ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಕೊರೊನಾ ಪಾಸಿಟಿವ್
ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ತಿಳಿಸಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿಮ್ಮ ಶುಭಾಶಯಗಳು ಮತ್ತು ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಹಿಂತಿರುಗುವ ವಿಶ್ವಾಸವಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಜಾಗರೂಕರಾಗಿರಿ ಎಂದು ಮನವಿ ಮಾಡಿದ್ದಾರೆ.
ನಾಳೆ ಬ್ರಹ್ಮಾವರ ತಾಲೂಕು ಪಂಚಾಯತ್ ಕಚೇರಿ ಕಟ್ಟಡ ಉದ್ಘಾಟನೆ
ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಪಂಚಾಯತ್ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಸೆ.31 ರಂದು ಪೂರ್ವಾಹ್ನ 10.30ಕ್ಕೆ ಬ್ರಹ್ಮಾವರದ ವಾರಂಬಳ್ಳಿ ಗ್ರಾ.ಪಂ.ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಶ್ವಕ್ಕೇ ಆಟಿಕೆಗಳನ್ನು ಪೂರೈಸುವಂತಹ ಶಕ್ತಿ ಭಾರತಕ್ಕಿದೆ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ವಿಶ್ವಕ್ಕೇ ಆಟಿಕೆಗಳನ್ನು ಪೂರೈಸುವಂತಹ ಶಕ್ತಿ, ಸಾಮರ್ಥ್ಯ ಭಾರತಕ್ಕಿದೆ. ಮುಂದೊಂದು ದಿನ ಜಾಗತಿಕವಾಗಿ ಆಟಿಕೆ ಪೂರೈಸುವ ತಾಣ ಆಗುವ ಅವಕಾಶವೂ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ‘ಮನ್ ಕಿ ಬಾತ್‘ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಟಿಕೆ ಉದ್ಯಮದಲ್ಲಿ ಭಾರತವು ಮುಂಚೂಣಿಗೆ ಬರಬೇಕಾದ ಅಗತ್ಯವಿದೆ. ದೇಶೀಯವಾಗಿ ಆಟಿಕೆಗಳನ್ನು ಅಭಿವೃದ್ಧಿಪಡಿಸಲು ಇದು ಸಕಾಲವಾಗಿದ್ದು, ಸ್ಥಳೀಯವಾಗಿ ಆಟಿಕೆಗಳ ತಯಾರಿಸಲು ಹೊಸದಾಗಿ ನವೋದ್ಯಮಗಳನ್ನು ಆರಂಭಿಸಬೇಕು. ಇದಕ್ಕೆ ರಾಜ್ಯದ ಚನ್ನಪಟ್ಟಣ ತಾಲೂಕಿನ ಗೊಂಬೆ ಉದ್ಯಮದ ಉದಾಹರಣೆ ನೀಡಿದ್ದಾರೆ. ಸರ್ಕಾರ ಆಟಿಕೆ ಉದ್ಯಮಕ್ಕೆ […]
ಬಿಜೆಪಿ ಕಾಪು ಮಂಡಲ ಯುವ ಮೋರ್ಚಾದ ಅಧ್ಯಕ್ಷ ಸಚಿನ್ ಪಿತ್ರೋಡಿ ನೇತೃತ್ವದಲ್ಲಿ ಗೋವಿಗಾಗಿ ಮೇವು ಶ್ರಮದಾನ
ಉಡುಪಿ: ಬಿಜೆಪಿ ಕಾಪು ಮಂಡಲ ಯುವ ಮೋರ್ಚಾದ ವತಿಯಿಂದ ಗೋವಿಗಾಗಿ ಮೇವು ಅಭಿಯಾನದಡಿ ನೀಲಾವರ ಗೋಶಾಲೆಗೆ ಗೋಗ್ರಾಸ ನೀಡುವ ಶ್ರಮದಾನ ಕಾರ್ಯಕ್ರಮ ಇಂದು ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆನಗರದಲ್ಲಿ ನಡೆಯಿತು. ನೀಲಾವರದ ಗೋಶಾಲೆಯಲ್ಲಿ ಮೇವಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ ಪೂಜ್ಯ ಪೇಜಾವರ ಶ್ರೀಗಳ ಮನವಿಯಂತೆ ಸಂಪಿಗೆನಗರದ ರಸ್ತೆ ಬದಿಯ ಹುಲ್ಲನ್ನು ಕಡಿದು ಗೋಶಾಲೆಗೆ ಕಾಪು ಯುವ ಮೋರ್ಚಾದ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಕಾಪು ಮಂಡಲದ ಕಾರ್ಯದರ್ಶಿ ರಾಜೇಶ್ ಕುಂದರ್, ಉದ್ಯಾವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ […]
ಮಲ್ಲಿಗೆಯಲ್ಲೇ ಅರಳಿತು ಕಾರ್ಕಳದ ಈ ಕೃಷಿಕನ ಬದುಕು: ತಾರಾನಾಥ ಪ್ರಭು ಅವರ ಕತೆಯಿದು !
ಅಪಾರ ಆದಾಯ ತಂದುಕೊಡಬಲ್ಲ ಮಲ್ಲಿಗೆ ಕೃಷಿ ಕೃಷಿನರ ಕೈಯಿಡಿದು ಬದುಕುಕಟ್ಟಿಕೊಡುತ್ತದೆ. ನಮಗೆಲ್ಲಾ ಗೊತ್ತು ಈ ಮಲ್ಲಿಗೆ ಹೂವಿನ ಪರಿಮಳಕ್ಕೆ ಮನಸೋಲದವರು ಯಾರೂ ಇಲ್ಲ. ಒಂದು ಕುಟುಂಬದ ದಿಕ್ಕನ್ನು ಈ ಮಲ್ಲಿಗೆ ಕೃಷಿ ಬದಲಾಯಿಸಿದೆ ಎಂದರೆ ನಂಬಲೇಬೇಕು. ಹೌದು,ಕಾರ್ಕಳದ ಎಳ್ಳಾರೆಯ ಸಂಪಿಗೆಟ್ಟೆಯ ತಾರನಾಥ ಪ್ರಭು ದಂಪತಿ ಮಲ್ಲಿಗೆ ಹೂವಿನ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿ ಬದುಕುಕಟ್ಟಿಕೊಂಡಿದ್ದಾರೆ. ತಾರಾನಾಥ ಜ್ಯೋತಿ ದಂಪತಿಗಳು ಶಂಕರಪುರ ಮಲ್ಲಿಗೆ ನಾಟಿ ಕಾರ್ಯ ಹಾಗೂ ನಿರ್ವಹಣೆ ಮಾಡುತ್ತಾರೆ. ತಮ್ಮ ಹದಿನೈದು ಸೆಂಟ್ಸ್ ಜಾಗದಲ್ಲಿ ಎಂಬತ್ತು […]