ಉಡುಪಿ: ಇಂದು 219 ಮಂದಿಗೆ ಕೊರೊನಾ ಪಾಸಿಟಿವ್: ಕಾರ್ಕಳದ 35 ವರ್ಷದ ಯುವಕ ಸಹಿತ ನಾಲ್ಕು ಮಂದಿ ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು 218 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6510ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 112 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 71 ಮಂದಿ ಸಹಿತ 183 ಮಂದಿ ಕೊರೊನಾ ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ 3768 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2676 ಸಕ್ರಿಯ ಕೊರೊನಾ ಸೋಂಕಿತರಿದ್ದು, 1396 ಮಂದಿ […]

ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರ ತಂಡದಿಂದ ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರ

ಕಾರ್ಕಳ: ನಿಟ್ಟೆಯ ಎನ್‌ಎಂಎಎಂ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ‘ಸೆಂಟರ್ ಫಾರ್ ಸಿಸ್ಟಮ್ ಡಿಸೈನ್, ಫ್ಯಾಬ್ರಿಕೇಶನ್ & ಟೆಸ್ಟಿಂಗ್’ ಹಾಗೂ ‘ಎನ್‌ಎಂಎಎಂಐಟಿ ಫ್ರೋನಿಯಸ್ ಸೆಂಟರ್ ಫಾರ್ ವೆಲ್ಡಿಂಗ್ ಟೆಕ್ನಾಲಜಿ’ಯ ಸಂಶೋಧಕರ ತಂಡವು ಕಾರ್ಕಳದ ಸ್ಥಳೀಯ ಟಿಂಬರ್ ಉದ್ಯಮದ ನೆರವಿಗಾಗಿ ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ. ಮರದ ಕಾರ್ಖಾನೆಗಳಲ್ಲಿ ಮರದ ಹಲಿಗೆಗಳನ್ನು ಮಾಡುವ ಸಂದರ್ಭದಲ್ಲಿ ಸಾ ಬ್ಲೇಡ್‌ಗಳು ಮುರಿಯುವುದು ಸಾಮಾನ್ಯ. ಈ ಸಂದರ್ಭದಲ್ಲಿ ಕಾರ್ಕಳದ ಉದ್ಯಮಿಯು ಈ ಬ್ಲೇಡ್‌ಗಳನ್ನು ಮಂಗಳೂರಿಗೆ ಕೊಂಡೊಯ್ದು ಸರಿಪಡಿಸುವ […]

ಆಳ್ವಾಸ್ ಕನ್ನಡ ಮಾಧ್ಯಮಕ್ಕೆ ಸತತ 12ನೇ ಬಾರಿಗೆ ಶೇ.100 ಫಲಿತಾಂಶ: 91 ವಿದ್ಯಾರ್ಥಿಗಳಿಗೆ 600ಕ್ಕೂ ಅಧಿಕ ಅಂಕ: ಡಾ. ಮೋಹನ್ ಆಳ್ವ 

ಮೂಡುಬಿದಿರೆ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಸಂಸ್ಥೆಯು ಸತತ 12ನೇ ಬಾರಿಗೆ ಶೇ. 100 ಫಲಿತಾಂಶ ಪಡೆದಿದೆ. ಈ ಬಗ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪರೀಕ್ಷೆ ಬರೆದ 160 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಪ್ರಕೃತಿಪ್ರಿಯ ಮತ್ತು ಸಮ್ಮೇದ್ ಮಹಾವೀರ 622 ಅಂಕಗಳೊಂದಿಗೆ ಸಂಸ್ಥೆಯಲ್ಲಿ ಅತ್ಯಧಿಕ ಅಂಕ ಪಡೆದಿದ್ದಾರೆ. ಕಾವ್ಯ […]

ಉಡುಪಿಯ ಆಚಾರ್ಯ ಏಸ್ ಸಂಸ್ಥೆಯಲ್ಲಿ ತರಬೇತಿ ಪಡೆದ ಶಾರ್ವರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ

ಉಡುಪಿ: ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಹೆಸರುವಾಸಿಯಾಗಿರುವ ಉಡುಪಿಯ ಆಚಾರ್ಯ ಏಸ್ ತರಬೇತಿ ಸಂಸ್ಥೆಯ ಆನಲೈನ್ ಮುಖಾಂತರ ತರಬೇತಿ ಪಡೆದ ಬೆಂಗಳೂರಿನ ಜಯನಗರದ ಕಾರ್ಮೆಲ್ ಕಾನ್ವೆಂಟ್ ವಿದ್ಯಾಲಯದ ಶಾರ್ವರಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕವನ್ನು ಪಡೆದಿದ್ದಾರೆ. ಶಾರ್ವರಿ ಉಡುಪಿ ಮೂಲದ ವಾದಿರಾಜ ಪೆಜತ್ತಾಯ ಹಾಗೂ ಸಹನಾ ಪೆಜತ್ತಾಯ ಅವರ ಸುಪುತ್ರಿ. ಅವರು ಉಡುಪಿಯ ಆಚಾರ್ಯ ಏಸ್ ರೂಪಿಸಿದ ಪಠ್ಯ ಪುಸ್ತಕ, ಕಾರ್ಯಾಗಾರ ಕ್ರಾಶ್ ಕೋರ್ಸ್ ಹಾಗೂ ಆನ್ ಲೈನ್ ತರಬೇತಿ ಪಡೆದಿದ್ದರು. ಆಚಾರ್ಯ ಏಸ್ ಗೆ […]

ರಷ್ಯಾದಲ್ಲಿ ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿ: ಅಧ್ಯಕ್ಷ ಪುಟಿನ್ ಘೋಷಣೆ

ರಷ್ಯಾ: ರಷ್ಯಾದಲ್ಲಿ ವಿಶ್ವದ ಮೊದಲ ಕೊರೊನಾ ಲಸಿಕೆ ನೋಂದಣಿಯಾಗಿದ್ದು, ಇದಕ್ಕೆ ಆರೋಗ್ಯ ಇಲಾಖೆಯ ಅನುಮೋದನೆಯೂ ಸಿಕ್ಕಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಣೆ ಮಾಡಿದ್ದಾರೆ. ರಷ್ಯಾದ ಗಮಲೆ ಸಂಶೋಧನಾ ಸಂಸ್ಥೆ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಸತತ ಎರಡು ತಿಂಗಳ ಪ್ರಯೋಗದ ಬಳಿಕ ಲಸಿಕೆಯನ್ನು ಸಂಶೋಧಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ಮಗಳಿಗೆ ಮೊದಲ ಲಸಿಕೆ ನೀಡಲಾಗಿದೆ. ಆದರೆ ಇನ್ನೂ ಕೂಡ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಅಕ್ಟೋಬರ್ ನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ರಷ್ಯಾ ಲಸಿಕೆಗೆ ಆಕ್ಷೇಪ: […]