ವಿಶ್ವಕ್ಕೇ ಆಟಿಕೆಗಳನ್ನು ಪೂರೈಸುವಂತಹ ಶಕ್ತಿ ಭಾರತಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ವಿಶ್ವಕ್ಕೇ ಆಟಿಕೆಗಳನ್ನು ಪೂರೈಸುವಂತಹ ಶಕ್ತಿ, ಸಾಮರ್ಥ್ಯ ಭಾರತಕ್ಕಿದೆ. ಮುಂದೊಂದು ದಿನ ಜಾಗತಿಕವಾಗಿ ಆಟಿಕೆ ಪೂರೈಸುವ ತಾಣ ಆಗುವ ಅವಕಾಶವೂ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

‘ಮನ್‌ ಕಿ ಬಾತ್‌‘ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಟಿಕೆ ಉದ್ಯಮದಲ್ಲಿ ಭಾರತವು ಮುಂಚೂಣಿಗೆ ಬರಬೇಕಾದ ಅಗತ್ಯವಿದೆ. ದೇಶೀಯವಾಗಿ ಆಟಿಕೆಗಳನ್ನು ಅಭಿವೃದ್ಧಿಪಡಿಸಲು ಇದು ಸಕಾಲವಾಗಿದ್ದು, ಸ್ಥಳೀಯವಾಗಿ ಆಟಿಕೆಗಳ ತಯಾರಿಸಲು ಹೊಸದಾಗಿ ನವೋದ್ಯಮಗಳನ್ನು ಆರಂಭಿಸಬೇಕು. ಇದಕ್ಕೆ ರಾಜ್ಯದ ಚನ್ನಪಟ್ಟಣ ತಾಲೂಕಿನ ಗೊಂಬೆ ಉದ್ಯಮದ ಉದಾಹರಣೆ ನೀಡಿದ್ದಾರೆ.

ಸರ್ಕಾರ ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡಲು ಹೊಸ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿಸಿದರು.

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಾಗರಿಕರು ಸಂಯಮದಿಂದ ವರ್ತಿಸಿದ್ದಾರೆ. ಸಾಂಕ್ರಾಮಿಕ ರೋಗದ ನಡುವೆ ಆಚರಿಸಿದ ಹಬ್ಬ–ಹರಿದಿಗಳಲ್ಲಿ ಸಾರ್ವಜನಿಕರು ಸರಳತೆ ಪ್ರದರ್ಶಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.