ಕೋಟದ ಹೋಟೆಲ್ ಸಿಬ್ಬಂದಿ ಸಹಿತ 9 ಮಂದಿಗೆ ಕೊರೊನಾ ಸೋಂಕು ದೃಢ

ಕೋಟ: ಕೋಟದಲ್ಲಿ ಹೋಟೆಲ್ ಸಿಬ್ಬಂದಿ, ದಿನಸಿ ಅಂಗಡಿ ಮಾಲೀಕನ ಕುಟುಂಬ ಸಹಿತ ಒಟ್ಟು 9 ಮಂದಿಗೆ ಇಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜುಲೈ 1ರಂದು ಕೋಟದ ಹೋಟೆಲ್ ಮಾಲೀಕರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಐದು ಮಂದಿಗೂ ಸೋಂಕು ದೃಢಪಟ್ಟಿದೆ. ಹಾಗೆ ಅಂಗಡಿಯೊಂದರ ಮಾಲೀಕನ ಕುಟುಂಬದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರೆಲ್ಲರಿಗೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಗಡಿ ಹಾಗೂ ಮಾಲೀಕನ ಮನೆ, ಹೋಟೆಲ್ ಕಾರ್ಮಿಕರ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಭಾನುವಾರ 147 ಮಂದಿಗೆ ಕೊರೊನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ‌ಇಂದು‌ ಬರೋಬ್ಬರಿ 147 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.ಉಳ್ಳಾಲ ರ್ಯಾಂಡಮ್ ಟೆಸ್ಟ್ ನ 48 ಮಂದಿಗೆ ಪಾಸಿಟಿವ್, ILI 40‌ ಮಂದಿಗೆ ಕೊರೋನಾ ಪಾಸಿಟಿವ್, ಪ್ರಾಥಮಿಕ ಸಂಪರ್ಕದಿಂದ 35 ಜನರಿಗೆ ಸೋಂಕು ತಗುಲಿದ್ದು, ಅಂತರಾಷ್ಟ್ರೀಯ ಪ್ರಯಾಣದಿಂದ 8 ಮಂದಿಗೆ ಪಾಸಿಟಿವ್ , ಹೊರ ಜಿಲ್ಲೆಯಿಂದ ಬಂದ 7 ಮಂದಿಗೆ, SARI ಯಿಂದ 2 ಮಂದಿಗೆ, ಕೋವಿಡ್ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಹಾಗೂ ಮಲೇಷಿಯಾದಿಂದ ಹಡಗಿನಲ್ಲಿ ಬಂದ ಇಬ್ಬರಿಗೆ ಸೋಂಕು‌ ದೃಢ ಪಟ್ಟಿದೆ. […]

ಕುಂದಾಪುರದಲ್ಲಿ ಯಶಸ್ವಿಯಾಯ್ತು ಸಂಪೂರ್ಣ ಲಾಕ್ ಡೌನ್ : ಖಾಲಿ ರಸ್ತೆಯ ಮಧ್ಯೆ ಕಣ್ ಸೆಳೆದ ನವಿಲ ನಾಟ್ಯ

ಕುಂದಾಪುರ: ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ಸಂಡೇ ಲಾಕ್‌ಡೌನ್‌ಗೆ ಕುಂದಾಪುರ ನಗರವೂ ಸೇರಿದಂತೆ ತಾಲೂಕಿನೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ರಾತ್ರಿ ೮ರಿಂದ ಸೋಮವಾರ ಬೆಳಿಗ್ಗೆ ೫ ಗಂಟೆಯವರೆಗೆ ಒಟ್ಟು ೩೩ ಗಂಟೆಗಳ ಕಾಲ ಸರ್ಕಾರ ಹೊರಡಿಸಿರುವ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದ ಕುಂದಾಪುರ ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗಗಳು ಭಾನುವಾರ ಸಂಪೂರ್ಣ ಬಂದ್ ಆಗಿವೆ. ಹಾಲು, ಮೆಡಿಕಲ್, ಪೇಪರ್ ಶಾಪ್‌ಗಳು ಬಿಟ್ಟರೆ ಬೇರಾವುದೇ ಅಂಗಡಿಗಳು ತೆರೆದಿಲ್ಲ. ಬೈಂದೂರು, ಗಂಗೊಳ್ಳಿ ಭಾಗಗಳಿಂದ ಕುಂದಾಪುರ ನಗರಕ್ಕೆ ಸಂಪರ್ಕಿಸುವ ಚಿಕನ್‌ಸಾಲ್ […]

ಕೇರಳದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ: ಸುಗ್ರೀವಾಜ್ಞೆ ಹೊರಡಿಸಿ ನಿಯಮ ಜಾರಿಗೊಳಿಸಿದ ಕೇರಳ ಸರ್ಕಾರ

ತಿರುವನಂತಪುರ: ಕೊರೊನಾ ಹರಡುವುದನ್ನು ನಿಯಂತ್ರಿಸಲು ಕೇರಳ ಸರ್ಕಾರ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಮಾಸ್ಕ್‌ ಧರಿಸುವುದು ಹಾಗೂ ಹೊರರಾಜ್ಯಗಳಿಂದ ಕೇರಳಕ್ಕೆ ಬರುವವರು ಹೆಸರು ನೋಂದಾಯಿಸುವುದನ್ನು ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಇರುತ್ತದೆ. ಹೊಸ ತಿದ್ದುಪಡಿಯ ಪ್ರಕಾರ, ರಾಜ್ಯದ ಪ್ರತಿ ನಾಗರಿಕ ತಮ್ಮ ಕೆಲಸದ ಸ್ಥಳ ಅಥವಾ ಸಾರ್ವಜನಿಕ ಸ್ಥಳ ಮತ್ತು  ವಾಹನಗಳಲ್ಲಿ ಕಡ್ಡಾಯವಾಗಿ ಮೂಗು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳುವಂತೆ ಮಾಸ್ಕ್‌ ಧರಿಸಬೇಕು. ಆರು ಅಡಿಗಳ ಅಂತರವನ್ನು ಪ್ರತಿಯೊಬ್ಬರೂ […]

ಕುಂದಾಪುರ ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಗೆ ಕೊರೋನಾ ಪಾಸಿಟಿವ್

ಕುಂದಾಪುರ: ಇಲ್ಲಿನ ಸಂಚಾರಿ ಪೋಲಿಸ್ ಠಾಣೆಯ 59 ವರ್ಷದ ಹೆಡ್ ಕಾನ್ಸ್ಟೇಬಲ್ ಓರ್ವರಿಗೆ ಭಾನುವಾರ ಕೊರೋನಾ ಪಾಸಿಟಿವ್ ದೃಡಪಟ್ಟಿದೆ. ಕೊರೋನಾ ಪಾಸಿಟಿವ್ ಹಿನ್ನೆಲೆ ಕುಂದಾಪುರ ಸಂಚಾರಿ ಪೋಲಿಸ್ ಠಾಣೆ ಹಾಗೂ ಸಿಬ್ಬಂದಿಯಿದ್ದ ಪೋಲಿಸ್ ಕ್ವಾಟ್ರಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ. ಪೋಲಿಸ್ ಠಾಣೆಯನ್ನು ಸ್ಯಾನಿಟೈಜ್ ಮಾಡುವ ನಿಟ್ಟಿನಲ್ಲಿ ಠಾಣೆಯನ್ನು ತಾತ್ಕಾಲಿಕವಾಗಿ ಎರಡು ದಿನ ಅಲ್ಲೇ ಸಮೀಪವಿರುವ ಕುಂದಾಪುರ ಪ್ರವಾಸಿ ಮಂದಿರಕ್ಕೆ ಶಿಫ್ಟ್ ಮಾಡಲಾಗಿದೆ. ಸದ್ಯ ಕೊರೋನಾ ಸೋಂಕು ದೃಡಪಟ್ಟ ಹೆಡ್ ಕಾನ್ಸ್‍ಟೇಬಲ್ ಅವರನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ […]