ್ರಭಾವಿಯಾಗಿದ್ದರು ಆಗಿರಲಿ ಎಂದರು. ರಾಜಕಾರಣಿಗಳ ಮಕ್ಕಳೆಂದು ಮುಚ್ಚುಮರೆ ಮಾಡುವ ಅಗತ್ಯವಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಆಗಲೇ ಬೇಕು. ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೆ. 8 ಕ್ಕೆ ಉಡುಪಿಯಲ್ಲಿ ಪಂಜರ ಮೀನು ಕೃಷಿ ಕಾರ್ಯಾಗಾರ

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ ಮೀನುಗಾರಿಕೆ ಇಲಾಖೆ ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ವಿಶೇಷ ಮುತುವರ್ಜಿಯಿಂದ ಪಂಜರ ಮೀನು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಂಜರ ಮೀನು ಕೃಷಿ ಕಾರ್ಯಾಗಾರವನ್ನು ಸೆಪ್ಟೆಂಬರ್ 8 ರಂದು ಬೆಳಿಗ್ಗೆ 9 ಗಂಟೆಗೆ ಉಡುಪಿ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಈ ಕಾರ್ಯಗಾರವನ್ನು ಮೀನುಗಾರಿಕೆ ಕೋಟ […]

ಡಾ. ರಾಧಾಕೃಷ್ಣನ್: ನೆಲವನ್ನು ಪ್ರೀತಿಸಿ ಆಕಾಶಕ್ಕೇರಿದ ಮಹಾನ್ ಮಾನವತಾವಾದಿ: ಟಿ. ದೇವಿದಾಸ್ ಬರೆದ ವಿಶೇಷ ಬರಹ

“ಇದು ತತ್ತ್ವಶಾಸ್ತ್ರಕ್ಕೆ ಸಂದ ಗೌರವ. ಓರ್ವ ತತ್ತ್ವಶಾಸ್ತ್ರಜ್ಞನಾಗಿ ನನಗೆ ಈ ಬೆಳವಣಿಗೆಯಿಂದ ತುಂಬಾ ಸಂತಸವಾಗಿದೆ. ತತ್ತ್ವಶಾಸ್ತ್ರಜ್ಞರು ಧರೆಯಾಳುವ ದೊರೆಗಳಾಗಬೇಕೆಂದು ಪ್ಲೇಟೋ ಬಯಸಿದ್ದ. ಭಾರತವು ಓರ್ವ ತತ್ತ್ವಜ್ಞಾನಿಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದು ಬಹಳ ಹೆಮ್ಮೆಯ ಸಂಗತಿ”- ಡಾ.ರಾಧಾಕೃಷ್ಣನ್ ಈ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಬರ್ಟ್ರಾಂಡ್ ರಸೆಲ್ ಆಡಿದ ಮಾತು. “ವಿಶ್ವವಿದ್ಯಾಲಯ ಎಂಬುದು ಒಂದು ದೇಶದ ಬೌದ್ಧಿಕ ಜೀವನದ ಅಭಯಧಾಮ. ರಾಷ್ಟ್ರಜೀವನದ ಆರೋಗ್ಯಕರ ಬೇರುಗಳು ಕಂಡು ಬರಬೇಕಾದ್ದು ವಿಶ್ವವಿದ್ಯಾನಿಲಯಗಳಲ್ಲಿ.‌ ಈ ಅಭಯಧಾಮಗಳು ಮೃಗಾಲಯ ಅಥವಾ ವಸ್ತು ಸಂಗ್ರಹಾಲಯಗಳಾಗದಿರಲಿ. ನಾವು […]

ಮಣಿಪಾಲ: ಜನರಲ್ಲಿ ಭೀತಿ ಹುಟ್ಟಿಸಿದ ಚಿರತೆ ಕೊನೆಗೂ ಬೋನಿಗೆ ಬಿದ್ದು ಅರಣ್ಯ ಇಲಾಖೆಯ ಅತಿಥಿಯಾಗಿದೆ

ಮಣಿಪಾಲ: ಇಲ್ಲಿನ ವಿಜಯನಗರ ಕೋಡಿ ಎಂಬಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಇಂದು ನಸುಕಿನ ವೇಳೆ ಭಾರೀ ಗಾತ್ರದ ಚಿರತೆಯೊಂದು ಬಿದ್ದಿದೆ. ಕಳೆದ ಕೆಲ ದಿನಗಳಿಂದ ವಿಜಯನಗರ ಕೋಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದ ಈ ಚಿರತೆಯು ಜನರಲ್ಲಿ ಭೀತಿ ಹುಟ್ಟಿಸಿತ್ತು. ಸುತ್ತಮುತ್ತಲಿನ ಮನೆಯ ಹಟ್ಟಿಯಲ್ಲಿದ್ದ ಕರು, ನಾಯಿ, ಕೋಳಿಗಳನ್ನು ಹಿಡಿದು ತಿನ್ನುತ್ತಿತ್ತು. ಚಿರತೆಯ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಭಾಗದಲ್ಲಿ ಜನರು ರಾತ್ರಿ ಹೊರಬರುವುದನ್ನೇ ನಿಲ್ಲಿಸಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗೆ […]