ಉಡುಪಿಯಲ್ಲಿ ಮತ್ತೆ 45 ಕೊರೊನಾ ಪಾಸಿಟಿವ್: ಕೊರೊನಾ ಕೇಸ್ ನಲ್ಲಿ ಉಡುಪಿ ರಾಜ್ಯದಲ್ಲೇ ನಂಬರ್ ಒನ್
ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 45 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 947ಕ್ಕೆ ಏರಿಕೆಯಾಗಿದೆ. ಇದೀಗ ಉಡುಪಿ ಜಿಲ್ಲೆ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದ್ದು, ಕರ್ನಾಟಕ ರಾಜ್ಯದಲ್ಲಿಯೇ ನಂಬರ್ ಒನ್ ಸ್ಥಾನಕ್ಕೇರಿದೆ.
ಕುಂದಾಪುರ: ಆನಗಳ್ಳಿ ದತ್ತಾಶ್ರಮದಲ್ಲಿ ಸದ್ಯ ಸಂನ್ಯಾಸಿಗಳ ವಾಸ್ತವ್ಯ ಇಲ್ಲ
ಕುಂದಾಪುರ: ಇಲ್ಲಿಗೆ ಸಮೀಪದ ಆನಗಳ್ಳಿಯ ಶ್ರೀ ದತ್ತಾಶ್ರಮದಲ್ಲಿ ಮುಂದಿನ ತೀರ್ಮಾನದವರೆಗೆ ಸಾಧು, ಸಂತರು ಹಾಗೂ ಸಂನ್ಯಾಸಿಗಳಿಗೆ ವಾಸ್ತವ್ಯ ವ್ಯವಸ್ಥೆ ನೀಡದೆ ಇರುವ ಕುರಿತು ತೀರ್ಮಾನ ಮಾಡಲಾಗಿದೆ ಎಂದು ಆಶ್ರಮದ ಪ್ರವರ್ತಕ ಸುಭಾಶ್ ಪೂಜಾರಿ ಸಂಗಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಸೋಮವಾರದಿಂದ ದತ್ತಾಶ್ರಮದಲ್ಲಿ ಭಗವಾನ್ ನಿತ್ಯಾನಂದರ, ದತ್ತಾತ್ರೇಯರ ಹಾಗೂ ನರ್ಮದೇಶ್ವರ ಶಿವಲಿಂಗದ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕಾಗಿ ದತ್ತಾಶ್ರಮಕ್ಕೆ ಬರುವವರು, ಅಂತರವನ್ನು ಕಾಯ್ದುಕೊಳ್ಳುವ ಜತೆಯಲ್ಲಿ ಸೋಂಕು ಹರಡದಂತೆ ಸರ್ಕಾರ ಸೂಚಿಸಿರುವ ಎಲ್ಲ ನಿಯಮಗಳನ್ನು ಕಡ್ಡಾಯ ಪಾಲಿಸುವಂತೆ […]
ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ
ಕುಂದಾಪುರ: ರಾಜ್ಯಾದ್ಯಂತ ದೇವರ ದರ್ಶನಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರದಿಂದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಂದಾಗಿ ಸೋಂಕು ಹರಡದಂತೆ ದೇವಸ್ಥಾನದ ಆಡಳಿತ ಮಂಡಳಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ದೇಗುಲದ ಹೊರ ಪೌಳಿಯ ಮುಖ್ಯ ದ್ವಾರದಿಂದ ಒಳ ಪ್ರವೇಶಿಸುವ ಭಕ್ತರು ದೇಹದ ಉಷ್ಣತೆಯನ್ನು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಂಡು ಲೋಹ ಶೋಧಕ ಯಂತ್ರದ ಮೂಲಕ ಒಳ ಪ್ರವೇಶಿಸಿದ ಬಳಿಕ, ಕೈ ಗಳಿಗೆ ಸ್ಯಾನಿಟೈಸೇಶನ್ ಮಾಡಿದ […]
ಕಂಟ್ರಿ ಇನ್ ಸ್ಯುಸ್ಟ್ಸ್ ವತಿಯಿಂದ ಪರಿಸರ ದಿನಾಚರಣೆ
ಮಣಿಪಾಲ: ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು, ಮಾನವನಿಂದಲೇ ಸರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಉಡುಪಿ ಕಂಟ್ರಿ ಇನ್ ಸಂಸ್ಥೆಯ ಮಾನವ ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ರವರು ತಿಳಿಸಿದರು. ರಾಡಿಸನ್ ಗ್ರೂಪ್ನ ಕಂಟ್ರಿ ಇನ್ ಸ್ಯುಸ್ಟ್ಸ್ ವತಿಯಿಂದ ಪರಿಸರ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಸದಾನಂದ ಕೋಟ್ಯಾನ್, ತಾಂತ್ರಿಕ ಮುಖ್ಯಸ್ಥ ಕಾರ್ತಿಕ್ ದೇವಾಡಿಗ ,ಇಂಜಿನಿಯರಿಂಗ್ ವಿಭಾಗದ ಕಿರಣ್ ಮೋಂತೆರೊ, ಪ್ರವೀಣ್ ಡಿಸೋಜ, ಪ್ರಶಾಂತ್ ಭಕ್ತ ಮಾರ್ಕೆಟಿಂಗ್ ರೂಪೇಶ್ […]
ಉಡುಪಿ: ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷರಾಗಿ ವೀಣಾ ಎಸ್. ಶೆಟ್ಟಿ
ಉಡುಪಿ: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷರಾಗಿ ವೀಣಾ ಎಸ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ವಿವಿಧ ಸಂಘಟನೆ ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಅವರು ಈ ಹಿಂದೆ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದರು. ಕಳೆದ ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲದೆ ಪಕ್ಷದ ಜವಬ್ದಾರಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರು ನೇಮಕ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.