ಉಡುಪಿಯಲ್ಲಿ ಇಂದು 246 ಮಂದಿ ಕೊರೊನಾದಿಂದ ಗುಣಮುಖ

ಉಡುಪಿ: ಜಿಲ್ಲೆಯಲ್ಲಿ ಇಂದು 246 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 99 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 147 ಮಂದಿ ಸಹಿತ 246 ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 7983 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 251 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10704ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ […]

ಆರನೇ ತರಗತಿಯ ಪಾಠದಲ್ಲಿ ಹಿಂದೂ ಧರ್ಮಕ್ಕೆ ಅವಮಾನ: ಪಾಠ ಕೈಬಿಡುವಂತೆ ಶಿಕ್ಷಣ ಸಚಿವರ ಆದೇಶ

ಉಡುಪಿ: ಹಿಂದೂ ಧಾರ್ಮಿಕ ನಂಬಿಕೆಗೆ ಘಾಸಿಯಾಗುವ ಅಂಶಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರನೇ ತರಗತಿಯ ಸಾಮಾಜಶಾಸ್ತ್ರ ಪಾಠವನ್ನು ಕೈ ಬಿಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಆದೇಶಿಸಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಅಂಶಗಳ ಬಗ್ಗೆ ಉಡುಪಿಯ ಅದಮಾರು ಮಠದ ಪರ್ಯಾಯ ಈಶಪ್ರಿಯತೀರ್ಥ ಸ್ವಾಮೀಜಿ ಆಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ವಿವಾದಕ್ಕೆ ಕಾರಣ ಆಗಿದ್ದೇನು: ಕೈ ಬಿಟ್ಟ ಪಾಠದಲ್ಲಿ ಉತ್ತರ ವೇದ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ-ಯಜ್ಞಗಳ ಹೆಸರಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು […]

ಶ್ರೀಕೃಷ್ಣ ಮಠ: ಗಣೇಶ ಮೂರ್ತಿ ವಿಸರ್ಜನೆ

ಉಡುಪಿ:  ಶ್ರೀಕೃಷ್ಣ ಮಠದಲ್ಲಿ, ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಮೆರವಣಿಗೆಯೊಂದಿಗೆ ಮಧ್ವಸರೋವರದಲ್ಲಿ ಗಣಪತಿ ವಿಸರ್ಜನೆ ನಡೆಯಿತು.

ಮಂಡಲ ಕಲಾಚತುರ, ಕ್ರಿಯಾಶೀಲತೆಯಲ್ಲೇ ಬೆರಗಾಗಿಸೋ ಸುಂದರ ಕಲಾಕಾರ “ಮುರಳೀಧರ ಪುತ್ರಾಯ”

ಹಿಂದೂ ಸಂಸ್ಕೃತಿಯಲ್ಲಿ ಪೂಜೆ, ಆಚರಣೆಗಳಿಗೆ ಉನ್ನತ ಸ್ಥಾನವಿದೆ, ಅದರಲ್ಲೂ ಮಂಡಲಗಳ ಮೂಲಕ ವಿಶೇಷವಾದ ಪೂಜ್ಯನೀಯ ಸ್ಥಾನವನ್ನೂ ಕಲ್ಪಿಸಿ ದೇವರನ್ನು ಆಹ್ವಾನಿಸುವ ಕ್ರಮಗಳು ವೈದಿಕ ವಿಧಾನದಲ್ಲಿದೆ. ಆ ಮಂಡಲ ರಚನೆಯೂ ಸಾಮಾನ್ಯವಾದುದಲ್ಲ. ಮಂಡಲ ಕಲೆಯಲ್ಲಿ ನುರಿತರಾದವರೊಬ್ಬರ ಪರಿಚಯ ಮಾಡಿಕೊಡ್ತೇವೆ ನೋಡಿ. ಇವರ ಸಾಧನೆ ಗಮನೀಯ. ಇವರ ಕೈಯಲ್ಲರಳಿದ  ರಂಗೋಲಿಗಳ ಮಂಡಲಗಳು, ಮಂಟಪ ರಚನೆಗಳು ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿದೆ. ಇವರೇ ಕಾರ್ಕಳ ತಾಲೂಕಿನ ಅಜೆಕಾರಿನ ಕುರ್ಸು ಕಟ್ಟೆಯ  ಮುರಳಿಧರ ಪುತ್ರಾಯ. ಇವರು ಬಿಡಿಸಿದ ಮಂಡಲಗಳು ವಿಶೇಷವಾಗಿ ಕಣ್ಸೆಳೆಯುತ್ತವೆ. ಒಂದೊಂದು ಮಂಡಲವೂ […]

ರಾಜ್ಯ ಬಿಜೆಪಿ ಸರ್ಕಾರಕ್ಕೆ ಕೊರೊನಾ ಹಣ ಮಾಡುವ ದಂಧೆಯಾಗಿದೆ: ಮಿಥುನ್ ರೈ ಆರೋಪ

ಉಡುಪಿ: ಕೊರೊನಾ ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದೊಡ್ಡಿದ್ದಾರೆ. ಬಿಜೆಪಿಗೆ ಇದು ಹಣ ಮಾಡುವ ದಂಧೆಯಾಗಿದೆ ಎಂದು ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರೋಪಿಸಿದರು. ಇಂದು ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಕೊರೊನಾ ಪರಿಕರಣಗಳ ಖರೀದಿಯಲ್ಲಿ ದೊಡ್ಡಮಟ್ಟದ ಹಗರಣ ನಡೆಸಿದೆ. ದುಪ್ಪಟ್ಟು ಹಣಕೊಟ್ಟು ಪರಿಕರಣಗಳನ್ನು ಖರೀದಿ ಮಾಡಿದೆ ಎಂದು ದೂರಿದರು. ಸರ್ಕಾರವು ಕಾರ್ಮಿಕರಿಗೆ ಊರಿಗೆ ತೆರಳಲು ವ್ಯವಸ್ಥೆ ಮಾಡದೆ ಅನ್ಯಾಯ ಎಸಗಿದೆ. […]