ಕಾರ್ಕಳದಲ್ಲಿ 10 ಕೋಟಿ ವೆಚ್ಚದಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ನಿರ್ಮಾಣ: ಸಚಿವ ಆರ್ ಅಶೋಕ್
ಉಡುಪಿ: ಕಾರ್ಕಳದಲ್ಲಿ ವಿಪತ್ತು ನಿರ್ವಹಣಾ ಕೇಂದ್ರ ನಿರ್ಮಾಣ ಮಾಡುವಂತೆ ಕಾರ್ಕಳ ಶಾಸಕರು ವಿನಂತಿ ಮಾಡಿದ್ದಾರೆ. ಅದಕ್ಕೆ ಕೂಡಲೇ 10 ಕೋಟಿ ರೂ. ಬಿಡುಗಡೆ ಮಾಡುತ್ತೇನೆ. ಪ್ರವಾಹ ಬಂದಂತಹ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಗೆ ಉಳಿದುಕೊಳ್ಳಲು ಅನುಕೂಲವಾಗಲು ಈ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹಾಗೆ ಊಟ, ಉಪಹಾರಕ್ಕೆ ಅಡುಗೆ ಕೋಣೆ, ವೈದ್ಯಕೀಯ ಕೊಠಡಿಯನ್ನು ಒಳಗೊಂಡಿರುತ್ತದೆ. ಇದನ್ನು ಮಳೆಗಾಲದಲ್ಲಿ ನೆರೆ ಸಂತ್ರಸ್ತರಿಗಾಗಿ ಬಳಸಲಾಗುತ್ತದೆ. ಉಳಿದ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ ಎಂದು […]
ಸ್ಕೌಟಿಂಗ್ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಷ್ಟು ಸಂಗತಿಗಳು !
ವನ್ಸ್ ಎ ಸ್ಕೌಟ್- ಆಲ್ವೇಸ್ ಎ ಸ್ಕೌಟ್- ಇದು ಪ್ರತಿಯೊಬ್ಬ ಸ್ಕೌಟ್ ಕೂಡ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುವ ಮಾತು. ಇದರರ್ಥ- ಒಮ್ಮೆ ಸ್ಕೌಟ್/ ಗೈಡ್ ಆಗಿ ಪ್ರತಿಜ್ಞೆ ಸ್ವೀಕರಿಸಿದ ಮೇಲೆ ಸದಾ ಕಾಲಕ್ಕೂ ಸ್ಕೌಟ್/ ಗೈಡ್ ಆಗಿಯೇ ಇರುವುದು ಅಥವಾ ಇರುತ್ತಾರೆ ಎಂಬುದು. ಏಕೆಂದರೆ ಸ್ಕೌಟಿಂಗ್ ಒಂದು ಜೀವನ ವಿಧಾನ! ಸ್ಕೌಟಿಂಗ್ ನಲ್ಲಿ ಜನರು ಮತ್ತು ಪ್ರಕೃತಿಯೊಂದಿಗೆ ಬೆರೆತು, ಅರಿತು ಕೆಲಸ ಮಾಡಬೇಕಾಗುತ್ತದೆ. ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಹಸಿ, ಸ್ವಾವಲಂಬಿ, ಧೈರ್ಯಶಾಲಿಯಾಗಿ ಜೀವನ ನಡೆಸುವುದಕ್ಕೆ ಇದು ಪ್ರೇರಣೆ ನೀಡುತ್ತದೆ. […]
ರಾಮಮಂದಿರ ಶಿಲಾನ್ಯಾಸದ ಪ್ರಯುಕ್ತ ನರಸಿಂಗೆ ಶ್ರೀ ನರಸಿಂಹ ದೇವಳದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ
ಉಡುಪಿ: ರಾಮಮಂದಿರದ ಶಿಲಾನ್ಯಾಸದ ಪ್ರಯುಕ್ತ ಅ.5 ರಂದು ನರಸಿಂಗೆ ಶ್ರೀ ನರಸಿಂಹ ದೇವಳದಲ್ಲಿ ಬಿಲ್ವ, ಸೀತಾಫಲ , ಬಾದಾಮಿ, ಅಶೋಕದ ಸಸಿಗಳನ್ನು ನಟ್ಟು ಶ್ರೀರಾಮಚಂದ್ರ ದೇವರ ಧ್ಯಾನ ಮಾಡಲಾಯಿತು. ಮಂದಿರ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳ್ಳಲಿ ಪ್ರಾರ್ಥಿಸಲಾಯಿತು. ಸಸಿಗಳನ್ನು ನಟ್ಟು ಪರಿಸರ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಆಗಸ್ಟ್ 10ಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟ
ಬೆಂಗಳೂರು: 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸೋಮವಾರ (ಆಗಸ್ಟ್ 10) ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಪ್ರೌಢಶಾಲಾ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶ ಬರಲಿದೆ.
ಪ್ರವಾಹ ನಿರ್ವಹಣೆ ಉಡುಪಿ ಜಿಲ್ಲೆಗೆ 5 ಕೋಟಿ ಬಿಡುಗಡೆ: ಪಡುಬಿದ್ರಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ: ಸಚಿವ ಆರ್. ಅಶೋಕ್
ಪಡುಬಿದ್ರಿ: ಇಲ್ಲಿನ ಕಡಲ ತೀರದಲ್ಲಿ ಪ್ರತಿ ಬಾರಿ ಮಳೆಗಾಲದಲ್ಲಿ ಕಡಲ್ಕೊರತೆ ಉಂಟಾಗುತ್ತಿದ್ದು, ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಲು ನೀಲಾನಕ್ಷೆ ಸಿದ್ಧಪಡಿಸಿ ಕಳುಹಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಅವರು ನೀಲಾನಕ್ಷೆ ಸಿದ್ಧಪಡಿಸಿ ಪ್ರಸ್ತಾವನೆ ಕೊಟ್ಟ ಕೂಡಲೇ ಹಣ ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಕಾಪು ತಾಲ್ಲೂಕಿನ ಪಡುಬಿದ್ರಿ ಕಡಲ ತೀರದಲ್ಲಿ ಉಂಟಾಗಿರುವ ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ. ಕೇಂದ್ರ ಸರ್ಕಾರದ ಎನ್ ಡಿಆರ್ ಎಫ್ ನಿಧಿಯಲ್ಲಿ […]