udupixpress
Home Trending ಡ್ರಗ್ಸ್ ಜಾಲದ ನಂಟು ಆರೋಪ: ನಟಿ ರಾಗಿಣಿ ದ್ವಿವೇದಿ ಫ್ಲ್ಯಾಟ್ ಮೇಲೆ ಸಿಸಿಬಿ ಪೊಲೀಸರ ದಾಳಿ

ಡ್ರಗ್ಸ್ ಜಾಲದ ನಂಟು ಆರೋಪ: ನಟಿ ರಾಗಿಣಿ ದ್ವಿವೇದಿ ಫ್ಲ್ಯಾಟ್ ಮೇಲೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಡ್ರಗ್ಸ್ ಮಾಫಿಯಾದೊಂದಿಗೆ ಭಾಗಿಯಾಗಿದ್ದಾರೆಂಬ ಆರೋಪದಡಿ ರಾಗಿಣಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ಬೆನ್ನಲ್ಲೇ ಪೊಲೀಸರು, ರಾಗಿಣಿ ಅವರ ಸ್ನೇಹಿತ ರವಿಶಂಕರ್ ಅವರನ್ನು ಬಂಧಿಸಿದ್ದರು‌.

ಪೊಲೀಸರಿಗೆ ರಾಗಿಣಿ ಅವರೂ ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವ ಅನುಮಾನ ಇದೆ. ಈ ಕಾರಣಕ್ಕಾಗಿ ಇಂದು ಯಲಹಂಕದ ಅನನ್ಯ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿರುವ ರಾಗಿಣಿ ಅವರ ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದಾರೆ.

ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದು ರಾಗಿಣಿ ಮನೆ ಮೇಲೆ ಸಿಸಿಬಿಯ ವಿಶೇಷ ತಂಡಗಳು ದಾಳಿ ಮಾಡಿದ್ದು, ನಟಿ ರಾಗಿಣಿ ಫ್ಲ್ಯಾಟ್, ಕಾರಿನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!