ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ಉಡುಪಿ: ಪ್ರಸ್ತಕ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೇ 35 ರಷ್ಟು ಅಂಕ ಪಡೆದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಡಿಪ್ಲೋಮಾ ಪ್ರವೇಶ ಮಾಡುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಅಥವಾ ಸಮೀಪ ಇರುವ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ “ಸಹಾಯಕೇಂದ್ರ’’ ದಲ್ಲಿ ಪ್ರಾಂಶುಪಾಲರ, ಬೋಧಕ ಸಿಬ್ಬಂದಿಯವರ ನೇತೃತ್ವದಲ್ಲಿ ಆನ್ ಲೈನ್ ನಾನ್-ಇಂಟರಾಕ್ಟೀವ್ ಕೌನ್ಸಿಲಿಂಗ್ ಮೂಲಕ ಆಗಸ್ಟ್ 6 ರಿಂದ ಅರ್ಜಿ ಸಲ್ಲಿಸಲು […]
ರಾಮಮಂದಿರ ಭೂಮಿಪೂಜೆ ಪ್ರಯುಕ್ತ ಪಲಿಮಾರು ಮಠದಲ್ಲಿ ವಿಶೇಷ ಪೂಜೆ: ಭಕ್ತಾದಿಗಳಿಂದ ಭಜನೆ, ಪಾರಾಯಣ

ಉಡುಪಿ: ರಾಮಮಂದಿರ ಭೂಮಿಪೂಜೆಯ ಪ್ರಯುಕ್ತ ಪಲಿಮಾರು ಮಠ ವಿದ್ಯಾಧೀಶತೀರ್ಥ ಸ್ವಾಮೀಜಿ ಇಂದು ವಿಶೇಷ ಪೂಜೆ ನೆರವೇರಿಸಿದರು. ಭಕ್ತಾಧಿಗಳಿಂದ ಭಜನೆ, ಪಾರಾಯಣ ನಡೆಯಿತು. ಬಳಿಕ ಶ್ರೀಗಳು ಮಾತನಾಡಿ, ಯೋಧ್ಯೆಯಲ್ಲಿ ವಿವಾದಿತ ಕುಂಭವನ್ನು ಬೀಳಿಸಿದ ನಂತರ ಭಾರತೀಯರೆಲ್ಲರು ನಡೆಸಿದ ಅಖಂಡ ಭಜನೆ, ಪ್ರಾರ್ಥನೆ, ವಿವಿಧ ಪೂಜೆಗಳಿಂದಾಗಿ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತಿದೆ. ಸಾಮೂಹಿಕ ಪ್ರಾರ್ಥನೆಯ ಫಲ ನಮಗೆ ಸಿಕ್ಕಿದೆ ಎಂದರು.
ಪಟ್ಟಾಭಿರಾಮನಾಗಿ ಭಕ್ತರಿಗೆ ದರ್ಶನಕೊಟ್ಟ ಉಡುಪಿಯ ಕಡೆಗೋಲು ಕೃಷ್ಣ

ಉಡುಪಿ: ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸುತ್ತಿದ್ದಂತೆ ಉಡುಪಿ ಶ್ರೀಕೃಷ್ಣಮಠದಲ್ಲಿ ಮಹಾಪೂಜೆ ನೆರವೇರಿಸಲಾಯಿತು. ಕಡೆಗೋಲು ಕೃಷ್ಣ ಪಟ್ಟಾಭಿರಾಮನಾಗಿ ಭಕ್ತರಿಗೆ ದರ್ಶನ ಕೊಟ್ಟಿದ್ದಾನೆ. ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು ಕೃಷ್ಣದೇವರಿಗೆ ಪಟ್ಟಾಭಿರಾಮನ ಅಲಂಕಾರ ಮಾಡಿದ್ದರು. ಈ ಮೂಲಕ ಶ್ರೀಕೃಷ್ಣನಲ್ಲಿ ಶ್ರೀರಾಮನನ್ನು ಕಂಡುಕೊಳ್ಳಲಾಯಿತು. ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ಪಟ್ಟಾಭಿರಾಮನಿಗೆ ಮಹಾಪೂಜೆಯನ್ನು ನೆರವೇರಿಸಿದರು.
ರಾಮ ಜನ್ಮಭೂಮಿ ಚಳುವಳಿಗಾಗಿ ಸರ್ವಸ್ವ ತ್ಯಾಗ ಮಾಡಿದ ಮಹನೀಯರಿಗೆ ಕೋಟಿ ನಮನ: ಪ್ರಧಾನಿ ಮೋದಿ

ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀ ರಾಮಂದಿರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಮ ಜನ್ಮಭೂಮಿ ಚಳುವಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು. ವಿಶ್ವದಾದ್ಯಂತ ಇಂದು ಶ್ರೀರಾಮನ ಘೋಷವಾಕ್ಯ ಕೇಳಿಬರುತ್ತಿದೆ. ಸರಯೂ ನದಿಯಲ್ಲಿ ತೀರದಲ್ಲಿ ಸುವರ್ಣ ಅಧ್ಯಾಯ ಆರಂಭವಾಗಿದೆ. ಭಾರತ ಇಂದು ದೇವರ ಸನ್ನಿಧಿಯಲ್ಲಿದೆ ಎಂದರು. ತಮ್ಮ ಭಾಷಣದುದ್ದಕ್ಕೂ ಪ್ರಭು ಶ್ರೀರಾಮನ ಸಂದೇಶಗಳನ್ನು ಸಂಸ್ಕೃತದಲ್ಲಿ ಪಠಿಸಿದ ಪ್ರಧಾನಿ ಮೋದಿ, ಅಯೋಧ್ಯೆಯ ರಾಮಜನ್ಮಭೂಮಿ ಇವತ್ತು ಮುಕ್ತವಾಗಿದೆ. ಇಡೀ ದೇಶವೇ ಇಂದು ರೋಮಾಂಚನ ಗೊಂಡಿದೆ. ರಾಮಮಂದಿರ […]
ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರಿಂದ ಭೂಮಿಪೂಜೆ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಶಂಕುಸ್ಥಾಪನೆಗೆ ನಂದಾ, ಜಯಾ, ರಿಕ್ಷಾ, ಭದ್ರಾ ಹಾಗೂ ಪೂರ್ಣಾ ಎಂಬ 22.6 ಕೆ.ಜಿ. ತೂಕದ ಐದು ಇಟ್ಟಿಗೆಗಳನ್ನು ಬಳಸಲಾಯಿತು. ಭೂಮಿಪೂಜೆಗೆ ಬಳಸುವ ಗುದ್ದಲಿಯನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜಿಸಲಾಯಿತು. ಪ್ರಧಾನಿ ಮೋದಿ ಅವರು ಭೂಮಿಗೆ ಆರತಿ ಮಾಡಿದರು. ಭೂಮಿಯಿಂದ ಮಣ್ಣನ್ನು ತೆಗೆದು ಹಣೆಗೆ ಹಚ್ಚಿ ನಮಸ್ಕರಿಸಿದರು. ಭೂಮಿಪೂಜೆಗೆ ನಿಗದಿಪಡಿಸಿದ್ದ ಸ್ಥಳಕ್ಕೆ ಪ್ರದಕ್ಷಿಣೆ ಮಾಡಿದರು. ವಿದ್ವಾಂಸರ ವೇದಮಂತ್ರ […]