ಪೊಲೀಸ್ ಸಿಬಂದಿಗೆ ಕೊರೊನಾ ಶಂಕೆ: ಒಂದು ದಿನಕ್ಕೆ ಠಾಣೆ ಸ್ಯಾನಿಟೈಸ್
ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೋರ್ವರಿಗೆ ಕೊರೊನಾ ಶಂಕಿತ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಠಾಣೆಯನ್ನು ಒಂದು ದಿನದ ಮಟ್ಟಿಗೆ ಸ್ಯಾನಿಟೈಸ್ ಮಾಡಲಾಗಿದ್ದು, ಸೀಲ್ ಡೌನ್ ಮಾಡಿಲ್ಲ ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಸ್ಪಷ್ಟಪಡಿಸಿದ್ದಾರೆ. ಶಂಕಿತ ಸಿಬ್ಬಂದಿ ಚೆಕ್ ಪೋಸ್ಟ್ ಅಥವಾ ಹೊರಗಡೆ ಎಲ್ಲಿಯೂ ಕರ್ತವ್ಯ ನಿರ್ವಹಿಸಿಲ್ಲ. ಇದು ಕೇವಲ ಶಂಕಿತ ಪ್ರಕರಣವಷ್ಟೇ ಆಗಿದ್ದು, ಹಾಗಾಗಿ ಸೀಲ್ ಡೌನ್ ಅಥವಾ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಸೋಮವಾರ ಮತ್ತೊಮ್ಮೆ ಗಂಟಲ ದ್ರವದ ಪರೀಕ್ಷೆಗೆ […]
ದಕ್ಷಿಣ ಕನ್ನಡ ಜಿಲ್ಲೆ: ಮತ್ತೆ ಕೊರೊನಾ ಕಂಟಕ: ಇಂದು 14 ಮಂದಿಗೆ ಕೊರೊನಾ ಪಾಸಿಟಿವ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು ಮತ್ತೆ 14 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. 9 ಮಂದಿ ಮಹಾರಾಷ್ಟ್ರ,1 ದುಬೈ ,1 ಮಲೇಶ್ಯಾದಿಂದ ಬಂದವರಿಗೆ ಸೋಂಕು ಕಂಡುಬಂದಿದೆ. 3 ಮಂದಿಗೆ ಸೆಕೆಂಡರಿ ಕ್ವಾಂಟ್ಯಾಕ್ಟ್ ನಿಂದ ಸೋಂಕು ಬಂದಿದ್ದು, ಮಹಾರಾಷ್ಟ್ರ ದಿಂದ ಬಂದಿದ್ದ ಮಂಗಳೂರಿನ ಕೆಂಜಾರು ಗ್ರಾಮದ ನಿವಾಸಿ P2287 ನಿಂದ ಮೂರು ಮಂದಿಗೆ ಕೊರೊನಾ ಹರಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ.
ಕುಂದಾಪುರ: ಇವರು ಕೊರೋನಾ ಗೆದ್ದು ಬಂದವರು!
ಕುಂದಾಪುರ: ಕುಂದಾಪುರ ಸರ್ಕಾರಿ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 14 ಮಂದಿ ಭಾನುವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾರ್ಬಟ್ ರೆಬೆಲ್ಲೊ, ಪಿಜಿಶಿಯನ್ ಡಾ. ನಾಗೇಶ್, ಬೈಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಕುಂದಾಪುರ ಪಿಎಸ್ಐ ಹರೀಶ್ […]
ಕುಂದಾಪುರ: ಕೊರೊನಾದಿಂದ ಗುಣಮುಖರಾದ 14 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಉಡುಪಿ: ಕೊರೊನಾ ಸೋಂಕಿನಿಂದಾಗಿ ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 78 ಮಂದಿಯ ಪೈಕಿ 14 ಮಂದಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸೋಂಕಿನಿಂದ ಗುಣಮುಖರಾದ ಮಕ್ಕಳಿಗೆ ಚಾಕೊಲೇಟ್ ಮತ್ತು ಹೂವಿನ ಗುಚ್ಛ ನೀಡಿ ಅಧಿಕಾರಿಗಳು ಬೀಳ್ಕೊಟ್ಟರು.
ಉಡುಪಿ: ಮುಂಬೈನಿಂದ ಬಂದ ಏಳು ವರ್ಷದ ಬಾಲಕಿ ಸಹಿತ 10 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದ ಏಳು ವರ್ಷದ ಬಾಲಕಿ ಸಹಿತ ಇಂದು ಜಿಲ್ಲೆಯಲ್ಲಿ 10 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ತಿಳಿದುಬಂದಿದೆ. ಸೋಂಕು ದೃಢಪಟ್ಟ 10 ಮಂದಿಯಲ್ಲಿ 9 ಮಂದಿ ಮುಂಬೈನಿಂದ ಹಾಗೂ ಒಬ್ಬರು ದೋಹಾದಿಂದ ಜಿಲ್ಲೆಗೆ ಬಂದವರಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 187ಕ್ಕೆ ಏರಿಕೆಯಾಗಿದೆ.