ಆಹಾರ ಸೇವಿಸದೆಯೇ ಬದುಕು ಅಂತ್ಯಗೊಳಿಸುವ ಕೀಟ ನೋಡಿದ್ದೀರಾ.! ಇಲ್ಲಿದೆ ನೋಡಿ ನಿಬ್ಬೆರುಗೊಳಿಸುವ ದೈತಕಾರದ ಪತಂಗದ ಚಿತ್ರಣ

ಉಡುಪಿ: ದೈತ್ಯಾಕಾರದ ಪತಂಗ ‘ಅಟ್ಲಾಸ್ ಮೋತ್’ ಈಗಾಗಲೇ ನಮ್ಮ ಜಿಲ್ಲೆಯ ಹಲವು ಭಾಗಗಳಲ್ಲಿ ಪತ್ತೆಯಾಗಿದೆ.

ಬೃಹತ್ ಆಕಾರದಲ್ಲಿರುವ ಈ ಪತಂಗವು ಎಲ್ಲರಲ್ಲೂ ಆಶ್ಚರ್ಯ ಮತ್ತು ಕುತುಹೂಲ ಮೂಡಿಸುತ್ತದೆ. ಬಹುತೇಕ ಮಂದಿ ಇದನ್ನು ಚಿಟ್ಟೆ/ಪಾತರಗಿತ್ತಿ ಎಂದೇ ಭಾವಿಸಿ ಕೊಂಡಿದ್ದಾರೆ. ಆದರೆ ಇದು ಪತಂಗವೇ ಹೊರತು ಚಿಟ್ಟೆ(ಪಾತರಗಿತ್ತಿ) ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮೊತ್ ಎಂಬುದಾಗಿ ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ತುಂಬಾ ವ್ಯಾತ್ಯಾಸ ಇದೆ ಎಂದು ಚಿಟ್ಟೆ ಪ್ರೇಮಿ ನಝೀರ್ ಪೊಲ್ಯ ತಿಳಿಸಿದ್ದಾರೆ.

ಈ ಪತಂಗವೂ ಹಲವು ವರ್ಷಗಳ ಹಿಂದೆ ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಪತಂಗ ಎಂಬುದಾಗಿ ಗುರುತಿಸಿಕೊಂಡಿತ್ತು. ಆದರೆ ನಂತರ ನಡೆದ ಅಧ್ಯಯನದಲ್ಲಿ ಇದಕ್ಕಿಂತ ದೊಡ್ಡ ಗಾತ್ರದ ಪತಂಗ ಇರುವುದನ್ನು ಗುರುತಿಸ ಲಾಗಿದೆ. ಆದುದರಿಂದ ಈ ಪತಂಗವನ್ನು ಬೃಹತ್ ಆಕಾರದ ಪಂತಗ ಎಂಬುದಾಗಿ ಹೆಸರಿಸಬಹುದೇ ಹೊರತು ಪ್ರಪಂಚದ ಅತ್ಯಂತ ದೊಡ್ಡ ಪತಂಗ ಎಂಬುದು ಹೇಳುವುದು ಸರಿಯಲ್ಲ ಎಂದು ತಜ್ಞರ ಅಭಿಪ್ರಾಯ ಎಂದು ಹೇಳಿದ್ದಾರೆ.

*ಈ ಪತಂಗದ ಕುರಿತು ಹೆಚ್ಚಿನ ಮಾಹಿತಿ*
ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಈ ಪತಂಗದ ವೈಜ್ಞಾನಿಕ ಹೆಸರು ಅಟ್ಟಾಕಾಸ್ ಅಟ್ಲಾಸ್. ಇದರ ರೆಕ್ಕೆಯ ವಿಸ್ತೀರ್ಣ 24 ಸೆ.ಮೀ. ಆಗಿದೆ. ಈ ಪತಂಗ ಸ್ಥಳೀಯವಾಗಿ ಕಂಡುಬರುವ ಪೇರಳೆ, ಸಂಪಿಗೆ ಸೇರಿದಂತೆ ಕೆಲವೊಂದು ಸೀಮಿತ ಮರಗಳ ಎಲೆಗಳಲ್ಲಿ ಮೊಟ್ಟೆ ಇಡುತ್ತದೆ. ಬಳಿಕ ಮೊಟ್ಟೆ ಯಿಂದ ಹೊರ ಬರುವ ಹುಳ ಆ ಮರದ ಎಲೆಗಳನ್ನು ತಿಂದು ಕೋಶವನ್ನು ರಚಿಸುತ್ತದೆ. ಅದರಿಂದ ಹೊರಗೆ ಬರುವ ಗಂಡು ಪತಂಗವು, ಹೆಣ್ಣು ಪತಂಗ ದೊಂದಿಗೆ ಸೇರಿ ಸಾಯುತ್ತದೆ. ಮುಂದೆ ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ ಎಂದು ಕೀಟತಜ್ಞರು ಮಾಹಿತಿ ನೀಡಿದ್ದಾರೆ.

ವಿಶೇಷ ಅಂದರೆ ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಆದುದರಿಂದ ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗ ಆದ ನಂತರ ಯಾವುದನ್ನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲ ಎನರ್ಜಿ ಯನ್ನು ಹುಳ ಆಗಿರುವಾಗಲೇ ಎಲೆಗಳನ್ನು ತಿಂದು ಇಟ್ಟುಕೊಳ್ಳುತ್ತದೆ.

ಹಾಗಾಗಿ ಇದು ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕಿರುತ್ತದೆ. ತನ್ನ ಎನರ್ಜಿಯನ್ನು ಉಳಿಸಿಕೊಳ್ಳಲು ಅದು ತುಂಬಾ ಕಡಿಮೆ ಹಾರಾಟ ಮಾಡು ತ್ತದೆ. ಹೆಚ್ಚು ಸಮಯ ಎಲೆಯ ಮೇಲೆ ವಿಶ್ರಾಂತಿಯಲ್ಲಿ ರುತ್ತದೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಹಕ್ಕಿ, ಓತಿ, ಇರುವೆಗಳಿಗೆ ಆಹಾರವಾಗುತ್ತದೆ ಎಂದು ಚಿಟ್ಟೆ ಪ್ರೇಮಿ ನಝೀರ್ ಪೊಲ್ಯ ತಿಳಿಸಿದ್ದಾರೆ.