ಸುಶಾಂತ್ ಸಿಂಗ್‌ ಸಾವಿನ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ

ದೆಹಲಿ: ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಸುಶಾಂತ್ ಸಾವಿನ ಪ್ರಕರಣ ಸಂಬಂಧ ಪಟ್ನಾದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮುಂಬೈಗೆ ವರ್ಗಾಯಿಸಲು ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಪ್ರಕಟಿಸಿದೆ. ಸುಪ್ರೀಂ ಆದೇಶದಿಂದಾಗಿ ಬಹುತೇಕ ಜನರು ಖುಷಿಗೊಂಡಿದ್ದು, ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಅವರು ದೇವರಿಗೆ ಧನ್ಯವಾದಗಳು! ನಮ್ಮ ಪ್ರಾರ್ಥನೆಗೆ ನೀವು ಉತ್ತರಿಸಿದ್ದೀರಿ!! ಆದರೆ ಇದು ಕೇವಲ ಆರಂಭ… […]

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಹಿಂದೂಗಳ ಓಲೈಕೆಯಲ್ಲಿ ತೊಡಗಿದ ರಾಜಕೀಯ ನಾಯಕರು

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹಾಲಿ ಅಧ್ಯಕ್ಷ , ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ‍ಚುನಾವಣಾ ಪ್ರಚಾರದಲ್ಲಿ ಹಿಂದೂಗಳ ಓಲೈಕೆಯಲ್ಲಿ ತೊಡಗಿದ್ದಾರೆ. ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ (2016ರ ಪ್ರಕಾರ) ಶೇ. 1ರಷ್ಟಿರುವ ಹಿಂದೂ ಸಮುದಾಯವರನ್ನು ರಾಜಕೀಯ ನಾಯಕರು ಆಕರ್ಷಿಸುವ ಪ್ರಯತ್ನದಲ್ಲಿದ್ದಾರೆ. ನಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ ಅಮೆರಿಕದಲ್ಲಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯಕ್ಕಿರುವ ಅಡೆತಡೆಗಳನ್ನು ನಿವಾರಿಸುತ್ತೇವೆ ಎಂದು ಟ್ರಂಪ್ ಪರ […]

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳಿಸಿದ ಶಾರ್ವರಿಗೆ ಆಚಾರ್ಯಾಸ್ ಏಸಿನಲ್ಲಿ ಸನ್ಮಾನ

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ವಾರ್ಷಿಕ ಪರೀಕ್ಷೆಯಲ್ಲಿ 623 ಅಂಕ ಗಳಿಸಿದ ಉಡುಪಿ ಮೂಲದ ಬೆಂಗಳೂರಿನ ಶಾರ್ವರಿ ಪೆಜತ್ತಾಯ ಅವರನ್ನು ಉಡುಪಿಯ ಆಚಾರ್ಯಾಸ್ ಏಸಿನಲ್ಲಿ ಅಭಿನಂದಿಸಲಾಯಿತು. ಉಡುಪಿ ತೆಂಕಪೇಟೆಯ ಆಚಾರ್ಯಾಸ್ ಏಸಿನಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ವಾದಿರಾಜ ಆಚಾರ್ಯ ಅವರು ಶಾರ್ವರಿ ಪೆಜತ್ತಾಯ ಅವರಿಗೆ ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಪ್ರಸ್ತುತ ಏಸ್ ಸಂಸ್ಥೆಯಲ್ಲಿ ಆನಲೈನ್ ಮುಖಾಂತರ ಎಸ್ಸೆಸ್ಸೆಲ್ಸಿಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾರ್ವರಿ ಪೆಜತ್ತಾಯ, ಗರಿಷ್ಟ ಅಂಕಗಳಿಸಲು ತಾನು […]

ಬೆಳೆ ಸಮೀಕ್ಷೆಯಿಂದ ರೈತರಿಗೆ ನಿಖರ ಪರಿಹಾರ ನೀಡಲು ಸಾಧ್ಯ: ಅಪರ ಜಿಲ್ಲಾಧಿಕಾರಿ

ಉಡುಪಿ, ಆಗಸ್ಟ್18: ರೈತರು ಬೆಳೆ ಸಮೀಕ್ಷೆಯಲ್ಲಿ ನೇರವಾಗಿ ಪಾಲ್ಗೊಂಡಾಗ ನಿಖರವಾದ ಅಂಕಿ ಅಂಶಗಳು ಸರ್ಕಾರಕ್ಕೆ ಲಭ್ಯವಾಗಲಿದ್ದು, ವಿವಿಧ ಯೋಜನೆಗಳಾದ ಬೆಳೆ ವಿಮೆ ಪರಿಹಾರ, ಬೆಳೆ ಹಾನಿ ಪರಿಹಾರ, ಬೆಂಬಲ ಬೆಲೆ ಖರೀದಿ, ಬೆಳೆ ಅಂಕಿ ಅಂಶ ಸಮನ್ವಯ, ಪಹಣಿಯಲ್ಲಿ ಬೆಳೆ ದಾಖಲಾತಿ ಮುಂತಾದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನವಾಗಲಿದ್ದು, ಇದರ ಪ್ರಯೋಜನ ರೈತರಿಗೆ ದೊರಕಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು. ಅವರು ಮಂಗಳವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳೆ ಸಮೀಕ್ಷೆ ಆಪ್ ಕುರಿತು ಜಿಲ್ಲೆಯ ರೈತ […]