ಮರವಂತೆಯಲ್ಲಿ ಮೀನುಗಾರಿಕೆ ತೆರಳಿದ ನಾಡದೋಣಿ ದುರಂತ: ಓರ್ವ ಮೀನುಗಾರನಿಗೆ ಗಾಯ

ಬೈಂದೂರು: ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಬೈಂದೂರು ತಾಲ್ಲೂಕಿನ ಮರವಂತೆ ಬಳಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿ ಬಿದ್ದಿದ್ದು, ಓರ್ವ ಮೀನುಗಾರ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ದೋಣಿ ಮಾಲೀಕ ಗಂಗೊಳ್ಳಿಯ ಶ್ರೀನಿವಾಸ್ ಖಾರ್ವಿ(50) ಅವಘಡದಲ್ಲಿ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲೆಗಳ ಅಬ್ಬರಕ್ಕೆ ದೋಣಿ ದಿಬ್ಬಕ್ಕೆ ಅಪ್ಪಳಿಸಿದ್ದು, ಇದರಿಂದ ದೋಣಿಯ ಎರಡು ಇಂಜಿನ್ ಗಳು ಸಮುದ್ರ ಪಾಲಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

“ಯಕ್ಷ ಛಂದೋಂಬುಧಿ”ಯ ಗ್ರಂಥ ಕರ್ತ ಡಾ.ಶಿಮಂತೂರು ನಾರಾಯಣ ಶೆಟ್ಟಿ ನಿಧನ

ಉಡುಪಿ: ‘ಯಕ್ಷ ಛಂದೋಂಬುಧಿ’ಯ ಗ್ರಂಥ ಕರ್ತ, ಯಕ್ಷಗಾನದ ಛಂದಸ್ಸಿನ ಬಗ್ಗೆ ಆಳವಾದ ಜ್ಞಾನ ಹೊಂದಿದ, ‘ಯಕ್ಷಗಾನ ನಾಗವರ್ಮ’ ಎಂದು ಖ್ಯಾತಿ ಹೊಂದಿರುವ, ನಿವೃತ್ತ ಶಿಕ್ಷಕ, ಪಾರ್ಥಿಸುಬ್ಬ ಪ್ರಶಸ್ತಿ ಪುರಸ್ಕೃತ  ಹಾಗು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದ ಶಿಮಂತೂರು ನಾರಾಯಣ ಶೆಟ್ಟಿ (87 ) ಅವರು ಇಂದು ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಯಕ್ಷಗಾನ ಕಲಾರಂಗದ  ಸಂಸ್ಥೆಯ ವತಿಯಿಂದ ಇವರಿಗೆ ಯಕ್ಷಗಾನ ಕ್ಷೇತ್ರದ ವಿಶಿಷ್ಠ ಸಾಧಕರಿಗೆ ನೀಡುವ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು 2013ರಲ್ಲಿ ನೀಡಿ ಗೌರವಿಸಲಾಗಿತ್ತು. ಇವರು […]

ಟಿಪ್ಪು ಸುಲ್ತಾನ್ ಈ ನೆಲದ ಮಗ, ಯಾವುದೇ ಪಕ್ಷ, ಧರ್ಮಕ್ಕೆ ಸೇರಿದವನಲ್ಲ: ಎಚ್. ವಿಶ್ವನಾಥ್

ಬೆಂಗಳೂರು: ಟಿಪ್ಪು ಸುಲ್ತಾನ್ ಈ ನೆಲದ ಮಗ, ವೀರ ಹೋರಾಟಗಾರ. ಟಿಪ್ಪು ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗ್ಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ಥಾಪನೆ ಮಾಡುವ ಬಗ್ಗೆ ಹೋರಾಟ ಮಾಡುವ ಕುರಿತಂತೆ ಹೇಳುವಾಗ ಟಿಪ್ಪುವನ್ನು ಹೊಗಳಿದ್ದಾರೆ. ಸಂಗ್ಗೊಳ್ಳಿ ರಾಯಣ್ಣ ಬ್ರಿಟಿಷ್ ವಿರುದ್ಧ ಹೋರಾಡಿದ ಕಮಾಂಡರ್. ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಎಂದು ತಿಳಿಸಿದ್ದಾರೆ. […]

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸ್ತ್ರೀರೋಗ, ಅರೆವಳಿಕೆ ಮತ್ತು ಮಕ್ಕಳ ತಜ್ಞರು, ಎಲ್.ಎಚ್.ವಿ, ಡೆಂಟಲ್ ಹೈಜೆನಿಸ್ಟ್, ಆಡಿಯೋ ಮೆಟ್ರಿಕ್ ಆಸಿಸ್ಟೆಂಟ್, ಎಮ್.ಬಿ.ಬಿ.ಎಸ್ ವೈದ್ಯಾಧಿಕಾರಿಗಳು, ಆಯುಷ್ ವೈದ್ಯಾಧಿಕಾರಿಗಳು, ಶುಶ್ರೂಷಕಿ, ಕಿರಿಯ ಪುರುಷ ಆರೋಗ್ಯ ಸಹಾಯಕರು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಹಾಗೂ ಶ್ರವಣ ದೋಷವುಳ್ಳ ಮಕ್ಕಳಿಗೆ ಬೋಧಕೇತರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು ಆಗಸ್ಟ್ 31 ರಂದು ಬೆಳಿಗ್ಗೆ 11 ರಿಂದ 1 ರವರೆಗೆ […]

ಆಂತರಿಕ ಭದ್ರತೆಗೆ ಆಧುನಿಕ ತಂತ್ರ‍ಜ್ಞಾನ ಬಳಕೆ: ಭಾಸ್ಕರ್ ರಾವ್

ಉಡುಪಿ: ರಾಜ್ಯದ ಆಂತರಿಕ ಭದ್ರತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ. ಮಲ್ಪೆಯ ಕರಾವಳಿ ಕವಲು ಪಡೆಯ ಕಚೇರಿಯಲ್ಲಿ ಮೀನುಗಾರ ಮುಖಂಡರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ರಾಜ್ಯದ ಅಂತರಿಕ ಭದ್ರೆತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕರಾವಳಿ ಕಾವಲು ಪಡೆಗೆ ಅಗತ್ಯ ಉಪಕರಣಗಳ ಖರೀದಿ, ಪ್ರತ್ಯೇಕ ಸಿಬ್ಬಂದಿ  ನೇಮಕ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.ಸಿಬ್ಬಂದಿಗಳಲ್ಲಿ ದೈಹಿಕ […]