ಅಂತರರಾಷ್ಟ್ರೀಯ ಎಲ್ಲಾ ವಿಮಾನಯಾನ ಸೇವೆಗಳು ಜುಲೈ 15ರವರೆಗೆ ರದ್ದು

ನವದೆಹಲಿ: ಮುಂದಿನ ಜುಲೈ 15ರವರೆಗೆ ಅಂತರರಾಷ್ಟ್ರೀಯ ಎಲ್ಲಾ ವಿಮಾನಯಾನ ಸೇವೆಗಳನ್ನು  ರದ್ದುಪಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ನಿರ್ದಿಷ್ಟ ಪ್ರಕರಣಗಳನ್ನು ಆಧರಿಸಿ ಆಯ್ದ ಮಾರ್ಗಗಳಲ್ಲಿ ಅನುಮತಿ ನೀಡಬಹುದು ಎಂದು ತಿಳಿಸಿದೆ. ದೇಶದಲ್ಲಿ ಸದ್ಯಕ್ಕೆ ವಂದೇ ಮಾತರಂ ಮಿಷನ್‌ ಅಡಿಯಲ್ಲಿ ಏರ್‌ ಇಂಡಿಯಾ ಮತ್ತು ಕೆಲ ಖಾಸಗಿ ವೈಮಾನಿಕ ಸಂಸ್ಥೆಗಳು ಕೆಲವೊಂದು ವಿಮಾನ ಸೇವೆಯನ್ನು ಒದಗಿಸುತ್ತಿದೆ.

ಮಂಗಳೂರು: ಪೊಲೀಸ್ ಕಮಿಷನರ್ ಡಾ.ಪಿ. ಹರ್ಷ ವರ್ಗಾವಣೆ: ವಿಕಾಸ್ ಕುಮಾರ್ ನೇಮಕ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ.ಪಿ. ಎಸ್ ಹರ್ಷ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.‌ ದೇಶದಾದ್ಯಂತ ಸುದ್ದಿಗೆ ಕಾರಣವಾಗಿದ್ದ ಮಂಗಳೂರು ಗೋಲಿಬಾರ್ ಪ್ರಕರಣ , ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿದ ಪ್ರಕರಣ ಇವರ ಅವಧಿಯಲ್ಲಿ ನಡೆದಿತ್ತು. ‌ಹರ್ಷ ಅವರನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಯ ಡಿಐಜಿ ಮತ್ತು ಕಮೀಷನರ್ ಆಗಿ ನೇಮಿಸಲಾಗಿದೆ. ಕಾರ್ಕಳ ಎ ಎನ್ ಎಫ್ ನಲ್ಲಿ ಐಜಿಪಿ ಯಾಗಿದ್ದ ವಿಕಾಸ್ ಕುಮಾರ್ ಅವರನ್ನು ಮಂಗಳೂರು ಪೊಲೀಸ್ ಕಮೀಷನರ್ […]

ತಪ್ಪಿದ ವಿಧಾನಪರಿಷತ್ ಟಿಕೆಟ್, ಮತ್ತೆ ವಕೀಲ ವೃತ್ತಿ ಆರಂಭಿಸಿದ ಐವನ್ ಡಿಸೋಜ

ಮಂಗಳೂರು: ವಿಧಾನಪರಿಷತ್ ಸದಸ್ಯರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಐವನ್ ಡಿ’ ಸೋಜ ಅವರ ಸದಸ್ಯತ್ವದ ಅವಧಿ ಮುಕ್ತಾಯಗೊಂಡಿದ್ದು, ಎರಡನೇ ಅವಧಿಗೆ ವಿಧಾನಪರಿಷತ್ ಸದಸ್ಯತ್ವಕ್ಕೆ ಅವಕಾಶ ಸಿಗದ ಕಾರಣ ಹಿಂದೆ ಮಾಡುತ್ತಿದ್ದ ವಕೀಲ ವೃತ್ತಿಯನ್ನು ಮತ್ತೆ ಆರಂಭಿಸಿದ್ದಾರೆ. ಬಹಳ ಚುರುಕಿನ ವಿಧಾನಪರಿಷತ್ ಸದಸ್ಯರಾಗಿ ಗುರುತಿಸಿಕೊಂಡಿದ್ದ ಐವನ್ ಡಿ’ ಸೋಜ, ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ವರ್ಷಕ್ಕೆ ಸಿದ್ದರಾಮಯ್ಯ ಸರಕಾರದಲ್ಲಿ ಸರಕಾರಿ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರಕಾರದಲ್ಲಿ ಕಂದಾಯ […]

ವಿಶ್ವಪ್ರಸನ್ನ ಶ್ರೀಪಾದರಿಂದ ಆರಾಧ್ಯ ದೇವರಾದ ಶ್ರೀ ರಾಮ ವಿಠಲ ದೇವರಿಗೆ ಮಹಾಭಿಷೇಕ

ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಆರಾಧ್ಯ ದೇವರಾದ ಮಧ್ವಕರಾರ್ಚಿತ ಶ್ರೀ ರಾಮ ವಿಠಲ ದೇವರಿಗೆ ಇಂದು ನೀಲಾವರದ ಗೋಶಾಲೆಯ ಆವರಣದಲ್ಲಿರುವ ಶಾಖಾಮಠದಲ್ಲಿ ವಾರ್ಷಿಕ ಮಹಾಭಿಷೇಕವನ್ನು  ನೆರವೇರಿಸಿದರು.

ಹುತಾತ್ಮ ವೀರಯೋಧರಿಗೆ ಕಾಂಗ್ರೆಸ್ ನಿಂದ ಗೌರವ ಸಲ್ಲಿಕೆ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಜ್ಜರಕಾಡಿನ ಸೈನಿಕ ಯುದ್ಧ ಸ್ಮಾರಕದ ಬಳಿ ಈಚೆಗೆ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಎಂ.ಎ. ಗಫೂರ್, ರಮೇಶ್ ಕಾಂಚನ್, ಹರೀಶ್ ಕಿಣಿ ಅಲೆವೂರು, ನರಸಿಂಹಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ದಿನೇಶ್ ಪುತ್ರನ್ , ಉದ್ಯಾವರ ನಾಗೇಶ್ ಕುಮಾರ್, ಸತೀಶ್ ಅಮೀನ್ ಪಡುಕರೆ, ಜನಾರ್ದನ ಭಂಡಾರ್ಕರ್ ಮೊದಲಾದವರು ಇದ್ದರು.