ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕಿಣಿ ಅಧಿಕಾರ ಸ್ವೀಕಾರ

ಉಡುಪಿ, ಜೂ29:  ಉಡುಪಿ ನಗರದಲ್ಲಿ, ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ರಾಜ್ಯಕ್ಕೆ ಮಾದರಿಯಾದ ವ್ಯವಸ್ಥಿತ ಲೇಔಟ್ ನಿರ್ಮಾಣ ಮಾಡಲಾಗುವುದು ಎಂದು ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ರಾಘವೇಂದ್ರ ಕಿಣಿ ಹೇಳಿದ್ದಾರೆ. ಅವರು ಸೋಮವಾರ, ಉಡುಪಿ ನಗರಾಭಿವೃಧ್ದಿ ಪ್ರಾಧಿಕಾರದ ಕಚೇರಿಯಲ್ಲಿ, ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ನಗರಾಭಿವೃಧ್ದಿ ಪ್ರಾಧಿಕಾರದ ಮೂಲಕ ಜಾಗ ಖರೀದಿಸಿ ಅಲ್ಲಿ, ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಲೇ ಔಟ್ ನಿರ್ಮಾಣದ ಗುರಿ ಹೊಂದಿದ್ದು, ಪ್ರಾಧಿಕಾರದ ಕಚೇರಿಯನ್ನು ಜನಸ್ನೇಹಿಯಾಗಿ ರೂಪಿಸಿ,  ಸಾರ್ವಜನಿಕರಿಗೆ ಶೀಘ್ರದಲ್ಲಿ ಸೇವೆ ನೀಡಲಾಗುವುದು, ಪ್ರತಿದಿನ […]

 ￰ಚೈನೀಸ್ ಆಪ್ ನಿಷೇಧಿಸಲು ಚಪ್ಪಾಳೆ ಹೊಡೆಯುವುದನ್ನು ಮೊದಲು ನಿಲ್ಲಿಸಿ: ಡಾ.ಶಶಿಕಿರಣ್ ಶೆಟ್ಟಿ ಬರಹ

ಈಗ ಎಲ್ಲಾ ಕಡೆ ಕೇಳುತ್ತಿರುವ ಕೂಗು ಒಂದೇ, ನಮ್ಮ ಸೈನಿಕರನ್ನು ಕೊಂದ ಪಾಪಿ ಚೀನಾದ ಆಪ್ ನಿಲ್ಲಿಸಿ ಎಂದು, ಇದು ಸರಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸವಲ್ಲ ಅಂತಾರಾಷ್ಟ್ರೀಯ ಕಾನೂನು ಇದಕ್ಕೆ ಅಡ್ಡಿಯಾಗಬಹುದು. ಅದಕ್ಕೆ ನಾವೇ ಜಾಗೃತಗೊಳ್ಳಬೇಕಿದೆ. ಅಮೇರಿಕಾದ 2 ಅಣು ಬಾಂಬ್ ಬಿದ್ದ ದಿನವೇ ಜಪಾನ್ ನ ಜನರು ಅಮೇರಿಕಾದ ವಸ್ತುಗಳನ್ನು ಮುಟ್ಟುವುದನ್ನೇ ಬಿಟ್ಟಿದ್ದಾರೆ. ಇಂದು ಒಂದು ಅಮೇರಿಕಾದ ಸೂಜಿ ಕೂಡ ಜಪಾನ್ ಅಲ್ಲಿ ಮಾರಾಟವಾಗುತಿಲ್ಲ, ಜಪಾನ್ ಜನರಿಗಾದದ್ದು ಭಾರತೀಯರಿಗೇಕೆ ಆಗುತಿಲ್ಲ? ಕೇವಲ ಟಿಕ್ ಟಾಕ್ ಒಂದೇ […]

ಕಾರ್ಕಳ:ನಿಸರ್ಗ ಪ್ರಿಯರ ಮನಸ್ಸು ಕುಣಿಯುವಂತೆ ಅರಳಿದಳು ಬ್ರಹ್ಮ ಕಮಲ

ಕಾರ್ಕಳ:ಮಳೆಗಾಲಕ್ಕೆ ಬ್ರಹ್ಮ ಕಮಲ ಅರಳುವುದನ್ನು ನೋಡೋದೇ ಚೆಂದ. ಆ ಹೂವಿನ ಚಂದಕ್ಕೆ ಮರುಳಾಗದವರಿಲ್ಲ.ಆಕಾಶದಲ್ಲಿ ಚಂದ್ರ ಮೂಡಿದಂತೆ ಗಿಡದಲ್ಲಿ ಇರುಳು ಮೂಡುವ ಬ್ರಹ್ಮ ಕಮಲ ಕಾರ್ಕಳದ  ಹಿರಿಯಂಗಡಿ ಸಮೀಪವಿರುವ ಈಶ್ವರೀಯ ಬ್ರಹ್ಮ ಕುಮಾರಿ ಕೇಂದ್ರದ ಪರಿಸರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ಅರಳಿದ ಚಿತ್ರವನ್ನು ಉಡುಪಿXPRESS ಗೆ ಕಳುಹಿಸಿಕೊಟ್ಟಿದ್ದಾರೆ ಶಿವ ಎಡ್ವಟೈಸರ್ಸ್ ನ ಮಾಲಕ ವರದರಾಯ ಪ್ರಭು

ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 23 ಮಂದಿ ಸಾವು

ಬಾಂಗ್ಲಾದೇಶದಲ್ಲಿ ಜೂ.29 ರಂದು ಸಂಭವಿಸಿದ ದೋಣಿ ದುರಂತದಲ್ಲಿ 23 ಪ್ರಯಾಣಿಕರು ಮೃತಪಟ್ಟಿದ್ದು, ಬುರಿಗಂಗಾ ನದಿಯಲ್ಲಿ ದೋಣಿ ಮುಳುಗಿ ಅವಘಡ ಸಂಭವಿಸಿದೆ. ಸುಮಾರು 50 ಪ್ರಯಾಣಿಕರು ದೋಣಿಯಲ್ಲಿದ್ದರು. ಮೃತರು ಮೂವರು ಮಕ್ಕಳು, ಆರು ಮಂದಿ ಮಹಿಳೆಯರು ಸೇರಿದ್ದಾರೆ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿ ಶಹಜಹಾನ್‍ ಶಿಕ್ತೇರ್ ತಿಳಿಸಿದ್ದಾರೆ. ಅದರಲ್ಲಿ ಕೆಲವು ಪ್ರಯಾಣಿಕರು ಈಜಿ ಪಾರಾಗಿದ್ದು, ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಇಲ್ಲಿಯವರೆಗೂ ಒಟ್ಟು 23 ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.

ಮಂಗಳೂರು: ನೂತನ ಪೊಲೀಸ್ ಕಮೀಷನರ್ ಆಗಿ ವಿಕಾಸ್ ಕುಮಾರ್ ಅಧಿಕಾರ ಸ್ವೀಕಾರ 

ಮಂಗಳೂರು: ನಗರದ ನೂತನ ಪೊಲೀಸ್ ಕಮೀಷನರ್ ಆಗಿ ವಿಕಾಸ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮನ ಪೊಲೀಸ್ ಆಯುಕ್ತರಾದ ಡಾ.ಪಿ.ಎಸ್ ಹರ್ಷ ಅವರು ಈಗಾಗಲೇ ವಾರ್ತಾ ಇಲಾಖೆಯ ಆಯುಕ್ತರಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಕಾಸ್ ಕುಮಾರ್ ಅವರು ಹಿಂದೆ ಚಿಕ್ಕಮಂಗಳೂರು ಎಸ್ಪಿಯಾಗಿ, ಆಂತರಿಕ ಭದ್ರತೆ ವಿಭಾಗ, ನಕ್ಸಲ್ ನಿಗ್ರಹದಳದ ಡಿಐಜಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.