ಗೋಸಾಗಟ ತಡೆಯಲು ರಾಜ್ಯ ಸರಕಾರ ವಿಫಲ: ಶರಣ್ ಪಂಪ್ವೆಲ್

ಮಂಗಳೂರು: ಇತ್ತೀಚಿಗೆ ಮಂಗಳೂರಿನ ಕೊಟ್ಟಾರದಲ್ಲಿ ಗೋ ಸಾಗಾಟ ಮಾಡುವಾಗ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದು ವಿಎಚ್ ಪಿ ಅವರಲ್ಲ. ಗೋ ಸಾಗಾಟ ಪ್ರಕರಣ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಶ್ವ ಹಿಂದೂ ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.  ಮಂಗಳೂರಿನ ಕದ್ರಿಯ ವಿಶ್ವಶ್ರೀ  ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಜಾನುವಾರುಗಳ  ಕಳ್ಳತನವಾಗ್ತಿದೆ. ಇದರ ಹಿಂದೆ ಗೋಕಳ್ಳರ ಬೃಹತ್ ಜಾಲವಿದೆ. ಕದ್ದ ಗೋವುಗಳಿಗೆ ಎಲ್ಲಿಂದಲೋ ಖರೀದಿಸಿದ ಚೀಟಿಗಳನ್ನು ಗೋಕಳ್ಳರು ತಂದು ಕದ್ದ ಜಾನುವಾರುಗಳನ್ನು ಸಕ್ರಮ ಎಂದು ತೋರಿಸುತ್ತಿದ್ದಾರೆ.
ಇದನ್ನು ತಡೆಯಲು ರಾಜ್ಯ ವ್ಯಾಪ್ತಿ ಜಾನುವಾರು ಸಾಗಾಟಕ್ಕೆ ಅಪ್ ಮಾಡಬೇಕು. ಪ್ರತಿ ಪೊಲೀಸ್ ಠಾಣೆಯಲ್ಲಿ ಗೋವುಗಳ ಕಳ್ಳ ಸಾಗಾಟ ಮತ್ತು ಹತ್ಯೆ ಪತ್ತೆಹಚ್ಚಲು ವಿಶೇಷ ತಂಡ ರಚಿಸಬೇಕು ಎಂದು ಆಗ್ರಹಿಸಿದರು. ಗೋ ಕಳ್ಳ ಸಾಗಾಣಿಕೆಯ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲ ಯಾವತ್ತೂ ಇದೆ ಎಂದ ಅವರು, ಪ್ರತಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ಬೇಹುಗಾರಿಕೆ ನಡೆಸಿ, ತಾಣ ವ್ಯಾಪ್ತಿಯಲ್ಲಿ
ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ ನಡೆಯದಂತೆ ಠಾಣಾಧಿಕಾರಿಗಳಿಗೆ ಜವಾಬ್ದಾರಿ
ವಹಿಸಬೇಕು ಎಂದು ಆಗ್ರಹಿಸಿದ್ದಾರೆ.