ಕಾರ್ಕಳ: ತುಳುನಾಡು ಒಕ್ಕೂಟ ಕೆರ್ವಾಶೆ ಘಟಕ ರಚನೆಯ ಸಭೆಯು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಸಂದೀಪ್ ದೇವಾಡಿಗ ಅಧ್ಯಕ್ಷತೆಯಲ್ಲಿ ಕೆರ್ವಾಶೆಯ ಗಣಪತಿ ಮಂದಿರದಲ್ಲಿ ನಡೆಯಿತು.
ತುಳುನಾಡು ಒಕ್ಕೂಟದ ಸಂಸ್ಥಾಪಕರಾದ ಶೈಲೇಶ್ ಅರ್. ಜೆ. ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ತಾಲೂಕು ತುಳುನಾಡು ಒಕ್ಕೂಟದ ಅಧ್ಯಕ್ಷರಾದ ವಿನ್ಸೆಂಟ್ ಲೋಬೋ ಮಾತನಾಡಿ ತುಳು ಭಾಷೆಯ ಮಾನ್ಯತೆಗಾಗಿ ತಾಳ್ಮೆಯ ಸುಧೀರ್ಘ ಹೋರಾಟಕ್ಕೆ ತುಳುವರು ಸಜ್ಜಾಗಬೇಕು ಎಂದು ತಿಳಿಸಿದರು.
ತುಳುನಾಡು ಒಕ್ಕೂಟದ ಕಾನೂನು ಘಟಕದ ಅದ್ಯಕ್ಷರಾದ ನ್ಯಾಯವಾದಿ ಪ್ರಶಾಂತ್. ಎಂ. ಮಾತನಾಡಿ ತುಳುನಾಡು ರಾಜ್ಯ ರಚನೆಯೇ ತುಳುನಾಡು ಒಕ್ಕೂಟದ ಅತ್ಯುನ್ನತ ಧ್ಯೇಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ನವಿನ್ ಪೂಜಾರಿ ಅಡ್ಯನಬೈಲ್, ಸಂದೀಪ್ ದೇವಾಡಿಗ, ಜಯರಾಮ್ ಬಂಗೇರ, ಶಶಿಧರ್ ಕುಲಾಲ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೆರ್ವಾಶೆ ಘಟಕವನ್ನು ರಚನೆ ಮಾಡಲಾಯಿತು.