ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ

ಉಡುಪಿ, ಜೂ.5: ಜಿಲ್ಲಾ ನಾಗರಿಕ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾಲು ಗಿಡಗಳನ್ನು ನಡೆಯುವ ಕಾರ್ಯಕ್ರಮ ಶಾರದನಗರದ ಬೈಲಕೆರೆ ವಾರ್ಡಿನಲ್ಲಿ ನಡೆಯಿತು.
ದೇಶದಲ್ಲಿ ನಾಗರಿಕ ಸಮಾಜ, ಹಾಗೂ ಸಕಲ ಜೀವರಾಶಿಗಳು ಸ್ವಸ್ಥ ಜೀವನ ಸಾಗಿಸಲು, 33ಶೇ. ಅರಣ್ಯ ಭೂಮಿಯ ಹೆಚ್ಚು ಅವಶ್ಯಕತೆ ಇದೆ.
ಜನಸಂಖ್ಯೆ ಹೆಚ್ಚಳ, ಅಭಿವೃದ್ಧಿ ಕಾರ್ಯಗಳು, ಅರಣ್ಯನಾಶ, ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಹೀಗೆ ಮೊದಲಾದ ಕಾರಣಗಳಿಂದ ಇವಾಗ ದೇಶದಲ್ಲಿ 22% ಶೇ. ಅರಣ್ಯ ಭೂಮಿ ಉಳಿದುಕೊಂಡಿದೆ.
ಪ್ರತಿಯೊಬ್ಬ ನಾಗರಿಕನಿಗೆ ಪರಿಸರ ರಕ್ಷಿಸುವ  ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಗಾಣಿಗ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯರಕ್ಷಕ ಕೇಶವ ಪೂಜಾರಿ, ನಗರಸಭೆ ಸದಸ್ಯ ಗಿರೀಶ್ ಅಂಚನ್, ಉಮೇಶ್ ಬೈಲೂರು, ಮಂಜುನಾಥ್ ಹೆಬ್ಬಾರ್, ಶೇಖ್ ಇಸ್ಮಾಯಿಲ್, ಸಾಮಾಜಿಕ ಕಾರ್ಯಕರ್ತ ರಾಧಕೃಷ್ಣ ಮೆಂಡನ್, ಲಯನ್ ಹರೀಶ್ ಪೂಜಾರಿ, ಸಮಿತಿಯ ಪ್ರಮುಖರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಆಶಾಕಾರ್ಯಕರ್ತೆ ಉಮಾ ಮತ್ತಿತರರು ಉಪಸ್ಥಿತರಿದ್ದರು.