ತುಳುನಾಡು ಒಕ್ಕೂಟ ಕೆರ್ವಾಶೆ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ: ತುಳುನಾಡು ಒಕ್ಕೂಟ ಕೆರ್ವಾಶೆ ಘಟಕ ರಚನೆಯ ಸಭೆಯು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಸಂದೀಪ್ ದೇವಾಡಿಗ ಅಧ್ಯಕ್ಷತೆಯಲ್ಲಿ ಕೆರ್ವಾಶೆಯ ಗಣಪತಿ ಮಂದಿರದಲ್ಲಿ ನಡೆಯಿತು. ತುಳುನಾಡು ಒಕ್ಕೂಟದ ಸಂಸ್ಥಾಪಕರಾದ ಶೈಲೇಶ್ ಅರ್. ಜೆ. ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತಾಲೂಕು ತುಳುನಾಡು ಒಕ್ಕೂಟದ ಅಧ್ಯಕ್ಷರಾದ ವಿನ್ಸೆಂಟ್ ಲೋಬೋ ಮಾತನಾಡಿ ತುಳು ಭಾಷೆಯ ಮಾನ್ಯತೆಗಾಗಿ ತಾಳ್ಮೆಯ ಸುಧೀರ್ಘ ಹೋರಾಟಕ್ಕೆ ತುಳುವರು ಸಜ್ಜಾಗಬೇಕು ಎಂದು ತಿಳಿಸಿದರು. ತುಳುನಾಡು ಒಕ್ಕೂಟದ ಕಾನೂನು ಘಟಕದ ಅದ್ಯಕ್ಷರಾದ ನ್ಯಾಯವಾದಿ ಪ್ರಶಾಂತ್. ಎಂ. ಮಾತನಾಡಿ ತುಳುನಾಡು ರಾಜ್ಯ ರಚನೆಯೇ […]

ರಾಜ್ಯದಲ್ಲಿ ಮಳೆಯಿಂದ ಪ್ರಾಥಮಿಕವಾಗಿ ಅಂದಾಜು 4 ಸಾವಿರ ಕೋಟಿ ಹಾನಿ: ಪ್ರಧಾನಿ ಮೋದಿಗೆ ವರದಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ ಪ್ರಾಥಮಿಕ ಹಂತದಲ್ಲಿ 4000 ಸಾವಿರ ಕೋಟಿ ಹಾನಿ ಸಂಭವಿಸಿದೆಂದು ಅಂದಾಜಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಮಳೆ ಹಾಗೂ ನೆರೆ ಪೀಡಿತ ಪ್ರದೇಶಗಳಿಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್ ಸಭೆ ಬಳಿಕ ಮಾಹಿತಿ ನೀಡಿದರು. ನೆರೆಪೀಡಿತ ಪ್ರದೇಶಗಳ ಬಗ್ಗೆ ಪ್ರಧಾನಿ ಮಾಹಿತಿ ಪಡೆದಿದ್ದಾರೆ. ಅತಿ ಹೆಚ್ಚು ಮಳೆಯಾಗಿರುವ ಬಗ್ಗೆ ಪ್ರಧಾನಿಯ ಗಮನಕ್ಕೆ ತಂದಿದ್ದೇವೆ. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಇದರಿಂದ ನದಿಗಳು ಉಕ್ಕಿ […]

ಯಕ್ಷಗಾನ ಕಲಾವಿದರ ಮಧ್ಯೆ ತಾರತಮ್ಯ ಮಾಡ್ಬೇಡಿ: ಖಾಸಗಿ ಯಕ್ಷಗಾನ ಕಲಾವಿದರಿಗೂ ವೇತನ ಸೌಲಭ್ಯ ನೀಡಿ: ಖಾಸಗಿ ಯಕ್ಷಗಾನ ಕಲಾವಿದರ ಒಕ್ಕೂಟ ಆಗ್ರಹ

ಉಡುಪಿ: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ದತ್ತಿ ಇಲಾಖೆಯ ಮೇಳಗಳ ಕಲಾವಿದರಿಗೆ ರಾಜ್ಯ ಸರ್ಕಾರ ಸಂಪೂರ್ಣ ವೇತನವನ್ನು ನೆರವಿನ ರೂಪದಲ್ಲಿ ನೀಡಿರುವುದು ಅಭಿನಂದನೀಯ. ಆದರೆ ಈ ಸೌಲಭ್ಯದಿಂದ 15 ತೆಂಕು ಬಡಗು ಖಾಸಗಿ‌ ಮೇಳಗಳ ಸುಮಾರು 1500 ಕ್ಕೂ ಹೆಚ್ಚಿನ ಕಲಾವಿದರನ್ನು ಹೊರಗಿಟ್ಟು ಅನ್ಯಾಯ ಮಾಡಿದೆ ಎಂದು ಉಡುಪಿ ಖಾಸಗಿ ಯಕ್ಷಗಾನ ತೆಂಕುಬಡಗು ಮೇಳಗಳ ಕಲಾವಿದರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ಇಂಥಾ ಕೊರೊನಾ ಕಷ್ಟ ಕಾಲದಲ್ಲಿ ಸರ್ಕಾರ ಕಲಾವಿದರ ಮಧ್ಯೆ ತಾರತಮ್ಯ ಮಾಡುವುದು ಸರಿಯಲ್ಲ. ಈ […]

ಕರಾವಳಿಯಾದ್ಯಂತ ಆಗಸ್ಟ್ 13ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ: ರೆಡ್ ಅಲರ್ಟ್ ಮುಂದುವರಿಕೆ

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಆ.13ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ‌ ನೀಡಿದೆ. ಮುಂಗಾರು ಬಿರುಸುಗೊಂಡಿರುವುದರಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ಗರಿಷ್ಠ 4 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುತ್ತಿದ್ದು, ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, […]

ಉಡುಪಿ: ಕಸದ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

ಉಡುಪಿ: ಕಸದ ಬುಟ್ಟಿಗೆ ನವಜಾತ ಶಿಶುವನ್ನು ಎಸೆದು ಹೋದ ಘಟನೆಯೊಂದು ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರಿನ ಮಾಂಸಹಾರಿ ಹೊಟೇಲ್ ಬಳಿ ನಡೆದಿದೆ. ಇಂದು ಬೆಳಿಗ್ಗೆ ನಗರ ಸಭೆಯ ಸ್ವಚ್ಛತಾ ಸಿಬ್ಬಂದಿ ಹೋಟೆಲ್ ಎದುರಿನ ಕಸದ ಬುಟ್ಟಿಯ ತ್ಯಾಜ್ಯದ ಸಂಗ್ರಹ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ಕಸ ತುಂಬಿದ್ದ ಪೈಂಟ್ ಡಬ್ಬಿಯಲ್ಲಿ ನವಜಾತ ಶಿಶು ಪತ್ತೆಯಾಗಿದ್ದು, ನಗರಸಭೆಯ ಸಿಬ್ಬಂದಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದೊಂದಿಗೆ ಅಲ್ಲೇ ಇರುವ ಮಕ್ಕಳ ಆಸ್ಪತ್ರೆಗೆ ಮಗವನ್ನು ದಾಖಲಿಸಿದ್ದಾರೆ. […]