Home Trending ಉಡುಪಿಯ ಬೀಡಿನಗುಡ್ಡೆ ವಲಸೆ ಕಾರ್ಮಿಕರ ಮಕ್ಕಳ ಜೊತೆ ಮಾಸ್ಕ್ ಡೇ ಆಚರಣೆ

ಉಡುಪಿಯ ಬೀಡಿನಗುಡ್ಡೆ ವಲಸೆ ಕಾರ್ಮಿಕರ ಮಕ್ಕಳ ಜೊತೆ ಮಾಸ್ಕ್ ಡೇ ಆಚರಣೆ

ಉಡುಪಿ ಜೂನ್ 18: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿ ಕೊರೊನಾ ಜಾಗೃತಿ ಮೂಡಿಸುವ ಸಲುವಾಗಿ ಮಾಸ್ಕ್ ಡೇ ಕಾರ್ಯಕ್ರಮವನ್ನು  ಉಡುಪಿಯ ಬೀಡಿನ ಗುಡ್ಡೆ ವಲಸೆ ಕಾರ್ಮಿಕರ ಮಕ್ಕಳ ಜೊತೆ ಗುರುವಾರ ಆಚರಿಸಲಾಯಿತು.

ಚೈಲ್ಡ್ ಲೈನ್ ನ ನಿರ್ದೇಶಕ ರಾಮಚಂದ್ರ ಉಪಾದ್ಯಾಯ ,  ಮಾಸ್ಕ್ ಧರಿಸುವುದರಿಂದ ಆಗುವ ಪ್ರಯೋಜನ  ಹಾಗೂ ಮಾಸ್ಕ್ ನ ಅವಶ್ಯಕತೆಯ ಕುರಿತು ಅಲ್ಲದೇ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಮಂಜುನಾಥ ಹೆಬ್ಬಾರ್ ಕೋವಿಡ್ 19 ಕುರಿತು ಅರಿವು ಮೂಡಿಸುವ ಭಿತ್ತಿಪತ್ರ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆಶಾಕಾರ್ಯಕರ್ತೆಯರ ಕೋವಿಡ್ 19 ಜನಜಾಗೃತಿ ಕಾರ್ಯಚಟುವಟಿಕೆಗಳಿಗೆ ಚಪ್ಪಾಳೆಯ ಮೂಲಕ ಅಭಿನಂದಿಸಲಾಯಿತು .

ನಂತರ ಶ್ರೀ ಕೃಷ್ಣ  ಬಾಲನಿಕೇತನ, ಕುಕ್ಕಿಕಟ್ಟೆ ಉಡುಪಿಯಲ್ಲಿ ಮಾಸ್ಕ್ ಡೇ ಆಚರಿಸಿ ಮಕ್ಕಳಿಗೆ ಮಾಸ್ಕ್ ನ್ನು ಹಂಚಿ ಸಿಹಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಜುನಾಥ ಹೆಬ್ಬಾರ್ ಹಾಗೂ ಚೈಲ್ಡ್ ಲೈನ್ ನ ನಿರ್ದೇಶಕ ರಾಮಚಂದ್ರ ಉಪಾದ್ಯಾಯ ಹಾಗೂ ಬೀಡಿನಗುಡ್ಡೆಯ ವಾರ್ಡ್ ನ ಆಶಾ ಕಾರ್ಯಕರ್ತೆ ಚಂದ್ರಾವತಿ ಮತ್ತು ರೇವತಿ ಹಾಗೂ ಶ್ರೀಕೃಷ್ಣ  ಬಾಲನಿಕೇತನದ  ಮೇಲ್ವಿಚಾರಕಿ ಕು.ಶಕುಂತಳಾ  ಮಾತಾಜಿ, ಆಶ್ರಮದ ಸಿಬ್ಬಂದಿಗಳು ಹಾಗೂ ಚೈಲ್ಡ್ ಲೈನ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!