ಗೋಸಾಗಟ ತಡೆಯಲು ರಾಜ್ಯ ಸರಕಾರ ವಿಫಲ: ಶರಣ್ ಪಂಪ್ವೆಲ್

ಮಂಗಳೂರು: ಇತ್ತೀಚಿಗೆ ಮಂಗಳೂರಿನ ಕೊಟ್ಟಾರದಲ್ಲಿ ಗೋ ಸಾಗಾಟ ಮಾಡುವಾಗ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದು ವಿಎಚ್ ಪಿ ಅವರಲ್ಲ. ಗೋ ಸಾಗಾಟ ಪ್ರಕರಣ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.  ಮಂಗಳೂರಿನ ಕದ್ರಿಯ ವಿಶ್ವಶ್ರೀ  ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಜಾನುವಾರುಗಳ  ಕಳ್ಳತನವಾಗ್ತಿದೆ. ಇದರ ಹಿಂದೆ ಗೋಕಳ್ಳರ ಬೃಹತ್ ಜಾಲವಿದೆ. ಕದ್ದ ಗೋವುಗಳಿಗೆ ಎಲ್ಲಿಂದಲೋ ಖರೀದಿಸಿದ […]

ಮುನಿಯಾಲು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಅನುಮತಿ

ಮಣಿಪಾಲ: ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್ ‌ಟ್ರಸ್ಟ್‌ಗೆಯೋಗ ಮತ್ತು ನ್ಯಾಚುರೋಪತಿ ಕಾಲೇಜು ನಡೆಸಲು ಸರಕಾರದಅನುಮತಿದೊರೆತಿದೆಎಂದು ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಡಾಯು ಕೃಷ್ಣ ಮುನಿಯಾಲು ಇವರು೧೯೩೯ರಲ್ಲಿ ಸ್ಥಾಪಿಸಿದ ಮುನಿಯಾಲು ಆಯುರ್ವೇದ ಸಂಸ್ಥೆಯು ಸದ್ಯ ಆಯುರ್ವೇದ ಆಸ್ಪತ್ರೆ, ಕಾಲೇಜು, ಸ್ನಾತಕೋತ್ತರ ವಿಭಾಗ, ಪಿ.ಹೆಚ್.ಡಿ. ಕೋರ್ಸುಗಳು, ಚಿಕಿತ್ಸಾಲಯಗಳು, ಸಂಶೋಧನಾಕೇಂದ್ರ, ಔಷಧಿ ತಯಾರಿಕಾ ಘಟಕ, ಗ್ರಂಥರಚನಾ ಕೇಂದ್ರ, ಗಿಡಮೂಲಿಕಾ ವನ ಮುಂತಾದವುಗಳನ್ನು ನಡೆಸುತ್ತಿದೆ. ಯೋಗದ ಉಪಯುಕ್ತತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡುತ್ತಿರುವ ಈ ಸಂದರ್ಭದಲ್ಲಿ ಪುರಾತನ ಯೋಗ […]

ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ ರಾಜ್ಯದಾದ್ಯಂತ ಬೆಳಿಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೆ ಪಾರ್ಕ್‌ ತೆರೆಯಲು ಅವಕಾಶ

ಬೆಂಗಳೂರು: ರಾಜ್ಯ ಸರ್ಕಾರ ಲಾಕ್‌ಡೌನ್‌ ನಿರ್ಬಂಧವನ್ನು ಮತ್ತಷ್ಟು ಸಡಿಲಿಸಿದ್ದು, ಅದರಂತೆ ರಾಜ್ಯದಾದ್ಯಂತ  ಕಂಟೈನ್‌ಮೆಂಟ್‌ ಪ್ರದೇಶ ಹೊರತುಪಡಿಸಿ ಉಳಿದೆಡೆಗಳಲ್ಲಿ ಎಲ್ಲ ಉದ್ಯಾನವನಗಳನ್ನು (ಪಾರ್ಕ್‌ಗಳು) ಬೆಳಿಗ್ಗೆ 5 ರಿಂದ ರಾತ್ರಿ 9 ಗಂಟೆ ಅವಧಿಯ ಒಳಗೆ ತೆರೆಯುವ ಸಮಯವನ್ನು ಸ್ಥಳೀಯ ಮಹಾನಗರಪಾಲಿಕೆ, ಪಾಲಿಕೆಗಳು ನಿರ್ಧರಿಸಬಹುದು ಎಂದು ಆದೇಶ ಹೊರಡಿಸಿದೆ. ಈ ಹಿಂದಿನ ಆದೇಶದಂತೆ ಎಲ್ಲ ಪಾರ್ಕ್‌ಗಳನ್ನು ಬೆಳಿಗ್ಗೆ 7ರಿಂದ 9 ಗಂಟೆವರೆಗೆ ಮತ್ತು ಸಂಜೆ 4ರಿಂದ 7 ಗಂಟೆವರೆಗೆ ಸಾರ್ವಜನಿಕರಿಗಾಗಿ ತೆರೆಯಲಾಗುತ್ತಿತ್ತು. ಇನ್ನು ಮುಂದೆ, ಆಯಾ ಸ್ಥಳೀಯ ಸಂಸ್ಥೆಗಳು ಈ […]

ಉಡುಪಿಯಲ್ಲಿ ಮತ್ತೆ 13 ಕೊರೊನಾ ಪಾಸಿಟಿವ್ ದೃಢ

ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 13 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1063ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈವರೆಗೆ ಜಿಲ್ಲೆಯಲ್ಲಿ 953 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 108 ಸಕ್ರಿಯ ಸೋಂಕಿತ ಪ್ರಕರಣಗಳಿವೆ.

ಜೂನ್ 25 ರಿಂದ ಎಸ್‌.ಎಸ್.ಎಲ್.ಸಿ ಪರೀಕ್ಷೆ: ನಿಷೇಧಾಜ್ಞೆ ಜಾರಿ: ಡಿಸಿ ಜಿ. ಜಗದೀಶ್

ಉಡುಪಿ ಜೂನ್ 20: ಜಿಲ್ಲೆಯಲ್ಲಿ ಜೂನ್ 25 ರಿಂದ ಜುಲೈ 4 ರ ವರೆಗೆ  2020 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು, ಜಿಲ್ಲೆಯ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಪರೀಕ್ಷೆಗಳನ್ನು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಮತ್ತು ಯಾವುದೇ ಅವ್ಯವಹಾರ, ಅಶಿಸ್ತು ನಡೆಯದಂತೆ ಮತ್ತು ಪರೀಕ್ಷೆಗಳು ಪಾರದರ್ಶಕವಾಗಿ ಹಾಗೂ ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ಈ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಜಿ ಜಗದೀಶ್ ನಿಷೇಧಾಜ್ಞೆ ಘೋಷಿಸಿದ್ದಾರೆ. ಪರೀಕ್ಷೆಗಳು […]