ಉಡುಪಿಯಲ್ಲಿ ಇಂದು ಕೂಡ 9 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಇಂದು ಹೊಸದಾಗಿ 9 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1125ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಯಡಿಯೂರಪ್ಪ
ಬೆಂಗಳೂರು: ಸದ್ಯ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟು ಸರಿಯಿಲ್ಲ. ಹಾಗಾಗಿ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ವಪಕ್ಷ ಶಾಸಕರ ಸಭೆ ಕರೆದಿದ್ದೇನೆ. ಅವರ ಜೊತೆ ಚರ್ಚೆ ಮಾಡುತ್ತೇವೆ. ಅವರ ವಿಧಾನಸಭಾ ಕ್ಷೇತ್ರಗಳಲ್ಲಿ ಕೊರೊನಾ ನಿಯಂತ್ರಣ ಕುರಿತಂತೆ ಸೂಕ್ತ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಈಗ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಆದ್ದರಿಂದ ಬೆಂಗಳೂರಿನಲ್ಲಿ ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ವಿಪಕ್ಷಗಳ […]
ಇನ್ನು ಮುಂದೆ ಫೇರ್ ಆ್ಯಂಡ್ ಲೈವ್ಲಿಯಲ್ಲಿ “ಫೇರ್ “ಪದ ಮಾಯ ಇನ್ನೇನಿದ್ರೂ “ಗ್ಲೋ ಆ್ಯಂಡ್ ಲವ್ಲಿ”
ಮುಖವನ್ನು ಕಾಂತಿಯುತ ಮಾಡುವ ಕ್ರೀಮ್ ಗಳಲ್ಲಿ ಒಂದಾಗಿದ್ದ ಹಿಂದುಸ್ತಾನ್ ಯುನಿಲಿವರ್ ಕಂಪೆನಿಯ ಉತ್ಪನ್ನವಾದ ಫೇರ್ ಆ್ಯಂಡ್ ಲೈವ್ಲಿಯಲ್ಲಿ ಹೆಸರು ಇನ್ನು ಮುಂದೆ ಬದಲಾಗಲಿದೆ. ಹೆಸರಿನಿಂದ ಫೇರ್ ಅನ್ನುವ ಪದವನ್ನು ತೆಗೆಯಲು ಕಂಪೆನಿ ನಿರ್ಧರಿಸಿದೆ.ಇನ್ನು ಮುಂದೆ ‘ಗ್ಲೋ ಆ್ಯಂಡ್ ಲವ್ಲಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ.
ಎಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಕೊರೋನಾ ಸೋಂಕು!
ಯಾದಗಿರಿ: ಹತ್ತಿರದ ಮಹಾರಾಷ್ಟ್ರದಿಂದ ಯಾದಗಿರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಈ ವಿದ್ಯಾರ್ಥಿ ಒಟ್ಟಿಗೆ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡಿದೆ. ವಿದ್ಯಾರ್ಥಿಯು ಯಾದಗಿರಿ ಸಮೀಪದ ಯಡಳ್ಳಿ ಗ್ರಾಮದವನಾಗಿದ್ದು, ಕಳೆದ ಎರಡು ತಿಂಗಳ ಲಾಕ್ ಡೌನ್ ಸಮಯದಲ್ಲಿ ಈತ ಮಹಾರಾಷ್ಟ್ರದ ಪುಣೆಯಲ್ಲಿ ಸಿಲುಕಿದ್ದನು. ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಈತ ಜೂನ್ 22ರಂದು ರಾಜ್ಯಕ್ಕೆ ಮರಳಿದ್ದು, ಪ್ರಯಾಣದ ಹಿನ್ನೆಲೆ ಜಿಲ್ಲಾಡಳಿತ ವಿದ್ಯಾರ್ಥಿಯನ್ನು ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಿತ್ತು. ನಂತರ ವಿದ್ಯಾರ್ಥಿಯ ರಕ್ತದ ಮಾದರಿ […]