ಮುನಿಯಾಲು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಅನುಮತಿ

ಮಣಿಪಾಲ: ಡಾ. ಯು. ಕೃಷ್ಣ ಮುನಿಯಾಲ್ ಮೆಮೋರಿಯಲ್ ‌ಟ್ರಸ್ಟ್‌ಗೆಯೋಗ ಮತ್ತು ನ್ಯಾಚುರೋಪತಿ ಕಾಲೇಜು ನಡೆಸಲು ಸರಕಾರದಅನುಮತಿದೊರೆತಿದೆಎಂದು ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಡಾಯು ಕೃಷ್ಣ ಮುನಿಯಾಲು ಇವರು೧೯೩೯ರಲ್ಲಿ ಸ್ಥಾಪಿಸಿದ ಮುನಿಯಾಲು ಆಯುರ್ವೇದ ಸಂಸ್ಥೆಯು ಸದ್ಯ ಆಯುರ್ವೇದ ಆಸ್ಪತ್ರೆ, ಕಾಲೇಜು, ಸ್ನಾತಕೋತ್ತರ ವಿಭಾಗ, ಪಿ.ಹೆಚ್.ಡಿ. ಕೋರ್ಸುಗಳು, ಚಿಕಿತ್ಸಾಲಯಗಳು, ಸಂಶೋಧನಾಕೇಂದ್ರ, ಔಷಧಿ ತಯಾರಿಕಾ ಘಟಕ, ಗ್ರಂಥರಚನಾ ಕೇಂದ್ರ, ಗಿಡಮೂಲಿಕಾ ವನ ಮುಂತಾದವುಗಳನ್ನು ನಡೆಸುತ್ತಿದೆ. ಯೋಗದ ಉಪಯುಕ್ತತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡುತ್ತಿರುವ ಈ ಸಂದರ್ಭದಲ್ಲಿ ಪುರಾತನ ಯೋಗ ಪದ್ಧತಿಯ ಗತ ವೈಭವವನ್ನು ಅದರ ಎಲ್ಲಾ ಆಯಾಮಗಳೊಂದಿಗೆ ಸಂಶೋಧಿಸಿ, ಉಳಿಸಿ, ಬೆಳೆಸಲು ಇಲ್ಲಿ ಪ್ರಯತ್ನಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.