ನಾಳೆ ನಾಗರಿಕ ಸಮಿತಿಯಿಂದ ಮಾಸ್ಕ್ ಡೇ ಕಾರ್ಯಕ್ರಮ: ಬೃಹತ್ ಮಾಸ್ಕ್ ಪ್ರದರ್ಶನ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ “ಮಾಸ್ಕ್ ಡೇ” ಕಾರ್ಯಕ್ರಮವನ್ನು ಜೂ. 18ರಂದು ಬೆಳಿಗ್ಗೆ 10.30ಕ್ಕೆ ನಗರದ ಚಿತ್ತರಂಜನ್ ಸರ್ಕಲ್ ಸಮೀಪ ಆಯೋಜಿಸಲಾಗಿದೆ. ಇದೇ ವೇಳೆ ಕ್ಲಾಸಿಕ್ ಟಚ್ ಇವರು ನಿರ್ಮಿಸಿದ ಬೃಹತ್ ಗಾತ್ರದ ಮಾಸ್ಕ್ (ಮುಖ  ಕವಚ) ಪ್ರದರ್ಶನ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ: ಮನೆಯಲ್ಲೇ ಯೋಗ ಆಚರಿಸಿ

ಉಡುಪಿ ಜೂನ್ 17: ಪ್ರತಿ ವರ್ಷದಂತೆ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದು, ಆದರೆ ಪ್ರಸ್ತುತ ಸಾಲಿನಲ್ಲಿ  ಕೋವಿಡ್-19 ಮಹಾಮಾರಿ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳನ್ನು ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸಿರುವುದರಿಂದ , ಈ ವರ್ಷ “YOGA FROM  HOME” ಘೋಷ ವಾಕ್ಯದೊಂದಿಗೆ ಮನೆಯಿಂದಲೆ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಗ ದಿನಾಚರಣೆಯನ್ನು ಆಚರಿಸಲು ಭಾರತ ಸರ್ಕಾರದ ಆಯುಷ ಮಂತ್ರಾಲಯ ಸೂಚಿಸಿದೆ. ಆದುದರಿಂದ ಸಾರ್ವಜನಿಕರು ಮನೆಯಲ್ಲೇ ಯೋಗಭ್ಯಾಸ ನಡೆಸಿ, ಫೋಟೊಗಳನ್ನು ಜಿಲ್ಲಾ ಆಯುಷ್ ಕಛೇರಿಯ ಇ-ಮೇಲ್ […]

ಉಡುಪಿಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿ ಹೆರಿಗೆ: ತಾಯಿ, ಮಗು ಸುರಕ್ಷಿತ  

ಉಡುಪಿ: ಕೋವಿಡ್ 19 ಸೋಂಕಿದ್ದ ಕಾರ್ಕಳ ತಾಲ್ಲೂಕಿನ 22 ವರ್ಷದ ತುಂಬು ಗರ್ಭಿಣಿಗೆ ಉಡುಪಿ ಡಾ. ಟಿಎಂಎ ಪೈ ಕೋವಿಡ್ 19 ಆಸ್ಪತ್ರೆಯಲ್ಲಿ ಯಶಸ್ವಿ ಹೆರಿಗೆ ಮಾಡಲಾಗಿದೆ. ಈ ಗರ್ಭಿಣಿ ಜೂನ್ 16 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನವೇ ಗರ್ಭಿಣಿಗೆ ತುರ್ತು ಸಿಸೇರಿಯನ್ ಹೆರಿಗೆ ಮಾಡಲಾಗಿತ್ತು. ಇದೀಗ ತಾಯಿ ಚೇತರಿಸಿಕೊಳ್ಳುತ್ತಿದ್ದು, ನವಜಾತ ಶಿಶು ಆರೋಗ್ಯವಾಗಿದೆ. ಪ್ರಸೂತಿ ತೊಂದರೆ ಕಾರಣಗಳಿಂದಾಗಿ ಈ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಜಿಲ್ಲೆಯಲ್ಲಿ ಕೋವಿಡ್-19  ರೋಗಿಗೆ ಇದು ಮೊದಲ ಶಸ್ತ್ರಚಿಕಿತ್ಸೆ.  ಪ್ರಸೂತಿ ಶಸ್ತ್ರಚಿಕಿತ್ಸಕರಾದ ಡಾ. […]

ಅಗಸರು, ಕ್ಷೌರಿಕರು ಪರಿಹಾರಕ್ಕೆ ಅರ್ಜಿ ಸಲ್ಲಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಜೂನ್ 16: ಕೋವಿಡ್ 19 ಕಾರಣ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನಲೆಯಲ್ಲಿ , ರಾಜ್ಯ ಸರ್ಕಾರದಿಂದ , ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿಯ ಪರಿಹಾರವಾಗಿ ರೂ.5000 ನೆರವನ್ನು ಪಡೆಯುವ ಕುರಿತಂತೆ, ಜೂನ್ 30 ರೊಳಗೆ ಜಿಲ್ಲೆಯಲ್ಲಿನ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಅಗಸ ಮತ್ತು ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರು ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಬುಧವಾರ, ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]

ಶಾಸಕಿ ರೂಪಾಲಿ ನಾಯ್ಕ್ ರಿಂದ ಮೀನುಗಾರರ ಸಾಲಮನ್ನಾಕ್ಕೆ ಸಚಿವರಿಗೆ ಮನವಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮೀನುಗಾರು ಮೀನುಗಾರಿಕೆ ಉದ್ದೇಶಕ್ಕಾಗಿ ವಿವಿಧ ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರಿ ಬ್ಯಾಂಕ್‌ ಹಾಗೂ ಕೆಡಿಸಿಸಿ ಬ್ಯಾಂಕ್‌ಗಳಿಂದ  ಪಡೆದಿದ್ದ ಸಾಲವನ್ನು ಮನ್ನಾ ಮಾಡುವಂತೆ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಕರಾವಳಿ ಭಾಗದಲ್ಲಿ ಕಡಲ ಮೀನುಗಾರಿಕೆ ಒಂದು ಉದ್ಯಮವಾಗಿದ್ದು, 2 ಲಕ್ಷಕ್ಕೂ ಅಧಿಕ ಜನರು ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ 8 ಪ್ರಮುಖ ಮೀನುಗಾರಿಕಾ ಬಂದರುಗಳಿವೆ. […]