ಮೊಣಕಾಲ್ಮೂರು ರಸ್ತೆಯ ಅವಸ್ಥೆ ವರ್ಣಿಸಲು ಸಾಧ್ಯವಿಲ್ಲ:ಜನಪ್ರತಿನಿಧಿಗಳೇ ಒಮ್ಮೆ ಇತ್ತ ನೋಡಿ

ಮಣಿಪಾಲ: ಮಳೆಗಾಲವೇ ಉಡುಪಿ ರಸ್ತೆಗಳ ಪಾಲಿಗೆ ನರಕ ಸದೃಶವಾಗಿ ಕಾಡುತ್ತಿದೆ.ಮಲ್ಪೆ ಮೊಣಕಾಲ್ಮೂರು ರಸ್ತೆ ಯ ರಾಷ್ಟ್ರೀಯ ಹೆದ್ದಾರಿ 169A  ನಿರ್ಮಾಣದ  ಚತುಷ್ಪತ ಕಾಮಗಾರಿ ಅಪಾಯಕಾರಿಯಾಗಿ ಕಾಡುತ್ತಿದೆ.ಲಾಕ್ಡೌನ್ ಸಮಯದಲ್ಲಿ ಕುಂಠಿತಗೊಂಡಿದ್ದ ಕಾಮಗಾರಿ ಮೇ ತಿಂಗಳಲ್ಲಿ ಆರಂಭವಾಗಿತ್ತು.

ಪರ್ಕಳ  ಸಿಂಡಿಕೇಟ್ ಬ್ಯಾಂಕ್  ಎದುರಿನ ಭಾಗದಲ್ಲಿ ಮಣ್ಣು ರಾಶಿ ಹಾಕಲಾಗಿತ್ತು, ‌ಆದರೆ  ಮಳೆಯ ತೀವ್ರತೆಗೆ   ರಸ್ತೆಯೇ ಮೇಲೆ ಕೆಸರಿನಂತಾಗಿದ್ದು ನಿತ್ಯ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರಿಗೆ ರಾಡಿಯಂತಾದ ರಸ್ತೆಯಲ್ಲಿ ಬಿದ್ದು  ಅಫಘಾತಗಳಾಗುತ್ತಿವೆ.

ದಿನ ನಿತ್ಯ ಮಣಿಪಾಲ, ಉಡುಪಿಗೆ ಸಾವಿರಾರು ಜನರು ಸಂಚರಿಸುತ್ತಿದ್ದಾರೆ. ಸರಿಯಾದ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ನೀರು ರಸ್ತೆ ಮೂಲಕವೇ ಸಾಗುತ್ತಿದೆ.

ಗುತ್ತಿಗೆ ಪಡೆದ ಕಂಪನಿಯು ಯಾವುದೇ ಕರಿಕಲ್ಲು ಜಲ್ಲಿ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ಪರ್ಯಾಯ ರಸ್ತೆಯನ್ನಾಗಿ ಮಾಡದಿರುವುದು  ಜನರ ಆಕ್ರೋಶ ಕ್ಕೆ ಕಾರಣವಾಗಿದೆ.

ನಿತ್ಯ ಸಂಚರಿಸುವ ವಾಹನ ಸವಾರರು ಮಾತ್ರ ಪ್ರಾಣವನ್ನು ಕೈಯಲ್ಲಿ ಹಿಡಿದು ಸಾಗಬೇಕಾದ ಅನಿವಾರ್ಯತೆ ಒದಗಿದೆ. ಜಿಲ್ಲಾಡಳಿತ ಇನ್ನಾದರೂ ಈ ಬಗ್ಗೆ ಗಮನ ಹರಿಸಲಿ

ವರದಿ:ರಾಮ್ ಅಜೆಕಾರು