ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 8 ಮಂದಿಗೆ ಕೊರೊನಾ ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ಮಂದಿಗೆ ಕೊರೊನಾ ದೃಢಪಟ್ಟಿದೆ. ಎಂಟು ಮಂದಿ ಕೂಡ ಮಹಾರಾಷ್ಟ್ರದಿಂದ ಬಂದವರು. 58, 36, 52, 24, 60, 48,43,43 ವಯಸ್ಸಿನ 8 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ 7 ಪುರುಷರು ಮತ್ತು ಓರ್ವ ಮಹಿಳೆಯಾಗಿದ್ದಾರೆ‌. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 151 ಕ್ಕೆ ಏರಿಕೆಯಾಗಿದೆ. 68 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿಗೆ ಕೊರೊನಾ ಮಹಾ ಆಘಾತ: ಮುಂಬೈನಿಂದ ಬಂದ ಏಳು ಮಕ್ಕಳು ಸೇರಿದಂತೆ 204 ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ  ಇಂದು ಹೊಸದಾಗಿ 204 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 204 ಸೋಂಕಿತರ ಪೈಕಿ 203 ಮಂದಿ ಮುಂಬೈನಿಂದ ಬಂದಿದ್ದು, ಓರ್ವ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಇಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದರು. ಇಂದು 2 ಸಾವಿರಕ್ಕೂ ಅಧಿಕ ಮಂದಿಯ ಕೊರೊನಾ ಪರೀಕ್ಷಾ ವರದಿ ಕೈ ಸೇರಿದ್ದು, ಇದರಲ್ಲಿ 204 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 204 ಸೋಂಕಿತರ […]

ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ

ಉಡುಪಿ, ಜೂ.5: ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾಲು ಗಿಡಗಳನ್ನು ನಡೆಯುವ ಕಾರ್ಯಕ್ರಮ ಶಾರದನಗರದ ಬೈಲಕೆರೆ ವಾರ್ಡಿನಲ್ಲಿ ನಡೆಯಿತು. ದೇಶದಲ್ಲಿ ನಾಗರಿಕ ಸಮಾಜ, ಹಾಗೂ ಸಕಲ ಜೀವರಾಶಿಗಳು ಸ್ವಸ್ಥ ಜೀವನ ಸಾಗಿಸಲು, 33ಶೇ. ಅರಣ್ಯ ಭೂಮಿಯ ಹೆಚ್ಚು ಅವಶ್ಯಕತೆ ಇದೆ. ಜನಸಂಖ್ಯೆ ಹೆಚ್ಚಳ, ಅಭಿವೃದ್ಧಿ ಕಾರ್ಯಗಳು, ಅರಣ್ಯನಾಶ, ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಹೀಗೆ ಮೊದಲಾದ ಕಾರಣಗಳಿಂದ ಇವಾಗ ದೇಶದಲ್ಲಿ 22% ಶೇ. ಅರಣ್ಯ ಭೂಮಿ ಉಳಿದುಕೊಂಡಿದೆ. ಪ್ರತಿಯೊಬ್ಬ ನಾಗರಿಕನಿಗೆ ಪರಿಸರ […]

ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಸರವೆಂದರೆ ಭಾರೀ “ಸ್ನೇಹ” ಎಳೆಯ ಕಂಗಳಿಗೆ ಪರಿಸರ ಪಾಠ ಮಾಡ್ತಿದೆ ಸುಳ್ಯದ ಸ್ನೇಹ ಶಾಲೆ

ನಮಗೋಸ್ಕರ ಶುದ್ದ ಗಾಳಿ, ನೀರು, ಬದುಕು ನೀಡುವ ಪರಿಸರವನ್ನು ಕಾಪಾಡದಿದ್ದರೆ ನಮಗೆ ಬದುಕೇ ಇಲ್ಲ. ನಮಗೆ ಎಲ್ಲದ್ದಕ್ಕೂ ಪರಿಸರ ಬೇಕು. ಆದರೆ ಪರಿಸರವನ್ನು ಪ್ರೀತಿಸುವುದರಲ್ಲಿ ನಾವು ಹಿಂದೇಟು ಹಾಕುತ್ತಿದ್ದೇವೆ. ಅದರಲ್ಲೂ ಪರಿಸರ ಶಿಕ್ಷಣ ಕೊಡಬೇಕಾದ ಶಿಕ್ಷಣ ಸಂಸ್ಥೆಗಳು, ಪರಿಸರ ದಿನಕ್ಕೊಮ್ಮೆ ಗಿಡ ನೆಟ್ಟು ಆಮೇಲೆ ಪರಿಸರ ಪ್ರೀತಿಯನ್ನೇ ಮರೆತುಬಿಡುತ್ತವೆ. ಆದರೆ ಇಲ್ಲೊಂದು ಅಪರೂಪದ ಶಿಕ್ಷಣ ಸಂಸ್ಥೆ ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿದೆ. ಆ ಮೂಲಕ ಪರಿಸರ ರಕ್ಷಣೆಗೆ ಸತತ ಹೆಗಲು ಕೊಡುತ್ತಲೇ ಇದೆ. ಈ ಶಾಲೆ […]

ಕಾಲೇಜು ವಿದ್ಯಾರ್ಥಿಗಳೇ, ನಿಮ್ಮ ಲಾಕ್ ಡೌನ್ ಹೊತ್ತು ಹೇಗಿತ್ತೆಂದು ನಮಗೆ ತಿಳಿಸಿ, ಒಂದು ವಿಡಿಯೋ ಕಳಿಸಿ

ಕೊರೋನಾ ಲಾಕ್ ಡೌನ್‌ನಿಂದ ದೇಶಕ್ಕೆ ಆರ್ಥಿಕವಾಗಿ ನಷ್ಟವಾಗಿದ್ದರೂ ಅನೇಕ ಪಾಸಿಟಿವ್ ಬದಲಾವಣೆಗಳು ನಮ್ಮ ಬದುಕಿನ ಮೇಲಾಗಿವೆ. ಕಳೆದೇ ಹೋಗಿದ್ದ ಹವ್ಯಾಸಗಳು ಮತ್ತೆ ಮುನ್ನೆಲೆಗೆ ಬಂದಿದೆ. ಎಂದೋ ಕಳೆದುಕೊಂಡ ಖುಷಿ, ನೆನಪು, ಕನಸುಗಳನ್ನು ಮತ್ತೆ ಹುಡುಕಾಡಲು ಈ ಲಾಕ್‌ಡೌನ್ ಸಹಾಯ ಮಾಡಿದೆ.  ಹಾಗಿದ್ರೆ ಹೇಳಿ, ಲಾಕ್ ಡೌನ್, ನಿಮ್ಮ ಬದುಕಿನ ಮೇಲೆ ಮಾಡಿದ ದೊಡ್ಡ ಪಾಸಿಟಿವ್ ಬದಲಾವಣೆಗಳ್ಯಾವುದು? *ನಿಮ್ಮ ಅಭಿಪ್ರಾಯಗಳನ್ನು ನಮಗೆ ವಿಡಿಯೋ ಮಾಡಿ ಕಳಿಸಿ *ವಿಡಿಯೋ ಗುಣಮಟ್ಟ ಚೆನ್ನಾಗಿರಲಿ,ಮೊಬೈಲ್ ನಲ್ಲಿ landscape ಫಾರ್ಮೆಟ್ ನಲ್ಲಿರಲಿ. * ವಿಡಿಯೋ […]