ಏರ್ ಇಂಡಿಯಾ ವಿಮಾನ ಪತನ: ಸಾವಿನ ಸಂಖ್ಯೆ 8ಕ್ಕೆ ಏರಿಕೆ, 45 ಮಂದಿಯ ಸ್ಥಿತಿ ಗಂಭೀರ

ಕಲ್ಲಿಕೋಟೆ: ಇಲ್ಲಿನ ಕೋಯಿಕೋಡ್ ನ ಕರಿಪುರ್ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಯಾಣಿಕರ ಅಧಿಕೃತ ಮಾಹಿತಿ ಬಿಡುಗಡೆಗೊಳಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಕಾರ ಪತನಗೊಂಡ ವಿಮಾನದಲ್ಲಿ 10 ಚಿಕ್ಕ ಮಕ್ಕಳು, ಇಬ್ಬರು ಪೈಲಟ್ ಹಾಗೂ ಐದು ಮಂದಿ ಸಿಬ್ಬಂದಿ ಇದ್ದರು. ಹಾಗೆ ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳು ಈ ವಿಮಾನದಲ್ಲಿ ಇದ್ದಳು ಎಂದು ತಿಳಿದುಬಂದಿದೆ. ಕೋವಿಡ್ ನಿಂದಾಗಿ ಸಂಕಷ್ಟದಲ್ಲಿದ್ದ ಜನರನ್ನು ಭಾರತ್ ಮಿಷನ್ ನಡಿಯಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ […]

ಕೇರಳದಲ್ಲಿ ಏರ್ ಇಂಡಿಯಾ ವಿಮಾನ ಪತನ: ಪೈಲಟ್ ಸಹಿತ ಮೂವರ ದುರ್ಮರಣ

ಕಲ್ಲಿಕೋಟೆ: ದುಬೈನಿಂದ ಕೇರಳದ ಕ್ಯಾಲಿಕಟ್ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಕಲ್ಲಿಕೋಟೆಯ ಕೋಯಿಕೋಡ್ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾನೆ. ಹಲವಾರು ಮಂದಿಗೆ ಗಾಯ ಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಲ್ಯಾಡಿಂಗ್ ವೇಳೆ ರನ್ ವೇ ಯಲ್ಲಿ ಜಾರಿದ ಪರಿಣಾಮ ದುರ್ಘಟನೆ ನಡೆದಿದೆ. ವಿಮಾನ ತುಂಡಾಗಿ ಎರಡು ಭಾಗವಾಗಿದೆ. ವಿಮಾನದಲ್ಲಿ 174 ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಆರು ಮಂದಿ ಸಿಬ್ಬಂದಿ ಇದ್ದರು ಎನ್ನಲಾಗಿದೆ.

ಕುಂದಾಪುರ: ಭಾರಿ ಮಳೆಗೆ ಅಪಾರ ಹಾನಿ: ಗ್ರಾಮಸ್ಥರ ಮನೆಗಳಿಗೆ ಅಧಿಕಾರಿಗಳ ಭೇಟಿ

ಕುಂದಾಪುರ: ತಾಲ್ಲೂಕಿನ ಕನ್ಯಾನ  ಗ್ರಾಮದ ಸರೋಜ ಅವರ ವಾಸ್ತವ್ಯದ ಮನೆಗೆ ಹಾನಿಯಾಗಿದ್ದು 10,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಆಲೂರು ಗ್ರಾಮದ ವಿಜಯ್ ಶೆಟ್ಟಿ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿದ್ದು 10,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಆಲೂರು ಗ್ರಾಮದ ಸುಗಂಧಿ ಶೆಡ್ತಿಯವರ ಮನೆಗೆ ಹಾನಿಯಾಗಿದ್ದು 8,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಬೀಜಾಡಿ ಗ್ರಾಮದ ಶಾಂತರವರ ಮನೆ ಭಾಗಶಃ ಹಾನಿಯಾಗಿದ್ದು 50,000 ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಗುರುವಾರ ಸಂಜೆಯವರೆಗೆ ವಿಶ್ರಾಂತಿ ಪಡೆದುಕೊಂಡಿದ್ದ ಮಳೆ, ಸಂಜೆಯ ಬಳಿಕ ಮತ್ತೆ ಪ್ರಾರಂಭವಾಗಿದೆ. […]

ಕಣ್ತೆರೆದು ನೋಡಿ ಸರ್ಕಾರದ ಕೆಲಸ ಕಾಣುತ್ತೆ, ಹಳದಿ ಕಣ್ಣಿನಿಂದ ನೋಡಬೇಡಿ: ಸಚಿವ ಆರ್. ಅಶೋಕ್ ಟಾಂಗ್

ಉಡುಪಿ: ವಿರೋಧ ಪಕ್ಷದವರು ಕಣ್ಣುಬಿಟ್ಟು ನೋಡಿದರೆ ಸರ್ಕಾರದ ಕೆಲಸಗಳು ಗೊತ್ತಾಗುತ್ತದೆ. ಹಳದಿ ಕಣ್ಣಿನಿಂದ ನೋಡಿದರೆ ಸರ್ಕಾರದ ಅಭಿವೃದ್ಧಿ ಕೆಲಸಕಾರ್ಯ ಕಾಣುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಇಂದು ಉಡುಪಿಯಲ್ಲಿ ‘ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ’ ಎಂಬ ವಿರೋಧ ಪಕ್ಷದ ಟೀಕೆಗೆ ತಿರುಗೇಟು ನೀಡಿದರು. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಸನ್ಮಾನದಲ್ಲಿಯೇ ಕಾಲ ಕಳೆಯುತ್ತಿದ್ದು, ಇನ್ನೂ ಫೀಲ್ಡ್ ಗೆ ಇಳಿದಿಲ್ಲ. ಸಿದ್ದರಾಮಯ್ಯ ಕೋವಿಡ್ ನಿಂದಾಗಿ ಆಸ್ಪತ್ರೆಯಲ್ಲಿದ್ದಾರೆ. ಹಾಗಾಗಿ ವಿರೋಧ ಪಕ್ಷ ಇದೆಯೋ ಇಲ್ಲವೋ ಎನ್ನುವುದು ಅವರಿಗೆ […]

ಉಡುಪಿ: 245 ಮಂದಿಗೆ ಕೊರೊನಾ ಪಾಸಿಟಿವ್: ಐದು ಮಂದಿ ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು 245 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5605 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 57 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 44 ಮಂದಿ ಸಹಿತ 101 ಮಂದಿ ಕೊರೊನಾ ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ 3258 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2292 ಸಕ್ರಿಯ ಕೊರೊನಾ ಸೋಂಕಿತರಿದ್ದು, 1148 […]