ನಾಡಿನ ವಿವಿಧೆಡೆ ಶಿರೂರು ಶ್ರೀಲಕ್ಷ್ಮೀವರ ತೀರ್ಥರ ಪುಣ್ಯ ಸಂಸ್ಮರಣೆ

ಉಡುಪಿ: ಶಿರೂರುಮಠದ ಲಕ್ಷ್ಮೀವರತೀರ್ಥ ಶ್ರೀಪಾದರ 2ನೇ ವರ್ಷದ ಪುಣ್ಯಸ್ಮರಣೆಯನ್ನು ನಾಡಿನ ವಿವಿಧ ಸ್ಥಳಗಳಲ್ಲಿ ಇಂದು ಆಚರಿಸಲಾಯಿತು. ದಕ್ಷಿಣಕನ್ನಡ ಜಿಲ್ಲೆಯ ಕೇಮಾರಿನಲ್ಲಿ ಸಾಂದಿಪಿನಿಮಠದ ಈಶವಿಠಲದಾಸ ಸ್ವಾಮೀಜಿಯವರು ತಮ್ಮ ಮಠದಲ್ಲಿ ಶ್ರೀವರದನಾರಾಯಣ, ಮೂಕಾಂಬಿಕಾ ಹಾಗೂ ಶಾಲಗ್ರಾಮ ಸನ್ನಿಧಿಗೆ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ಸಲ್ಲಿಸಿದರು. ನಂತರ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಲಾಯಿತು. ಕಿರಿ ಮಂಜೇಶ್ವರದ ಹೊಸಹಿತ್ಲು ಸಮುದ್ರ ಕಿನಾರೆಯಲ್ಲಿ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಉದಯ್ ಎಂ ಶ್ರೀಯಾನ್, ಕೋಶಾಧಿಕಾರಿ ವೆಂಕಟೇಶ ಪೂಜಾರಿ, ನಿಕಟಪೂರ್ವ ಅಧ್ಯಕ್ಷ […]

ಕೊರೊನಾ ಹಿನ್ನೆಲೆ: ನಾಗರಪಂಚಮಿಯಂದು ಕುಡುಪು ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಮಂಗಳೂರು: ಈ ಬಾರಿಯ ನಾಗರ ಪಂಚಮಿಗೂ ಕೊರೋನಾ ಬಿಸಿ ತಟ್ಟಿದ್ದು, ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು ಶ್ರೀ ಅನಂತ ಪದ್ಮನಾಭ ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜು‌. 25ರ ಶನಿವಾರದಂದು ನಾಗರಪಂಚಮಿ ನಡೆಯಲಿದ್ದು, ಆ ದಿನ ಭಕ್ತರ ಪ್ರವೇಶ ಸಂಪೂರ್ಣ ಬಂದ್ ಮಾಡಲಾಗಿದೆ. ನಾಗರ ಪಂಚಮಿಯಂದು ಇಲ್ಲಿ ಪ್ರತೀ ವರ್ಷ ಲಕ್ಷಾಂತರ ಭಕ್ತರಿಂದ ಪೂಜೆ ಹಾಗೂ ವಿವಿಧ ಸೇವೆಗಳು ನಡೆಯುತ್ತವೆ. ನಿರ್ಬಂಧ ಹಿನ್ನೆಲೆ ಕ್ಷೇತ್ರದ ಆವರಣಕ್ಕೂ ಭಕ್ತಾದಿಗಳು ಬರುವಂತಿಲ್ಲ. ನಾಗರ ಪಂಚಮಿಯ ದಿನದಂದು ಸೇವೆಗಳು, ಸೇವಾಪ್ರಸಾದ, […]

ದುಡಿಮೆಯ ನಡುವೆ ಅರಳುತ್ತಿರೋ ಈ ಹೂವಿಗೆ ಬೇಕಿದೆ ನೆರವಿನ ಕೈಗಳು: ಈ ಪ್ರತಿಭಾವಂತ ಹುಡುಗಿಯ ಪದವಿ ಕನಸು ನನಸು ಮಾಡುವಿರಾ?

ಮನೆಯ ಕಷ್ಟಕ್ಕೆ ಹೆಗಲೆಣೆಯಾಗಿ ದುಡಿಮೆ, ದುಡಿಮೆಯೊಂದಿಗೂ ಉಳಿಸಿಕೊಂಡ ಕಲಿಕೆಯ ಹಂಬಲ. ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ, ಧುತ್ತನೇ ಒದಗಿದ ಕೌಟುಂಬಿಕ ಸಂಕಷ್ಟದ ಸನ್ನಿವೇಶದಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ  ಈ ಹುಡುಗಿಗೆ. ಆದರೂ ದುಡಿಮೆ ನಡುವೆ ಕಲಿಯುವ ಹಂಬಲ ಕೈಬಿಡದೇ ದುಡಿದ ಇವಳು ಶೇ. 94 ಗಳಿಸಿದ್ದಾಳೆ. ಹೌದು. ಇದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅಶ್ವಿನಿ ಅನ್ನೋ ಪ್ರತಿಭಾವಂತೆ ಹುಡುಗಿಯ ಕತೆ.  ನಾಲ್ಕು ವರ್ಷಗಳ ಕಾಲ ಮುಂಬೈಯಲ್ಲಿ ಮೊಬೈಲ್ ಶಾಪ್ ನ ದುಡಿಮೆಯಲ್ಲೂ ಕಲಿಕೆಯ ಹಂಬಲ ಉಳಿಸಿಕೊಂಡ […]

ಚಂದನ ವಾಹಿನಿಯಲ್ಲೇ ಇನ್ನು ಮಕ್ಕಳಿಗೆ ನಡೆಯಲಿದೆ ಕ್ಲಾಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ಶಾಲೆಗಳು ಮುಚ್ಚಿಕೊಂಡಿದ್ದು, ನಿಗಧಿತ ಸಮಯಕ್ಕೆ ಶಾಲೆಯನ್ನು ತೆರೆಯಲು ಅಸಾಧ್ಯವಾಗಿದೆ. ಆದರೆ ವಿದ್ಯಾರ್ಥಿಗಳ ಕಲಿಕೆ ನಿಲ್ಲಬಾರದು ಎಂದು ಜುಲೈನಿಂದ ಡಿಸೆಂಬರ್‌ವರೆಗೆ ಚಂದನ ವಾಹಿನಿಯಲ್ಲಿ ಪಾಠ ಪ್ರಸಾರಗೊಳ್ಳಲಿದೆ. ಚಂದನ ವಾಹಿನಿಯಲ್ಲಿ 8,9,10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ನಡೆಯಲಿದೆ. ಶಾಲೆಗಳು ಯಾವಾಗ ತೆರೆಯಬಹುದು ಎನ್ನುವುದೂ ಇನ್ನು ಸ್ಪಷ್ಟಗೊಂಡಿಲ್ಲ. ಈ ಯೋಜನೆಗೆ 1.60ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗಲಿದೆ. ಹಾಗೂ ಈ ಕಾರ್ಯಕ್ರಮದ ಪಾಠಗಳು ಯೂಟ್ಯೂಬ್‌ನಲ್ಲಿಯೂ ದೊರೆಯಲಿವೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು […]

ಮನುಷ್ಯನ ಮೇಲೆ ಕೋವಿಡ್ ಲಸಿಕೆ ಪ್ರಯೋಗ

ನವದೆಹಲಿ: ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ದೇಶಿಯ ಕೋವಿಡ್‌–19 ಲಸಿಕೆ ಕೊವ್ಯಾಕ್ಸಿನ್‌ನ್ನು ಮನುಷ್ಯನ ಮೇಲೆ ಪ್ರಯೋಗ ನಡೆಸಲು ದೆಹಲಿಯ ಏಮ್ಸ್‌ ಅನುಮತಿ ನೀಡಿದ್ದು, ಸೋಮವಾರದಿಂದ ಮನುಷ್ಯನ ಮೇಲೆ ಕೊವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ಪ್ರಕ್ರಿಯೆಗಳು ನಡೆಸಲಿವೆ. ಕೋವಿಡ್‌–19 ಇರದ ಹಾಗೂ ಯಾವುದೇ ರೋಗಗಳಿಗೆ ಒಳಗಾಗಿರದ ಆರೋಗ್ಯವಂತರನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಗಿದ್ದು, 18ರಿಂದ 55 ವರ್ಷ ವಯಸ್ಸಿನ ವ್ಯಕ್ತಿಗಳ ಮೇಲೆ ಕೊವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ಅಧ್ಯಯನ ನಡೆಸಲಾಗುತ್ತದೆ ಎಂದು ಏಮ್ಸ್‌ ಕಮ್ಯುನಿಟಿ ಮೆಡಿಸಿನ್‌ ಕೇಂದ್ರದ ಪ್ರೊಫೆಸರ್‌ ಡಾ.ಸಂಜಯ್‌ ರಾಯ್‌ ತಿಳಿಸಿದ್ದಾರೆ. ಐಸಿಎಂಆರ್ […]