ರಾಮಮಂದಿರ ಭೂಮಿಪೂಜೆಯ ಹಿನ್ನೆಲೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳಿಂದ ಲಕ್ಷಾತುಳಸಿ ಅರ್ಚನೆ

ಉಡುಪಿ: ಬ್ರಹ್ಮಾವರ ತಾಲ್ಲೂಕಿನ ನೀಲಾವರ ಗೋಶಾಲೆಯ ಶಾಖಾ ಮಠದಲ್ಲಿ ಚಾತುರ್ಮಾಸ್ಯದಲ್ಲಿರುವ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ರಾಮಮಂದಿರ ಭೂಮಿಪೂಜೆ ಸಂದರ್ಭದಲ್ಲಿ  ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ವಿಶೇಷ ಲಕ್ಷಾತುಳಸಿ ಅರ್ಚನೆಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿಯ ಭಾವಚಿತ್ರಕ್ಕೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಯೋಧ್ಯೆ ರಾಮಮಂದಿರದ ಭೂಮಿಪೂಜೆಗೆ ಶುಭಹಾರೈಸಿದ ಪ್ರಮುಖರು ಇಲ್ಲಿದ್ದಾರೆ.

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಚಂದದ ಮಂದಿರ ನಿರ್ಮಾಣಕ್ಕಿಂದು ಭೂಮಿ ಪೂಜೆಯ ಸಂಭ್ರಮ. ಈ ಸುಮುಹೂರ್ತಕ್ಕೆ ವಿವಿಧ ಗಣ್ಯರು ಉಡುಪಿXPRESS ಮೂಲಕ ಶುಭಹಾರೈಸಿದ್ದಾರೆ.        

ಅವನ ಜನ್ಮಭೂಮಿಯಲ್ಲೇ ಅವನಿಗೊಂದು ಮಂದಿರ!: ಅಯೋಧ್ಯೆ-ರಾಮನ ಕುರಿತು ಟಿ ದೇವಿದಾಸ್ ಬರೆದ ಸ್ವಾರಸ್ಯಕರ ಬರಹ

  ಸಮಸ್ತ ಭಾರತೀಯರ ಪೂರ್ವಪುಣ್ಯಕೃತ ವಿಶೇಷ ಸೌಭಾಗ್ಯವೆಂದರೆ ಇದೇ ಇರಬೇಕು! ಸಮಸ್ತ, ಸಮಗ್ರ ಭಾರತದ ಮನೋ ಆರಾಧ್ಯಮೂರ್ತಿ ಪ್ರಭು ಶ್ರೀರಾಮಚಂದ್ರನಿಗೆ ಅವನದೇ ಜನ್ಮಭೂಮಿಯಲ್ಲಿ ವಿಶ್ವವಿಖ್ಯಾತ ಭವ್ಯ ದಿವ್ಯ ಮಂದಿರ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ಆಗುತ್ತಿರುವುದು ಮೈಮನಗಳಲ್ಲಿ ಪರಮಾನಂದದ ಅನುಭೂತಿಯನ್ನು ನೀಡುತ್ತಿದೆ. 500 ವರ್ಷಗಳ ಹಿಂದೆ ರಾಮ ಮಂದಿರವನ್ನು ಕೆಡವಿದರು. ಆದರೆ ಯಾರಿಗೂ ರಾಮ ಭಕ್ತಿಯನ್ನು ಕೆಡವಲು ಸಾಧ್ಯವಾಗಲೇ ಇಲ್ಲ. ಅದಕ್ಕೆ ಸಾವಿಲ್ಲ. ಯಾಕೆಂದರೆ ಅದು ಮನುಜಾ ಕೃಪಾಸಿತ ತಾರಕಮಂತ್ರ. ರಾಮಮಂದಿರದ ಕನಸು ಮತ್ತು ಕಲ್ಪನೆ ಗುಪ್ತಗಾಮಿನಿಯಾಗೇ ಭಾರತೀಯರಲ್ಲಿ […]