ಉಡುಪಿ: 173 ಮಂದಿಗೆ ಕೊರೊನಾ ಪಾಸಿಟಿವ್: ಎರಡು ಮಂದಿ ಕೊರೊನಾಗೆ ಬಲಿ

ಉಡುಪಿ: ಜಿಲ್ಲೆಯಲ್ಲಿ ಇಂದು 173 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5143 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 73 ಮಂದಿ ಹಾಗೂ ಹೋಮ್ ಐಸೋಲೇಷನ್ ನಲ್ಲಿದ್ದ 51 ಮಂದಿ ಸಹಿತ 124 ಮಂದಿ ಕೊರೊನಾ ಸೋಂಕಿತರು ಇಂದು ಗುಣಮುಖರಾಗಿದ್ದಾರೆ. ಇದರೊಂದಿಗೆ 3072 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನೂ 2027 ಸಕ್ರಿಯ ಕೊರೊನಾ ಸೋಂಕಿತರಿದ್ದು, 956 […]

ರಾಮಜನ್ಮಭೂಮಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಕೀರ್ತಿಶೇಷ ವಿಶ್ವೇಶತೀರ್ಥ ಶ್ರೀಗಳಿಗೆ ಗೌರವ ಸಮರ್ಪಣೆ

ಉಡುಪಿ: ಅಯೋಧ್ಯೆ ರಾಮಮಂದಿರ ಶಿಲಾನ್ಯಾಸದ ಸಂದರ್ಭದಲ್ಲಿ ರಾಮಜನ್ಮಭೂಮಿ ಆಂದೋಲನದಲ್ಲಿ ಸುದೀರ್ಘ ಅವಧಿಗೆ ಮುಂಚೂಣಿಯಲ್ಲಿದ್ದು, ಮಾರ್ಗದರ್ಶನ, ಸಲಹೆ ನೀಡಿದ ಪೇಜಾವರ ಮಠಾಧೀಶರಾಗಿದ್ದ ಕೀರ್ತಿಶೇಷ ವಿಶ್ವೇಶತೀರ್ಥ ಶ್ರೀಪಾದರ ಪೀಠ‌, ಭಾವಚಿತ್ರಕ್ಕೆ ಉಡುಪಿ ಪೇಜಾವರ ಮಠದಲ್ಲಿ ಬುಧವಾರ ವಿಶೇಷ ಅಲಂಕಾರ ಮಾಡಿ‌ ಮಂಗಳಾರತಿ ಬೆಳಗಿ ಭಕ್ತಿ ಗೌರವ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರಿಗೆ ಸಿಹಿತಿಂಡಿ ವಿತರಿಸಲಾಯಿತು. ‌ಮಠದ ದಿವಾನರಾದ ಎಂ‌. ರಘುರಾಮ ಆಚಾರ್ಯ,  ಸಂತೋಷ್,  ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.

ರಾಮಮಂದಿರ ಶಿಲಾನ್ಯಾಸ: ಜ್ಯೋತಿಷಿ ಹೆರ್ಗ ರವೀಂದ್ರ ಭಟ್ ನಿವಾಸದಲ್ಲಿ ರಾಮಭದ್ರಕ ಮಂಡಲ ಪೂಜೆ

ಉಡುಪಿ: ರಾಮಮಂದಿರ ಶಿಲಾನ್ಯಾಸದ ಅಂಗವಾಗಿ ಉಡುಪಿಯ ಪ್ರಸಿದ್ಧ ಜ್ಯೋತಿಷಿ ವಿದ್ವಾನ್ ಹೆರ್ಗ ರವೀಂದ್ರ ಭಟ್ ಅವರ ನಿವಾಸದಲ್ಲಿ ಅತ್ಯಂತ ಅಪರೂಪದ ರಾಮಭದ್ರಕ ಮಂಡಲ ಪೂಜೆ ನೆರವೇರಿತು‌. ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ,ಹೆರ್ಗ ಹರಿಪ್ರಸಾದ್ ಭಟ್ ಸೇರಿದಂತೆ ಅನೇಕ ಋತ್ವಿಜರು ಪಾಲ್ಗೊಂಡು ಪೂಜೆಯನ್ನು ನೆರವೇರಿಸಿಕೊಟ್ಟರು . ರಾಮಮಂದಿರ ನಿರ್ಮಾಣ ಕಾರ್ಯ ಅತ್ಯಂತ ನಿರ್ವಿಘ್ನವಾಗಿ ಅತೀ ಶೀಘ್ರ ನೆರವೇರಿ ಶ್ರೀರಾಮನ ಕೃಪೆಯಿಂದ ಲೋಕ ಕಲ್ಯಾಣವಾಗಲೆಂದು ಪ್ರಾರ್ಥಿಸಿಲಾಯಿತು.‌ ಇದೇ ಸಂದರ್ಭದಲ್ಲಿ ಶ್ರೀರಾಮನ ಕುರಿತಾಗಿ ವಿದ್ವಾನ್ ಅಮೃತೇಶ್ ಡಿ ಎಸ್ ಉಪನ್ಯಾಸ […]

ರಾಮಮಂದಿರ ಶಿಲಾನ್ಯಾಸದ ವೇಳೆ ಉಡುಪಿ ಶ್ರೀಕೃಷ್ಣಮಠದ ಗೋ ಶಾಲೆಯಲ್ಲಿ ಗಂಡು ಕರುವಿಗೆ ಜನ್ಮ ನೀಡಿದ ದೇಶಿ ಗೋವು ಕಪಿಲೆ

ಉಡುಪಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರುತ್ತಿದ್ದ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣಮಠದ ಗೋಶಾಲೆಯಲ್ಲಿ ಕಪಿಲೆ ಎಂಬ ದೇಸಿ ದನವು ಗಂಡು ಕರುವಿಗೆ ಜನ್ಮ ನೀಡಿದೆ. ಪರ್ಯಾಯ ಅದಮಾರು  ಮಠದ ಈಶಪ್ರಿಯ ಶ್ರೀಗಳ ಅಚ್ಚುಮೆಚ್ಚಿನ ಮಣ್ಣಿನ ಬಣ್ಣ ಕರು ಇದಾಗಿದ್ದು, ಅವರು ಈ ಕರುವಿಗೆ ‘ಶ್ರೀರಾಮ’ ಎಂದು ನಾಮಕರಣ ಮಾಡಿದ್ದಾರೆ.

ಚರಂಡಿ ಮೇಲೆಯೇ ಕಂಪೌಂಡ್ ನಿರ್ಮಾಣ ಆರೋಪ: ರೊಚ್ಚಿಗೆದ್ದ ಸಾರ್ವಜನಿಕರಿಂದ ರಸ್ತೆ ಅಗೆದು ಪ್ರತಿಭಟನೆ

ಕುಂದಾಪುರ: ಸಾರ್ವಜನಿಕ ರಸ್ತೆಬದಿಯ ಚರಂಡಿ ಮೇಲೆಯೇ ಆವರಣಗೋಡೆ ನಿರ್ಮಿಸಲಾಗಿದ್ದು, ಇದರಿಂದ ಸಾರ್ವಜನಿಕ ಓಡಾಟಕ್ಕೆ ತೊಂದರೆಗಳಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆ ಕುಂದಾಪುರದ ಗುಲ್ವಾಡಿ ಗ್ರಾಮಪಂಚಾಯತ್‌ನಲ್ಲಿ ಬುಧವಾರ ನಡೆದಿದೆ. ಇಲ್ಲಿನ ಗುಲ್ವಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಬೋಳುಕಟ್ಟೆ-ಚಿಕ್ಕಪೇಟೆ ರಸ್ತೆ ಪ್ರವೇಶದಲ್ಲಿ ಮಣ್ಣನ್ನು ಅಗೆದು ರಸ್ತೆ ಬಂದ್ ಮಾಡಿ ಪಂಚಾಯತ್ ಎದುರು ಜಮಾಯಿಸಿದ ಸ್ಥಳೀಯರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಲವತ್ತು ವರ್ಷಕ್ಕೂ ಅಧಿಕ ವರ್ಷಗಳಿಂದ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದೇವೆ. ಎಲ್ಲರೂ ಅವರವರ ಜಾಗವನ್ನು ರಸ್ತೆಗೆ ಬಿಟ್ಟುಕೊಟ್ಟಿದ್ದಾರೆ. ಗೋಪಾಲ […]