ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳಿಸಿದ ಶಾರ್ವರಿಗೆ ಆಚಾರ್ಯಾಸ್ ಏಸಿನಲ್ಲಿ ಸನ್ಮಾನ

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ವಾರ್ಷಿಕ ಪರೀಕ್ಷೆಯಲ್ಲಿ 623 ಅಂಕ ಗಳಿಸಿದ ಉಡುಪಿ ಮೂಲದ ಬೆಂಗಳೂರಿನ ಶಾರ್ವರಿ ಪೆಜತ್ತಾಯ ಅವರನ್ನು ಉಡುಪಿಯ ಆಚಾರ್ಯಾಸ್ ಏಸಿನಲ್ಲಿ ಅಭಿನಂದಿಸಲಾಯಿತು.
ಉಡುಪಿ ತೆಂಕಪೇಟೆಯ ಆಚಾರ್ಯಾಸ್ ಏಸಿನಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ವಾದಿರಾಜ ಆಚಾರ್ಯ ಅವರು ಶಾರ್ವರಿ ಪೆಜತ್ತಾಯ ಅವರಿಗೆ ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಸಮ್ಮಾನಿಸಿದರು.
ಪ್ರಸ್ತುತ ಏಸ್ ಸಂಸ್ಥೆಯಲ್ಲಿ ಆನಲೈನ್ ಮುಖಾಂತರ ಎಸ್ಸೆಸ್ಸೆಲ್ಸಿಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾರ್ವರಿ ಪೆಜತ್ತಾಯ, ಗರಿಷ್ಟ ಅಂಕಗಳಿಸಲು ತಾನು ಅನುಸರಿಸಿದ ರೀತಿ ನೀತಿ ನಿಯಮಗಳನ್ನು ತಿಳಿಸಿ, ಈ ನಿಟ್ಟಿನಲ್ಲಿ ತನ್ನ  ಅನುಭವವನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡರು. ಅಲ್ಲದೇ ಆಚಾರ್ಯಸ್ ಏಸಿನ ಸಂಪನ್ಮೂಲ ವ್ಯಕ್ತಿಗಳಿಂದ ರಚಿತವಾದ ಪಠ್ಯಪುಸ್ತಕಗಳು ಹಾಗೂ ಇಲ್ಲಿನ ಆನಲೈನ್ ತರಗತಿಗಳ ಪ್ರಯೋಜನವನ್ನು ವಿಶೇಷವಾಗಿ ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಬೆಂಗಳೂರಿನ ವಾದಿರಾಜ ಪೆಜತ್ತಾಯ, ಸಹನಾ ಪೆಜತ್ತಾಯ, ಆಚಾರ್ಯ ಏಸಿನ ಉಡುಪಿ ವಿಭಾಗದ ನಿರ್ದೇಶಕ ಪಿ. ಲಾತವ್ಯ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಪಿ. ವೃಜನಾಥ ಆಚಾರ್ಯ, ಬ್ರಹ್ಮಾವರ ವಿಭಾಗದ ನಿರ್ದೇಶಕರಾದ ಅಕ್ಷೋಭ್ಯ ಆಚಾರ್ಯ, ಸತೀಶ ಕುಂದರ್, ಛಾಯಾಗ್ರಾಹಕ ಹರೀಶ ಗುಂಡಿಬೈಲು ಉಪಸ್ಥಿತರಿದ್ದರು.