ಚಂದನ ವಾಹಿನಿಯಲ್ಲೇ ಇನ್ನು ಮಕ್ಕಳಿಗೆ ನಡೆಯಲಿದೆ ಕ್ಲಾಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ಶಾಲೆಗಳು ಮುಚ್ಚಿಕೊಂಡಿದ್ದು, ನಿಗಧಿತ ಸಮಯಕ್ಕೆ ಶಾಲೆಯನ್ನು ತೆರೆಯಲು ಅಸಾಧ್ಯವಾಗಿದೆ. ಆದರೆ ವಿದ್ಯಾರ್ಥಿಗಳ ಕಲಿಕೆ ನಿಲ್ಲಬಾರದು ಎಂದು ಜುಲೈನಿಂದ ಡಿಸೆಂಬರ್‌ವರೆಗೆ ಚಂದನ ವಾಹಿನಿಯಲ್ಲಿ ಪಾಠ ಪ್ರಸಾರಗೊಳ್ಳಲಿದೆ.

ಚಂದನ ವಾಹಿನಿಯಲ್ಲಿ 8,9,10ನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ನಡೆಯಲಿದೆ. ಶಾಲೆಗಳು ಯಾವಾಗ ತೆರೆಯಬಹುದು ಎನ್ನುವುದೂ ಇನ್ನು ಸ್ಪಷ್ಟಗೊಂಡಿಲ್ಲ. ಈ ಯೋಜನೆಗೆ 1.60ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗಲಿದೆ.

ಹಾಗೂ ಈ ಕಾರ್ಯಕ್ರಮದ ಪಾಠಗಳು ಯೂಟ್ಯೂಬ್‌ನಲ್ಲಿಯೂ ದೊರೆಯಲಿವೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.