ಉಡುಪಿ ಕೃಷ್ಣಮಠದಲ್ಲಿ ಸೆ. 10, 11ರಂದು ಕೃಷ್ಣಜನ್ಮಾಷ್ಟಮಿ: ಕೊರೊನಾ ಹಿನ್ನೆಲೆ ಸಾರ್ವಜನಿಕವಾಗಿ ಆಚರಣೆ ಇಲ್ಲ

ಉಡುಪಿ: ಇಲ್ಲಿನ ಶ್ರೀಕೃಷ್ಣಮಠದಲ್ಲಿ ಸೌರಮಾನ ಪಂಚಾಂಗದ ಪ್ರಕಾರ ಕೃಷ್ಣಜನ್ಮಾಷ್ಟಮಿ ಆಚರಣೆ ಮಾಡುವುದರಿಂದ ಆಗಸ್ಟ್ 11 ಮತ್ತು 12 ರಂದು ಉಡುಪಿಯಲ್ಲಿ ಅಷ್ಟಮಿಯ ಸಂಭ್ರಮ ಇರುವುದಿಲ್ಲ. ಬದಲಾಗಿ ಸೆಪ್ಟೆಂಬರ್‌ 10ರಂದು ಕೃಷ್ಣಜನ್ಮಾಷ್ಟಮಿ ಹಾಗೂ ಸೆ. 11ರಂದು ಶ್ರೀಕೃಷ್ಣ ಲೀಲೋತ್ಸವ ಆಚರಣೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ. ದೇಶದಾದ್ಯಂತ ಆ. 11ರಂದು ಕೃಷ್ಣಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತದೆ. ಆದರೆ ಇದು ಚಾಂದ್ರಮಾನ ಪಂಚಾಂಗದ ಪ್ರಕಾರ ಬರುವ ಕೃಷ್ಣಾಷ್ಟಮಿ ಆಗಿರುವುದರಿಂದ ಕೃಷ್ಣಮಠದಲ್ಲಿ ಇದನ್ನು ಆಚರಣೆ ಮಾಡುವುದಿಲ್ಲ. ಕೃಷ್ಣಮಠದಲ್ಲಿ ಸೆ. 10ರಂದು ಮಧ್ಯರಾತ್ರಿ […]

ಉಡುಪಿ: ಇಂದು 282 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಇಂದು 282 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6201ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 48 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 48 ಮಂದಿ ಸಹಿತ 97 ಮಂದಿ  ಕೊರೊನಾ ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ 3444 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2697 ಸಕ್ರಿಯ ಕೊರೊನಾ ಸೋಂಕಿತರಿದ್ದು, 1412 ಮಂದಿ […]

ಉಡುಪಿ ಜಿಲ್ಲೆಯಾದ್ಯಂತ ಭಾರೀ ವರ್ಷಾಧಾರೆ: ಉಕ್ಕಿ ಹರಿಯುತ್ತಿರುವ ಸ್ವರ್ಣ, ಪಾಪನಾಶಿನಿ ನದಿಗಳು: ನದಿ ತೀರದ ಪ್ರದೇಶದಲ್ಲಿ ನೆರೆಯ ಭೀತಿ

ಉಡುಪಿ: ಜಿಲ್ಲೆಯಾದ್ಯಂತ ಕಳೆದ ಐದು ದಿನದಿಂದ ಭಾರೀ ವರ್ಷಾಧಾರೆಯಾಗುತ್ತಿದ್ದು, ಇದರಿಂದ ನದಿ ಪಾತ್ರದ ಪ್ರದೇಶಗಳು ಮುಳುಗಡೆಯಾಗಿವೆ. ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿ ಎದುರಾಗಿದೆ. ಪಾಪನಾಶಿನಿ ನದಿಗೆ ಹೊಂದಿಕೊಂಡಿರುವ ಉದ್ಯಾವರ, ಮಟ್ಟು ಪ್ರದೇಶದಲ್ಲಿ ನೆರೆ ಬಂದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಉದ್ಯಾವರದ ಮಠದ ಕುದ್ರುವಿನ ಅದಮಾರು ಮಠಕ್ಕೆ ಸೇರಿದ ಜಮೀನಿನಲ್ಲಿದ್ದ 21 ಹಸುಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ದೋಣೆ ಹಾಗೂ ಟೆಂಪೋದ ಮೂಲಕ ಹಸುಗಳನ್ನು ಸಾಗಿಸಲಾಗಿದೆ. ಸ್ವರ್ಣನದಿಯೂ ಅಪಾಯದ […]

ಸಾಮಾಜಿಕ ಜಾಲತಾಣದಲ್ಲಿ ಹೃದಯ ಗೆದ್ದಿತು ಈ ಯುವಕನ ಬಣ್ಣದ ಲೋಕ: ಬಡತನದ ನಡುವೆ ಅರಳಿತು ಶ್ರೀಮಂತ ಚಿತ್ರಕಲೆ!

ಸೌಂದರ್ಯ ಎಲ್ಲರ ಕಣ್ಣನ್ನು ಗೆಲ್ಲುತ್ತೆ. ಪ್ರತಿಭೆ ಎಲ್ಲರ ಹೃದಯವನ್ನು ಗೆಲ್ಲುತ್ತೆ” ಎಂಬ ಮಾತಿದೆ. ಬಡವನೇ ಇರಲಿ, ಶ್ರೀಮಂತನೇ ಆಗಲಿ ಯಾರಲ್ಲಿ ಕಲಾಭಿವ್ಯಕ್ತಿತ್ವ ಇರುತ್ತೋ ಅಂತಹ ಪ್ರತಿ‌ಭೆಯನ್ನು ಸಮಾಜ ಗುರುತಿಸಿಯೇ ಗುರುತಿಸುತ್ತೆ. ಆ ಸಾಲಿಗೆ ವಿದ್ಯಾನಂದ (ವಿಘ್ನೇಶ್ ಕೆ.ಎಸ್) ಎಂಬ ಚಿತ್ರಕಲಾ ಪ್ರತಿಭೆ ಹೊರತಲ್ಲ  ಮನೆಯೊಳಗೆ ಕಡುಬಡತನದ ಬೇಗೆ ಇದ್ದರೂ ತನ್ನ ಕೈಚಳಕದಿಂದ ಮೂಡಿ ಬರುತ್ತಿರುವ ಈತನ ಚಿತ್ರಕಲೆಗೆ ಯಾವುದೇ ಬೇಗೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ತಾನು ಬಿಡಿಸಿದ ಕಲಾಚಿತ್ರಗಳನ್ನು ಹರಿಯಬಿಟ್ಟು. ಅಪಾರ ಕಲಾಭಿಮಾನಿಗಳ ಮೆಚ್ಚುಗೆಯನ್ನು ಸಂಪಾದಿಸಿದ್ದಾನೆ. ವಿಘ್ನೇಶ್. […]

ಲಘು ಯುದ್ಧ ಹೆಲಿಕಾಪ್ಟರ್‌, ಬಂದೂಕು ಸೇರಿದಂತೆ 101 ರಕ್ಷಣಾ ಉಪಕರಣಗಳ ಆಮದಿನ ಮೇಲೆ ನಿರ್ಬಂಧ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮ ನಿರ್ಭರ ಭಾರತ’ ಕರೆಯಿಂದ ಪ್ರೇರಣೆಗೊಂಡು ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಬಂದೂಕು, ರೇಡಾರ್, ಲಘು ಯುದ್ಧ ಹೆಲಿಕಾಪ್ಟರ್‌ಗಳು ಸೇರಿದಂತೆ 101 ರಕ್ಷಣಾ ಉಪಕರಣಗಳ ಆಮದಿನ ಮೇಲೆ ನಿರ್ಬಂಧ ಹೇರಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಇಂದು ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ರಕ್ಷಣಾ ಉಪಕರಣಗಳ ದೇಶೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಹಾಗೂ ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ […]