ಕುಂದಾಪುರ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ 

ಕುಂದಾಪುರ: ಕಳೆದ 10 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ವರದಿಯಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ನಿವಾಸಿ ಸುಜಾತ ಪ್ರಭು (68) ಎನ್ನುವವರು, ಮಾನಸಿಕ ಖಿನ್ನತೆ ಹಾಗೂ ತಲೆ ನೋವಿಗಾಗಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಗುರುವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಸಮೀಪದ ವೆಂಕಟೇಶ ಹೆಗ್ಡೆ ಎನ್ನುವವರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಅವರ ಪುತ್ರಿ […]

ಕುಂದಾಪುರ: ಮಾಸ್ಕ್ ಜಾಗೃತಿ ಜಾಥಾ

ಕುಂದಾಪುರ: ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಇದ್ದುದು ನಂತರದ ದಿನಗಳಲ್ಲಿ ನಾನಾ ಕಾರಣಗಳಿಂದ, ಪರ ಊರಿನಲ್ಲಿದ್ದ ಈ ಊರಿನ ಬಂಧುಗಳು ಊರಿಗೆ ಬಂದಾಗ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿತು. ಆದರೆ ಗುಣಮುಖರಾಗುವ ಪ್ರಮಾಣ ಕೂಡಾ ಉಡುಪಿ ಜಿಲ್ಲೆಯಲ್ಲಿ ಹೆಚ್ಚೇ ಇದೆ ಎಂದು ಎಸಿ ಕೆ. ರಾಜು ಹೇಳಿದರು. ಅವರು ಗುರುವಾರ ಪುರಸಭೆ ಎದುರು ಮಾಸ್ಕ್ ಧಾರಣೆ ಜಾಗೃತಿ ದಿನಾಚರಣೆ ಜಾಥಾ ಉದ್ಘಾಟಿಸಿ ಮಾತನಾಡಿದರು. ಕೋವಿಡ್-19 ನಿಯಂತ್ರಿಸುವಲ್ಲಿ  ಸರ್ಕಾರದೊಂದಿಗೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಎಲ್ಲರೂ ಖಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು […]

ಪಾಲಿಕೆಯಲ್ಲಿ ಟಿ.ಡಿ.ಆರ್. ಸೆಲ್ ತೆರೆಯಲು ಶಾಸಕ ಕಾಮತ್ ಸೂಚನೆ

ಮಂಗಳೂರು: ಅಪೂರ್ಣಗೊಂಡಿರುವ ಎಲ್ಲಾ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವ ಕುರಿತು  ಸ್ಮಾರ್ಟ್ ಸಿಟಿ ಅಧಿಕಾರಿಗಳು, ಕಾರ್ಯ ಅಭಿಯಂತರ, ಸಹಾಯಕ ಅಭಿಯಂತರರು, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಶಾಸಕ‌ ವೇದವ್ಯಾಸ್ ಕಾಮತ್ ಅವರು ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಶಾಸಕ ಕಾಮತ್, ಮಂಗಳೂರು ನಗರದ ಭವಂತಿ‌ ಸ್ಟ್ರೀಟ್, ಎಸ್.ಎಲ್ ಮಥಾಯಿಸ್ ರಸ್ತೆ, ಅಶೋಕನಗರ ಹಾಸೆಟ್ಟಿ ಸರ್ಕಲ್, ಕದ್ರಿ ಕಂಬಳ, ಸ್ಟೇಟ್ ಬ್ಯಾಂಕ್ ನೆಲ್ಲಿಕಾಯಿ ರಸ್ತೆ, ಕ್ಲಾಕ್ ಟವರ್ ಜಂಕ್ಷನ್, ಬಿಜೈ ಕೆ.ಎಸ್.ಆರ್.ಟಿ.ಸಿ ರಸ್ತೆ, ಪಳ್ಳಿ ರಸ್ತೆ […]

ಉಡುಪಿಯ ಬೀಡಿನಗುಡ್ಡೆ ವಲಸೆ ಕಾರ್ಮಿಕರ ಮಕ್ಕಳ ಜೊತೆ ಮಾಸ್ಕ್ ಡೇ ಆಚರಣೆ

ಉಡುಪಿ ಜೂನ್ 18: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿ ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ಮಾಸ್ಕ್ ಡೇ ಕಾರ್ಯಕ್ರಮವನ್ನು  ಉಡುಪಿಯ ಬೀಡಿನ ಗುಡ್ಡೆ ವಲಸೆ ಕಾರ್ಮಿಕರ ಮಕ್ಕಳ ಜೊತೆ ಗುರುವಾರ ಆಚರಿಸಲಾಯಿತು. ಚೈಲ್ಡ್ ಲೈನ್ ನ ನಿರ್ದೇಶಕ ರಾಮಚಂದ್ರ ಉಪಾದ್ಯಾಯ ,  ಮಾಸ್ಕ್ ಧರಿಸುವುದರಿಂದ ಆಗುವ ಪ್ರಯೋಜನ  ಹಾಗೂ ಮಾಸ್ಕ್ ನ ಅವಶ್ಯಕತೆಯ ಕುರಿತು ಅಲ್ಲದೇ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು. ಮಂಜುನಾಥ ಹೆಬ್ಬಾರ್ ಕೋವಿಡ್ 19 ಕುರಿತು ಅರಿವು […]

ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ: ಜಿಲ್ಲಾಧಿಕಾರಿ ಜಗದೀಶ್

ಉಡುಪಿ ಜೂನ್ 18:  ಕೊರೋನಾ ವಿರುದ್ದದ ಹೋರಾಟ ನಿರಂತರ ವಾಗಿದ್ದು, ಈ ಹೋರಾಟದಲ್ಲಿ ಬಹಳ ಮುಖ್ಯವಾದ ಅಸ್ತ್ರ ಎಂದರೆ ಮಾಸ್ಕ್ ಧರಿಸುವಿಕೆ, ಈ ನಿಟ್ಟಿನಲ್ಲಿ ಸಾರ್ವಜನಿಕರೆಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಅವರು ಗುರುವಾರ  ನಗರಸಭೆಯ ಆವರಣದಲ್ಲಿ, ಜಿಲ್ಲಾಡಳಿತ  ಮತ್ತು ಉಡುಪಿ ನಗರಸಭೆ ವತಿಯಿಂದ, ನಡೆದ  ಮಾಸ್ಕ್ ದಿನ ಆಚರಣೆ ಜನಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಸ್ಕ್ ಬಳಕೆಯಿಂದ ಶೇಕಡಾ 50 ರಷ್ಟು ಕೊರೋನಾ ಸೋಂಕನ್ನು ತಡೆಗಟ್ಟಬಹುದಾಗಿದ್ದು, ಉಡುಪಿಯಲ್ಲಿ ಸಾಕಷ್ಟು ಮಂದಿ ಮಾಸ್ಕ್ […]