ಕುಂದಾಪುರ: ತಾಯಿಯ ಸಾವಿನ ಸುದ್ದಿ ಕೇಳಿ ಮಗನಿಗೂ ಹೃದಯಾಘಾತ
ಕುಂದಾಪುರ: ತಾಯಿ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ತಿಳಿದು ಕೇವಲ ಒಂದು ಗಂಟೆಯೊಳಗೆ ಮಗನೂ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಕುಂದಾಪುರದಲ್ಲಿ ಶುಕ್ರವಾರ ತಡರಾತ್ರಿ ವರದಿಯಾಗಿದೆ. ಇಲ್ಲಿನ ಸರ್ಕಾರಿ ತಾಲೂಕು ಆಸ್ಪತ್ರೆಯ ಬಳಿಯಲ್ಲಿನ ಮಹಾರಾಜ್ ಜುವೆಲ್ಲರ್ಸ್‍ನ ಮಾಲಿಕರಾಗಿದ್ದ ದಿ.ರಮೇಶ್ ಶೇಟ್ ಅವರ ಪತ್ನಿ ಶಕುಂತಲಾ ಶೇಟ್(82) ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಒಂದು ಗಂಟೆಯ ಅವಧಿಯಲ್ಲಿ ಅವರ ಪುತ್ರ ಪ್ರಶಾಂತ್ ಶೇಟ್(45) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಕುಂತಲಾ ಅವರಿಗೆ 4 ಗಂಡು ಹಾಗೂ 2 ಪುತ್ರಿಯರಿದ್ದು, ಅವರು ಗಂಡು […]
ನಿರ್ಮಾಣ ಹಂತದ ಬಾವಿಗೆ ಬಿದ್ದು ವ್ಯಕ್ತಿ ಸಾವು
ಕುಂದಾಪುರ: ನಿರ್ಮಾಣ ಹಂತದಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಖೇದಕರ ಘಟನೆ ನಾಡಗುಡ್ಡೆಯಂಗಡಿಯ ಜನತಾ ಕಾಲನಿಯಲ್ಲಿ ನಡೆದಿದೆ. ಗುಲ್ವಾಡಿ ಗ್ರಾಮದ ಶೆಟ್ರಕಟ್ಟೆ ನಿವಾಸಿ ಲಕ್ಷ್ಮಣ ಪೂಜಾರಿ (38) ಸಾವನ್ನಪ್ಪಿದ ದುರ್ದೈವಿ. ನಾಡಗುಡ್ಡೆಯಂಗಡಿ ಜನತಾ ಕಾಲನಿ ನಿವಾಸಿ ಲಕ್ಷ್ಮೀ ಪೂಜಾರಿಯವರ ಮನೆಯ ಬಾವಿ ನಿರ್ಮಾಣ ಹಂತದಲ್ಲಿದ್ದು, ಬಾವಿಗೆ ಹಾಕಲಾಗಿದ್ದ ರಿಂಗ್‍ನ ಸುತ್ತಲೂ ಮಣ್ಣು ಹಾಕುವ ಕಾಮಗಾರಿ ನಡೆಯುತ್ತಿತ್ತು. ಈ ವೇಳೆಯಲ್ಲಿ ಲಕ್ಷ್ಮಣ ಪೂಜಾರಿ ಕಾಮಗಾರಿಯನ್ನು ವೀಕ್ಷಿಸುತ್ತಿರುವಾಗ ದುರ್ಘಟನೆ ಸಂಭವಿಸಿದೆ. ಬಾವಿಗೆ ಬಿದ್ದ ಲಕ್ಷ್ಮಣ ಪೂಜಾರಿಯವರನ್ನು ರಕ್ಷಿಸುವ ಪ್ರಯತ್ನ […]
ದಲಿತ ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನಕ್ಕೆ ಅಂಬೇಡ್ಕರ್ ಯುವಸೇನೆ ಆಗ್ರಹ
ಉಡುಪಿ: ದಲಿತ ಯುವತಿಯೊಬ್ಬಳನ್ನು ಮದುವೆ ಆಗುತ್ತೇನೆಂದು ನಂಬಿಸಿ ಅತ್ಯಾಚಾರ ಎಸಗಿ ಗರ್ಭಪಾತ ಮಾಡಿರುವ ಆರೋಪಿ ಕರಂಬಳ್ಳಿಯ ಅಕ್ಷಯ ಶೆಟ್ಟಿ(23) ಎಂಬಾತನನ್ನು ಕೂಡಲೇ ಬಂಧಿಸಬೇಕೆಂದು ಉಡುಪಿ ಅಂಬೇಡ್ಕರ್ ಯುವಸೇನೆ ಆಗ್ರಹಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಯುವ ಸೇನೆಯ ಗೌರವಾ ಧ್ಯಕ್ಷ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿ, ಅಕ್ಷಯ ಒಂದೂವರೆ ವರ್ಷಗಳ ಹಿಂದೆ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಆಕೆಯ ಸ್ನೇಹವನ್ನು ದುರುಪಯೋಗಪಡಿಸಿಕೊಂಡ 2019ರ ಅಕ್ಟೋಬರ್ 1ರಂದು ತನ್ನ ಮನೆಗೆ ಕರೆಸಿ, ಅಮಲು ಬರುವ ಪದಾರ್ಥ ನೀಡಿ ಆಕೆಯ ಮೇಲೆ […]
ಉಡುಪಿಯಲ್ಲಿ ಮತ್ತೆ 15 ಕೊರೊನಾ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 15 ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1006ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಜೂನ್ 15ರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು ಎಂದಿನಂತೆ ಸೇವೆಗೆ ಲಭ್ಯ
ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು ಜೂನ್ 15ರಿಂದ ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯರೆಗೆ ಹಿಂದಿನಂತೆ ಸೇವೆಗೆ ಲಭ್ಯವಾಗಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು. ನಂತರ ಸಂಬಂಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಖಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು ಮತ್ತು ಪ್ರತೀ […]