ಹುಟ್ಟೂರು ಕಾಣುವ ಆಸೆಯಿಂದ ಹೊರಟ ಯುವಕ ದಾರಿ ಮಧ್ಯೆ ಸಾವು

ಕುಂದಾಪುರ: ಬೆಂಗಳೂರಿನಿಂದ ಕುಂದಾಪುರಕ್ಕೆ ಖಾಸಗಿ ಬಸ್ ವೊಂದರಲ್ಲಿ ಪ್ರಯಾಣ ಬೆಳೆಸಿದ್ದ ಸಾಫ್ಟ್ವೇರ್ ಉದ್ಯೋಗಿಯೋರ್ವ ಬಸ್ ನಲ್ಲೇ ಅಸ್ವಸ್ಥಗೊಂಡು ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಸಾವನ್ನಪ್ಪಿದ ಯುವಕ ಕೋಟೇಶ್ವರ ಕುಂಬ್ರಿ ನಿವಾಸಿ ವಿಷ್ಣುಮೂರ್ತಿ ಆಚಾರಿಯವರ ಪುತ್ರ ಚೈತನ್ಯ (25) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲೇ ಇಂಜಿನಿಯರ್ ಶಿಕ್ಷಣ ಪಡೆದ ಚೈತನ್ಯ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ದುಡಿಯುತ್ತಿದ್ದರು. ಕೆಲಸ‌ ಕಡಿಮೆ ಇರುವ‌ ಕಾರಣ ಹೇಳಿ ಮನೆಗೆ ಬರುವುದಾಗಿ ತಿಳಿಸಿದ್ದ ಚೈತನ್ಯ ಆನ್ಲೈನ್ನಲ್ಲಿ […]

ಗಡಿಯಲ್ಲಿ ಚೀನಾ- ಭಾರತ ಮಧ್ಯೆ ಸಂಘರ್ಷ: ಐದು ಚೀನಾ ಯೋಧರನ್ನು ಹೊಡೆದುರುಳಿಸಿದ ಭಾರತ 

ನವದೆಹಲಿ: ಲಡಾಖ್ ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತ ಹಾಗೂ ಚೀನಾ ದೇಶದ ಸೇನಾಪಡೆಯೊಂದಿಗೆ ಸಂಘರ್ಷ ಉಂಟಾಗಿದ್ದು, ಇದರಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಸಹಿತ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತ ಚೀನಾದ ಐದು ಸೈನಿಕರನ್ನು ಹೊಡೆದುರಳಿಸಿದೆ ಎಂದು ಸೇನಾಪಡೆ ಮೂಲಗಳು ಹೇಳಿವೆ. ಈ ಸಂಘರ್ಷದಲ್ಲಿ ಚೀನಾದ 11 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಸಲುವಾಗಿ ಉಭಯ ದೇಶಗಳ ಸೇನಾಪಡೆ ಅಧಿಕಾರಿಗಳು ಗಲ್ವಾನ್‌ನಲ್ಲಿ ಸಭೆ ನಡೆಸಿದರು. ಭಾರತ […]

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಶ್ಯಾಮ್‌ಪ್ರಸಾದ್ ಅವರಿಗೆ ಡಾಕ್ಟರೇಟ್

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶ್ಯಾಮ್‌ಪ್ರಸಾದ್ ಕೆ ಅವರು ‘ಸಿಂತಸಿಸ್ ಆಫ್ ಥರ್ಮೋಇಲೆಕ್ಟ್ರಿಕ್ ಮೆಟೀರಿಯಲ್ಸ್ ಫಾರ್ ಲೊ ಆಂಡ್ ಹೈ ಟೆಂಪರೇಚರ್ ಎಪ್ಲಿಕೇಶನ್ಸ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಮಣಿಪಾಲ ಎಕಾಡೆಮಿ ಆಫ್ ಹಯರ್ ಎಜುಕೇಶನ್ ಜೂ.6 ರಂದು ಡಾಕ್ಟರೇಟ್ ಪದವಿ ಘೋಷಿಸಿದೆ. ಇವರು ಮಣಿಪಾಲ ತಾಂತ್ರಿಕ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಅಶೋಕ್ ರಾವ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.

ಗಡಿಯಲ್ಲಿ ಸೇನಾಪಡೆಯೊಂದಿಗೆ ಕಾದಾಟ: ಮೂವರು ಹುತಾತ್ಮ

ನವದೆಹಲಿ: ಗಡಿಭಾಗದಲ್ಲಿ ಚೀನಾದ ಸೇನಾಪಡೆಗಳೊಂದಿಗೆ ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ನಡೆದ ಗುಂಡಿನ ಕಾದಾಟದಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನಾಪಡೆಯ ಮೂಲಗಳು ತಿಳಿಸಿದೆ. ಈ  ಪರಿಸ್ಥಿತಿಯನ್ನು ತಿಳಿಗೊಳಿಸುದಕ್ಕಾಗಿ ಉಭಯ ದೇಶಗಳ ಸೇನಾಪಡೆ ಅಧಿಕಾರಿಗಳು ಗಲ್ವಾನ್‌ನಲ್ಲಿ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

‘ದುಷ್ಟ ದಮನ’ ಕಿರು ಪ್ರಹಸನ ಪುಸ್ತಕ ಬಿಡುಗಡೆ

ಉಡುಪಿ, 16: ಗ್ರಂಥಪಾಲಕರಾದ ಹರಿಕೃಷ್ಣ ರಾವ್ ಎ. ಸಗ್ರಿ ಅವರು ಬರೆದಿರುವ, ‘ದುಷ್ಟ ದಮನ’ ಕಿರು ಪ್ರಹಸನ- ಪುಸ್ತಕದ ಬಿಡುಗಡೆಯು ಉಡುಪಿ ಸಂಸ್ಕ್ರತ ಕಾಲೇಜಿನ ವಾಚಾನಾಲಯದಲ್ಲಿ ಮಂಗಳವಾರ ನಡೆಯಿತು. ಕೃತಿಯನ್ನು ಸಂಸ್ಕ್ರತ ಕಾಲೇಜಿನ ಪ್ರಾಚಾರ್ಯರಾದ ಡಾ. ಎನ್. ಲಕ್ಷ್ಮೀ ನಾರಾಯಣ ಭಟ್ ಅವರು ಬಿಡುಗಡೆಗೊಳಿಸಿದರು. ಲೇಖಕ ಹರಿಕೃಷ್ಣ ರಾವ್ ಎ. ಸಗ್ರಿ, ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.