udupixpress
Home Trending ಇನ್ನು ಮುಂದೆ ಫೇರ್‌ ಆ್ಯಂಡ್ ಲೈವ್ಲಿಯಲ್ಲಿ "ಫೇರ್ "ಪದ ಮಾಯ ಇನ್ನೇನಿದ್ರೂ "ಗ್ಲೋ ಆ್ಯಂಡ್‌...

ಇನ್ನು ಮುಂದೆ ಫೇರ್‌ ಆ್ಯಂಡ್ ಲೈವ್ಲಿಯಲ್ಲಿ “ಫೇರ್ “ಪದ ಮಾಯ ಇನ್ನೇನಿದ್ರೂ “ಗ್ಲೋ ಆ್ಯಂಡ್‌ ಲವ್ಲಿ”

ಮುಖವನ್ನು ಕಾಂತಿಯುತ ಮಾಡುವ ಕ್ರೀಮ್ ಗಳಲ್ಲಿ ಒಂದಾಗಿದ್ದ ಹಿಂದುಸ್ತಾನ್ ಯುನಿಲಿವರ್ ಕಂಪೆನಿಯ ಉತ್ಪನ್ನವಾದ ಫೇರ್‌ ಆ್ಯಂಡ್ ಲೈವ್ಲಿಯಲ್ಲಿ  ಹೆಸರು ಇನ್ನು ಮುಂದೆ ಬದಲಾಗಲಿದೆ. ಹೆಸರಿನಿಂದ ಫೇರ್ ಅನ್ನುವ ಪದವನ್ನು ತೆಗೆಯಲು ಕಂಪೆನಿ ನಿರ್ಧರಿಸಿದೆ.ಇನ್ನು ಮುಂದೆ  ‘ಗ್ಲೋ ಆ್ಯಂಡ್‌ ಲವ್ಲಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ.

ಬೆಂಗಳೂರು: ಮುಖವನ್ನು ಕಾಂತಿಯುತ ಮಾಡುವ ಕ್ರೀಮ್ ಗಳಲ್ಲಿ ಒಂದಾಗಿದ್ದ ಹಿಂದುಸ್ತಾನ್ ಯುನಿಲಿವರ್ ಕಂಪೆನಿಯ ಉತ್ಪನ್ನವಾದ ಫೇರ್‌ ಆ್ಯಂಡ್ ಲೈವ್ಲಿಯಲ್ಲಿ  ಹೆಸರು ಇನ್ನು ಮುಂದೆ ಬದಲಾಗಲಿದೆ. ಹೆಸರಿನಿಂದ ಫೇರ್ ಅನ್ನುವ ಪದವನ್ನು ತೆಗೆಯಲು ಕಂಪೆನಿ ನಿರ್ಧರಿಸಿದೆ.ಇನ್ನು ಮುಂದೆ  ‘ಗ್ಲೋ ಆ್ಯಂಡ್‌ ಲವ್ಲಿ ಎಂದು ಮರುನಾಮಕರಣ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ.

ಕಪ್ಪು ಮೈಬಣ್ಣದವರ ವಿರುದ್ಧದ ಧೋರಣೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಬಹುದಿನಗಳಿಂದ ಟೀಕೆಗೆ ಗುರಿಯಾಗಿದ್ದ ಯುನಿಲಿವರ್‌ ಸೌಂದರ್ಯವರ್ಧಕ ಕಂಪೆನಿಯ ಭಾರತೀಯ ಘಟಕವು, ತನ್ನ ‘ಫೇರ್‌ ಆ್ಯಂಡ್ ಲೈವ್ಲಿ’ ಬ್ರಾಂಡ್‌ನಿಂದ ‘ಫೇರ್‌’ ಪದವನ್ನು ಕೈಬಿಡಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಜನಾಂಗೀಯ ತಾರತಮ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನದಿಂದಾಗಿ ಹಿನ್ನಡೆ ಉಂಟಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಈ ಅಭಿಯಾನಕ್ಕೂ ಕಂಪೆನಿ ನಿರ್ಧಾರಕ್ಕೂ ಸಂಬಂಧವಿಲ್ಲ ಎಂದಿರುವ ಹಿಂದೂಸ್ತಾನ್‌ ಯೂನಿಲಿವರ್‌ ಅಧ್ಯಕ್ಷ ಸಂಜೀವ್‌ ಮೆಹ್ತಾ, ‘ಸೌಂದರ್ಯ ಕ್ಷೇತ್ರದಲ್ಲಿ ಸಮಗ್ರತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಪೊಸಿಟಿವ್ ದೃಷ್ಟಿಕೋನದತ್ತ: ಕಂಪೆನಿಯು ಫೇರ್ ಅನ್ನುವ ಪದ ತೆಗೆದಿರುದಕ್ಕೆ ಕಂಪೆನಿಯ ಸಕಾರಾತ್ಮಕ ದೃಷ್ಟಿಕೋನ ಕಾರಣ.‘ಫೇರ್’ (ಕಪ್ಪಲ್ಲದ ಸೌಂದರ್ಯ), ‘ಬಿಳಿ’ ಮತ್ತು ‘ಬೆಳಕು’ ಎಂಬ ಪದಗಳು ಸೌಂದರ್ಯದ ಬಗೆಗಿನ ಒಂದೇ ಅರ್ಥವನ್ನು ನೀಡುತ್ತವೆ ಹಾಗಾಗಿ ಗ್ಲೋ ಅನ್ನುವ ಹೆಸರೇ ಕಂಪೆನಿಗೆ ಸೂಕ್ತವೆನ್ನಿಸಿದೆ ಎಂದಿದ್ದಾರೆ.

ಹೊಸದಾಗಿ ‘ಗ್ಲೋ ಆ್ಯಂಡ್‌ ಲವ್ಲಿ’ ಎಂದು ಬಳಸಲಾಗುವುದು. ಈ ಬದಲಾವಣೆಗೆ ಟ್ರೇಡ್‌ಮಾರ್ಕ್‌ ರೆಜಿಸ್ಟ್ರೇಷನ್‌ ಅನುಮತಿ ದೊರೆಯಬೇಕಾಗಿದೆ ಎನ್ನಲಾಗಿದ್ದು ಹೆಸರು ಬದಲಾವಣೆಗೆ ಕೊಂಚ ಸಮಯ ಹಿಡಿಯಲಿದೆ