ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಭಾನುವಾರ 147 ಮಂದಿಗೆ ಕೊರೊನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡದಲ್ಲಿ ‌ಇಂದು‌ ಬರೋಬ್ಬರಿ 147 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.ಉಳ್ಳಾಲ ರ್ಯಾಂಡಮ್ ಟೆಸ್ಟ್ ನ 48 ಮಂದಿಗೆ ಪಾಸಿಟಿವ್, ILI 40‌ ಮಂದಿಗೆ ಕೊರೋನಾ ಪಾಸಿಟಿವ್, ಪ್ರಾಥಮಿಕ ಸಂಪರ್ಕದಿಂದ 35 ಜನರಿಗೆ ಸೋಂಕು ತಗುಲಿದ್ದು, ಅಂತರಾಷ್ಟ್ರೀಯ ಪ್ರಯಾಣದಿಂದ 8 ಮಂದಿಗೆ ಪಾಸಿಟಿವ್ , ಹೊರ ಜಿಲ್ಲೆಯಿಂದ ಬಂದ 7 ಮಂದಿಗೆ, SARI ಯಿಂದ 2 ಮಂದಿಗೆ, ಕೋವಿಡ್ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಹಾಗೂ ಮಲೇಷಿಯಾದಿಂದ ಹಡಗಿನಲ್ಲಿ ಬಂದ ಇಬ್ಬರಿಗೆ ಸೋಂಕು‌ ದೃಢ ಪಟ್ಟಿದೆ.
ಶಸ್ತ್ರ ಚಿಕಿತ್ಸೆಯ ಮೊದಲು ಮಾಡಿದ ಟೆಸ್ಟ್ ನಿಂದ ಒಬ್ಬರಿಗೆ ಸೊಂಕು ದೃಢಪಟ್ಡಿದ್ದು, ಹೆರಿಗೆಯ ಸಂದರ್ಭ ಮಾಡಿದ ಟೆಸ್ಟ್ ನಿಂದ ಓರ್ವ ಮಹಿಳೆಗೆ ಕೊರೋನಾ‌ ಪಾಸಿಟಿವ್ ಅಲ್ಲದೇ ಸಂಪರ್ಕವೇ ಪತ್ತೆಯಾಗದ ಓರ್ವ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.