ಮೊಣಕಾಲ್ಮೂರು ರಸ್ತೆಯ ಅವಸ್ಥೆ ವರ್ಣಿಸಲು ಸಾಧ್ಯವಿಲ್ಲ:ಜನಪ್ರತಿನಿಧಿಗಳೇ ಒಮ್ಮೆ ಇತ್ತ ನೋಡಿ

ಮಣಿಪಾಲ: ಮಳೆಗಾಲವೇ ಉಡುಪಿ ರಸ್ತೆಗಳ ಪಾಲಿಗೆ ನರಕ ಸದೃಶವಾಗಿ ಕಾಡುತ್ತಿದೆ.ಮಲ್ಪೆ ಮೊಣಕಾಲ್ಮೂರು ರಸ್ತೆ ಯ ರಾಷ್ಟ್ರೀಯ ಹೆದ್ದಾರಿ 169A  ನಿರ್ಮಾಣದ  ಚತುಷ್ಪತ ಕಾಮಗಾರಿ ಅಪಾಯಕಾರಿಯಾಗಿ ಕಾಡುತ್ತಿದೆ.ಲಾಕ್ಡೌನ್ ಸಮಯದಲ್ಲಿ ಕುಂಠಿತಗೊಂಡಿದ್ದ ಕಾಮಗಾರಿ ಮೇ ತಿಂಗಳಲ್ಲಿ ಆರಂಭವಾಗಿತ್ತು. ಪರ್ಕಳ  ಸಿಂಡಿಕೇಟ್ ಬ್ಯಾಂಕ್  ಎದುರಿನ ಭಾಗದಲ್ಲಿ ಮಣ್ಣು ರಾಶಿ ಹಾಕಲಾಗಿತ್ತು, ‌ಆದರೆ  ಮಳೆಯ ತೀವ್ರತೆಗೆ   ರಸ್ತೆಯೇ ಮೇಲೆ ಕೆಸರಿನಂತಾಗಿದ್ದು ನಿತ್ಯ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರಿಗೆ ರಾಡಿಯಂತಾದ ರಸ್ತೆಯಲ್ಲಿ ಬಿದ್ದು  ಅಫಘಾತಗಳಾಗುತ್ತಿವೆ. ದಿನ ನಿತ್ಯ ಮಣಿಪಾಲ, ಉಡುಪಿಗೆ ಸಾವಿರಾರು ಜನರು […]

ಜೂ.14: ಕರ್ನಾಟಕ ಬಿಜೆಪಿಯಿಂದ ತಂತ್ರಜ್ಞಾನ ಆಧಾರಿತ ಬೃಹತ್ ಜನಸಂವಾದ ರ್ಯಾಲಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಎರಡನೇ ಅವಧಿಯ ಪ್ರಥಮ ವರ್ಷದ ಸಾಧನೆಗಳು ಮತ್ತು ಆತ್ಮ ನಿರ್ಭರ ಭಾರತ ಪರಿಕಲ್ಪನೆಯೊಂದಿಗೆ ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನು ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಬಿಜೆಪಿ ಕರ್ನಾಟಕ ವತಿಯಿಂದ ತಂತ್ರಜ್ಞಾನ ಆಧಾರಿತ ಬೃಹತ್ ಕರ್ನಾಟಕ ಜನಸಂವಾದ ರ್ಯಾಲಿಯು ಜೂನ್ 14 ರವಿವಾರ ಸಂಜೆ 6 ಗಂಟೆಗೆ ರಾಜ್ಯದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತಿಯಲ್ಲಿ ನಡೆಯುವ ಈ […]

ದ.ಕ. ಜಿಲ್ಲೆ: ಇಂದು 17 ಕೊರೊನಾ ಪಾಸಿಟಿವ್ ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಜೂ.12)ರಂದು 17 ಪಾಸಿಟಿವ್ ಕೇಸ್ ಪತ್ತೆಯಾಗಿದೆ. 14 ಮಂದಿ ಸೌದಿ ಅರೇಬಿಯಾದಿಂದ ಬಂದವರಿಗೆ ಹಾಗೂ 2 ಮಹಾರಾಷ್ಟ್ರದಿಂದ ಬಂದವರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಒಂದು ಸಾರಿ ಕೇಸ್ ಪತ್ತೆಯಾಗಿದೆ. ಪತ್ತೆಯಾದವರ ಪೈಕಿ 16 ಜನ ಪುರುಷರು ಮತ್ತು 1 ಮಹಿಳೆ ಎನ್ನಲಾಗಿದೆ.

ಉಡುಪಿಯಲ್ಲಿ ಮತ್ತೆ ಕೊರೊನಾ ಆರ್ಭಟ: 71 ವರ್ಷದ ವೃದ್ಧ ಸಹಿತ 22 ಮಂದಿಗೆ ಕೊರೊನಾ ಪಾಸಿಟಿವ್ 

ಉಡುಪಿ: ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದಿರುವ 21 ಮಂದಿಯಲ್ಲಿ ಹಾಗೂ  ಸ್ಥಳೀಯ ಕೊರೊನಾ ಸೋಂಕಿತ ಲ್ಯಾಬ್ ಟೆಕ್ನಿಷನ್ ಮನೆಯ 71 ವರ್ಷದ ವೃದ್ಧನಲ್ಲಿ ಇಂದು ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಇಂದು ಸೋಂಕು ಕಾಣಿಸಿಕೊಂಡ 22 ಮಂದಿಯ ಪೈಕಿ 13 ಪುರುಷರು, 6 ಮಹಿಳೆಯರು ಹಾಗೂ ಮೂವರು ಮಕ್ಕಳು ಇದ್ದಾರೆ. ಜಿಲ್ಲೆಯಲ್ಲಿ ಇಂದು 50 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 708 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ ಸೋಂಕಿತರಿಗೆ […]

ಜೂನ್ 18 ರಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ, ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ

ಉಡುಪಿ ಜೂನ್ 12: ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಯು ಜೂನ್ 18 ರಂದು, ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಿಸ್ತು ಮತ್ತು ಶಾಂತಿಯನ್ನು ಕಾಪಾಡುವ ಸಲುವಾಗಿ,  ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ,  ಸೆಕ್ಷನ್ 144 ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಸಹ ಸೂಚಿಸಲಾಗಿದೆ.