ವಿಶ್ವದ 10 ಸಿರಿವಂತರ ಪಟ್ಟಿಯಲ್ಲಿ ರಿಲಾಯನ್ಸ್ ನ ಮುಕೇಶ್ ಅಂಬಾನಿ

ಬೆಂಗಳೂರು: ವಿಶ್ವದ 10 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು  ಸೇರ್ಪಡೆಯಾಗಿದ್ದು, ಒರಾಕಲ್‌ ಕಾರ್ಪೊರೇಷನ್ನಿನ ಲ್ಯಾರಿ ಎಲಿಸನ್‌ ಮತ್ತು ಫ್ರಾನ್ಸ್‌ನ ಸಿರಿವಂತ ಮಹಿಳೆ ಫ್ರೆನ್ಸ್‌ವಾಸ್‌ ಬೆಟೆನ್‌ಕೋರ್ಟ್‌ ಮೆಯೆರ್ಸ್‌ ಅವರನ್ನು ಹಿಂದಿಕ್ಕಿ 9ನೇ ಸ್ಥಾನ ಪಡೆದಿದ್ದಾರೆ. ಬ್ಲೂಮ್‌ಬರ್ಗ್‌ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ, ಮುಕೇಶ್ ಅಂಬಾನಿಯವರು 4,83,750‬ ಕೋಟಿ ರೂ. ಮೊತ್ತದ ಸಂಪತ್ತಿನ ಗೌರವಕ್ಕೆ ಪಾತ್ರರಾಗಿದ್ದು, ಏಷ್ಯಾದ ಏಕೈಕ ಉದ್ಯಮಿಯಾಗಿ ವಿಶ್ವದ ಮೊದಲ 10 ಮಂದಿ ಸಿರಿವಂತರ ಸಾಲಿಗೆ ಮುಕೇಶ್‌ ಅಂಬಾನಿ ಅವರು ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ […]

ಕುಂದಾಪುರ: ಪತ್ರಕರ್ತರಿಗೆ ರೋಗನಿರೋಧಕ ಶಕ್ತಿವರ್ದಕ ವಿತರಣೆ

ಕುಂದಾಪುರ: ಕೋವಿಡ್ ವಿರುದ್ಧದ ಸಮರದಲ್ಲಿ ಪತ್ರಕರ್ತರು ವಹಿಸಿದ ಪಾತ್ರ ಬಹಳ ಮಹತ್ತರವಾದದ್ದು. ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರ ಶ್ರಮ ಅಪಾರ’ ಎಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಹೇಳಿದ್ದಾರೆ. ಕುಂದಾಪುರದ ಸರ್ಕಾರಿ ಅಯುಷ್ ಆಸ್ಪತ್ರೆಯಲ್ಲಿ ಪತ್ರಕರ್ತರ ರೋಗ ನಿರೋಧಕ ಶಕ್ತಿ ವೃದ್ಧಿಗೆ ನೀಡಲಾದ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು. ಕೊರೋನಾದ ಪ್ರಭಾವ ಇನ್ನಷ್ಟು ಸಮಯ ಮುಂದುವರಿಯಲಿದೆ. ಲಾಕ್ ಡೌನ್ ಸಡಿಲಿಕೆಯ ಬಳಿಕ ಜನಸಾಮಾನ್ಯರು ಕೋವಿಡ್ ಕುರಿತು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಸಾಮಾಜಿಕ […]

ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಉಭಯ ಪಡೆಗಳ ನಿರ್ಧಾರ

ಬೀಜಿಂಗ್: ಗಡಿಯಲ್ಲಿ ಉದ್ಭವಿಸಿರುವ ಯುದ್ಧದ ಸ್ಥಿತಿಯನ್ನು ತಣ್ಣಗಾಗಿಸಲು ಭಾರತ ಹಾಗೂ ಚೀನಾದ ಸೇನಾಪಡೆಗಳು ಮುಂದಾಗಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಎರಡೂ ಕಡೆಗಳ ಉದ್ವಿಗ್ನತೆ ಶಮನ ಮಾಡುವ ಉದ್ದೇಶದಿಂದ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಹಾಗೂ ಟಿಬೆಟ್‌ನ ಮೇಜರ್ ಜನರಲ್ ಲು ಲಿನ್ ನಡುವೆ  ಸೋಮವಾರ ಸುದೀರ್ಘ 11 ಗಂಟೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಜೂನ್ 22ರಂದು ನಡೆದ ಕಮಾಂಡರ್ ಹಂತದ ಮಾತುಕತೆಯಲ್ಲಿ ಪರಸ್ಪರರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು. ‘ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಮೂಡಿದ್ದ […]

ಉಡುಪಿ: ನಾಲ್ಕು ಮಕ್ಕಳು ಸಹಿತ 11 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ನಾಲ್ಕು ಮಕ್ಕಳು ಸಹಿತ ಇಂದು ಜಿಲ್ಲೆಯಲ್ಲಿ 11 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1088 ಕ್ಕೆ ಏರಿಕೆ ಆಗಿದೆ. ಈವರೆಗೆ 969 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನು 117 ಮಂದಿ ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ‌ ನೀಡಿದೆ.

ಬಂದಿದೆ 125 ಹೊಸ ಮಾದರಿಯ ಸ್ಟೈಲಿಶ್ ಬಜಾಜ್ ಪಲ್ಸರ್: ಇದ್ರಲ್ಲೇನಿದೆ ವಿಶೇಷ?

ಪಲ್ಸರ್ ಬೈಕೆಂದರೆ ಈಗಲೂ ಯುವಜನತೆ ಹುಚ್ಚಾಪಟ್ಟೆ ಮಾರುಹೋಗುತ್ತಾರೆ.ಬೈಕ್ ಜಗತ್ತಿನಲ್ಲಿ ಪಲ್ಸರ್ ಉಂಟು ಮಾಡಿರುವ ಕ್ರೇಜ್ ಹಾಗಿದೆ.ವಿಭಿನ್ನ ಮಾದರಿಯ ಪಲ್ಸರ್ ಬೈಕುಗಳು ಈಗಾಗಲೇ ರೋಡಿಗೆ ಮಾತ್ರ ಇಳಿದಿಲ್ಲ.ಹುಡುಗರ ಎದೆಯೊಳಗೂ ಇಳಿದುಬಿಟ್ಟಿದೆ. ಅದೇ ಸಾಲಿಗೆ ಈಗ ಪಲ್ಸರ್ ನ ಇನ್ನೊಂದು ಮಾದರಿಯ ಬೈಕ್ ಸ್ಪರ್ಧೆ ನೀಡಲು ಬಂದಿದೆ.ಹೌದು ಬಜಾಜ್ ಪಲ್ಸರ್ 125 ಹೊಸ ಮಾದರಿಯ ಬೈಕ್ ಜೂ.18 ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದೆ. ಸಿಂಗಲ್ ಸೀಟ್ ಡಿಸ್ಕ್ ಬ್ರೇಕ್ ಪಲ್ಸರ್ 125 ಗಿಂತ 3,597 ರೂಪಾಯಿ […]