ಪ್ರತಿಷ್ಠಿತ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಆಯ್ಕೆ
ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರು ಆಯ್ಕೆಯಾಗಿದ್ದಾರೆ. ವಾರ್ಷಿಕ ಗೌರವ ಪ್ರಶಸ್ತಿ: ಡಾ. ಚಂದ್ರಶೇಖರ್ ದಾಮ್ಲೆ (ದಕ್ಷಿಣ ಕನ್ನಡ), ಡಾ. ಆನಂದರಾಮ ಉಪಾಧ್ಯ (ಬೆಂಗಳೂರು), ಡಾ. ರಾಮಕೃಷ್ಣ ಗುಂದಿ (ಉತ್ತರ ಕನ್ನಡ), ಕೆ.ಸಿ. ನಾರಾಯಣ (ಬೆಂಗಳೂರು ಗ್ರಾಮಾಂತರ), ಡಾ. ಚಂದ್ರು ಕಾಳೇನಹಳ್ಳಿ (ಹಾಸನ) ಅವರು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಕ್ಷಸಿರಿ ವಾರ್ಷಿಕ ಪ್ರಶಸ್ತಿ: ನಲ್ಲೂರು ಜನಾರ್ದನ್ ಆಚಾರ್ (ಚಿಕ್ಕಮಗಳೂರು), ಉಬರಡ್ಕ ಉಮೇಶ್ ಶೆಟ್ಟಿ […]
ನಿವೃತ್ತ ಕಂದಾಯ ನಿರೀಕ್ಷಕ ಕಲ್ಲಡ್ಕ ಮನೆಯ ಸುಧಾಕರ್ ಶೆಟ್ಟಿ ಮಂಚಿ ವಿಧಿವಶ
ಉಡುಪಿ: ನಿವೃತ್ತ ಕಂದಾಯ ನಿರೀಕ್ಷಕ ಕಲ್ಲಡ್ಕ ಮನೆಯ ಸುಧಾಕರ್ ಶೆಟ್ಟಿ ಮಂಚಿ (62) ಅವರು ಹೃದಯಾಘಾತದಿಂದ ಇಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಎರಡು ಗಂಡು ಮಕ್ಕಳನ್ನು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಆಹಾರ ಸೇವಿಸದೆಯೇ ಬದುಕು ಅಂತ್ಯಗೊಳಿಸುವ ಕೀಟ ನೋಡಿದ್ದೀರಾ.! ಇಲ್ಲಿದೆ ನೋಡಿ ನಿಬ್ಬೆರುಗೊಳಿಸುವ ದೈತಕಾರದ ಪತಂಗದ ಚಿತ್ರಣ
ಉಡುಪಿ: ದೈತ್ಯಾಕಾರದ ಪತಂಗ ‘ಅಟ್ಲಾಸ್ ಮೋತ್’ ಈಗಾಗಲೇ ನಮ್ಮ ಜಿಲ್ಲೆಯ ಹಲವು ಭಾಗಗಳಲ್ಲಿ ಪತ್ತೆಯಾಗಿದೆ. ಬೃಹತ್ ಆಕಾರದಲ್ಲಿರುವ ಈ ಪತಂಗವು ಎಲ್ಲರಲ್ಲೂ ಆಶ್ಚರ್ಯ ಮತ್ತು ಕುತುಹೂಲ ಮೂಡಿಸುತ್ತದೆ. ಬಹುತೇಕ ಮಂದಿ ಇದನ್ನು ಚಿಟ್ಟೆ/ಪಾತರಗಿತ್ತಿ ಎಂದೇ ಭಾವಿಸಿ ಕೊಂಡಿದ್ದಾರೆ. ಆದರೆ ಇದು ಪತಂಗವೇ ಹೊರತು ಚಿಟ್ಟೆ(ಪಾತರಗಿತ್ತಿ) ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮೊತ್ ಎಂಬುದಾಗಿ ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ತುಂಬಾ ವ್ಯಾತ್ಯಾಸ ಇದೆ ಎಂದು ಚಿಟ್ಟೆ ಪ್ರೇಮಿ ನಝೀರ್ ಪೊಲ್ಯ ತಿಳಿಸಿದ್ದಾರೆ. ಈ ಪತಂಗವೂ ಹಲವು ವರ್ಷಗಳ ಹಿಂದೆ […]
ಸಾಕ್ಷ್ಯ ನಾಶ ಮಾಡಲು ತುಪ್ಪದ ಬೆಡಗಿ ರಾಗಿಣಿಯಿಂದ ಮಾಸ್ಟರ್ ಫ್ಲ್ಯಾನ್!
ಬೆಂಗಳೂರು: ಡ್ರಗ್ಸ್ ಮಾಫಿಯಾದ ನಂಟಿನ ಆರೋಪದಡಿ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ಜಾರಿ ಮಾಡುತ್ತಿದ್ದಂತೆ ರಾಗಿಣಿ ಸಾಕ್ಷ್ಯ ನಾಶ ಮಾಡಲು ಮಾಸ್ಟರ್ ಫ್ಲ್ಯಾನ್ ಹೆಣೆದಿದ್ದಾರೆ. ರಾಗಿಣಿ ಆಪ್ತ ರವಿಶಂಕರ್ ಅನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಸಂದೇಶ ತನಗೆ ಮುಳುವಾಗುವ ಸಾಧ್ಯತೆ ಇದೆ ಎಂದು ಊಹಿಸಿ, ವಿಚಾರಣೆ ಹಾಜರಾಗದೆ ಸಾಕ್ಷ್ಯ ನಾಶಕ್ಕೆ ರಾಗಿಣಿ ಯತ್ನಿಸಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಮೊಬೈಲ್ ನಿಂದಾಗಿ ರಾಗಿಣಿ ಆಪ್ತ ರಾಹುಲ್ ಸಿಸಿಬಿಗೆ […]
ಡ್ರಗ್ಸ್ ಜಾಲದ ನಂಟು ಆರೋಪ: ನಟಿ ರಾಗಿಣಿ ದ್ವಿವೇದಿ ಫ್ಲ್ಯಾಟ್ ಮೇಲೆ ಸಿಸಿಬಿ ಪೊಲೀಸರ ದಾಳಿ
ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಡ್ರಗ್ಸ್ ಮಾಫಿಯಾದೊಂದಿಗೆ ಭಾಗಿಯಾಗಿದ್ದಾರೆಂಬ ಆರೋಪದಡಿ ರಾಗಿಣಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ಬೆನ್ನಲ್ಲೇ ಪೊಲೀಸರು, ರಾಗಿಣಿ ಅವರ ಸ್ನೇಹಿತ ರವಿಶಂಕರ್ ಅವರನ್ನು ಬಂಧಿಸಿದ್ದರು. ಪೊಲೀಸರಿಗೆ ರಾಗಿಣಿ ಅವರೂ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವ ಅನುಮಾನ ಇದೆ. ಈ ಕಾರಣಕ್ಕಾಗಿ ಇಂದು ಯಲಹಂಕದ ಅನನ್ಯ […]