ಉಡುಪಿಯಲ್ಲಿ ಮತ್ತೆ ಐದು ಕೊರೊನಾ ಪ್ರಕರಣ ದಾಖಲು

ಉಡುಪಿ: ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಸಂಜೆ ಕೊರೊನಾ ಬುಲೆಟಿನ್ ನಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಐದು ಕೊರೊನಾ ಪ್ರಕರಣ ಪತ್ತೆಯಾಗಿದೆ. ಐದು ಪ್ರಕರಣಗಳ ಪೈಕಿ ಮೂವರು ಮುಂಬೈನಿಂದ, ಓರ್ವ ತೆಲಂಗಾಣ ಹಾಗೂ ಮತ್ತೊಬ್ಬ ಮಹಿಳೆ ಯುಎಇ ನಿಂದ ಬಂದಿದ್ದು, ಇವರು ಕ್ವಾರಂಟೈನ್ ನಲ್ಲಿದ್ದರು. ಅವರ ಗಂಟಲಿನ ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇದೀಗ ಐದು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಕಾರ್ಕಳದ 9 ತಿಂಗಳ ಗರ್ಭಿಣಿ, ಮೂರು ಪೊಲೀಸ್ ಕಾನ್ ಸ್ಟೇಬಲ್ ಗೆ ಕೊರೊನಾ ಪಾಸಿಟಿವ್: ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ: ಕಾರ್ಕಳ ತಾಲ್ಲೂಕಿನ 9 ತಿಂಗಳ ಗರ್ಭಿಣಿ ಸೇರಿದಂತೆ ಇಂದು ಹೊಸದಾಗಿ ಜಿಲ್ಲೆಯ 18 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಇಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದರು. ಕಾರ್ಕಳದ ಗರ್ಭಿಣಿಗೆ ಯಾವುದೇ ಬಾಹ್ಯ ಸಂಪರ್ಕ ಇಲ್ಲದಿದ್ದರು ಸೋಂಕು ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಯಾರಿಂದ ಸೋಂಕು ಬಂದಿದೆ ಎನ್ನುವುದನ್ನು ಪತ್ತೆ ಮಾಡಲಾಗುತ್ತಿದ್ದು, ಗರ್ಭಿಣಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದ್ದಾರೆ. 18 ಜನ ಸೋಂಕಿತರ […]

ಮುಂಬೈನಿಂದ ಉಡುಪಿಗೆ ಬಂದ 13 ಜನರು ಸೇರಿದಂತೆ 18 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಮುಂಬೈನಿಂದ ಉಡುಪಿಗೆ ಬಂದ ಮೂವರು ಮಕ್ಕಳು ಸೇರಿದಂತೆ ಇಂದು ಜಿಲ್ಲೆಯಲ್ಲಿ ಹೊಸದಾಗಿ ಒಟ್ಟು 18 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ರಾಜ್ಯ ಕುಟುಂಬ ಮತ್ತು ಆರೋಗ್ಯ ಇಲಾಖೆಯ ಮಧ್ಯಾಹ್ನದ ಕೊರೊನಾ ಬುಲೆಟಿನ್ ನಲ್ಲಿ ತಿಳಿದುಬಂದಿದೆ. ಮುಂಬೈನಿಂದ ಬಂದಿದ್ದ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಪೊಲೀಸರಿಗೆ ಸೋಂಕು ತಗುಲಿದ್ದು, ಇದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ. ಮುಂಬೈನಿಂದ ಉಡುಪಿಗೆ ಬಂದ 35 ವರ್ಷದ ಮಹಿಳೆ, 32 ವರ್ಷದ ಪುರುಷ, […]

ಉಡುಪಿ ಜಿಲ್ಲೆಗೆ ಬಿಗ್ ಶಾಕ್ ! ಕಾರ್ಕಳದ ಪೊಲೀಸರಿಗೆ ಬಂತು ಕೊರೋನಾ,ಇಬ್ಬರಿಗೆ ಕೊರೋನಾ ಸೋಂಕು ದೃಢ:

ಉಡುಪಿ:  ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಅಜೆಕಾರಿನ ತಲಾ ಓರ್ವ ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು  ಈ ಸುದ್ದಿಗೆ ಉಡುಪಿ ಜಿಲ್ಲೆ ತತ್ತರಿಸಿದರೆ. ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಪೊಲೀಸರಿಗೂ ಸೋಂಕು ತಗಲುವ ಮೂಲಕ ಕೊರೋನಾ ತನ್ನ ಕಬಂಧಬಾಹು ಮತ್ತಷ್ಟು ವಿಸ್ತರಿಸಿದೆ. ಎರಡೂ ಕಡೆಯ ಒಟ್ಟು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡುವ  ಸಾಧ್ಯತೆ ಇದ್ದು ಕಾರ್ಕಳ ವ್ಯಾಪ್ತಿಯ ಜನರು ಕಂಗಾಲಾಗಿದ್ದಾರೆ. ಎಎಸ್ ಐಗೂ […]

ಕಾರ್ಕಳ: ಆನ್ ಲೈನ್ ನಲ್ಲೇ ನಡೀತು ತಿಥಿ: ಇದು ಕೊರೋನಾ ಕಲಿಸಿದ ಹೊಸ ರೀತಿ !

ಕಾರ್ಕಳ : ‌ಆನ್ ಲೈನ್ ದೇವರ ದರ್ಶನ, ಆನ್ ಲೈನ್ ಮಹಾಪೂಜೆ ಅಂತೆಲ್ಲಾ ನೀವು ಕೇಳಿರುತ್ತೀರಿ, ಮುಜುರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ದೇವರ ಪೂಜಾ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ನಡೆಸುವ ಬಗ್ಗೆ ಸರ್ಕಾರ‌ ಪ್ರಸ್ತಾಪಿಸಿದ ಬೆನ್ನಲ್ಲೇ ಕೆಲವೊಂದು ಕಡೆ ಆನ್ ಲೈನ್ ದೇವತಾ ದರ್ಶನಕ್ಕೆ ಮುಂದಾಗಿರುವುದು ಹಳೆ ಸುದ್ದಿ. ಆದರೆ ಉಡುಪಿ ಜಿಲ್ಲೆಯ ಕಾರ್ಕಳದ ಪುರೋಹಿತರೊಬ್ಬರು ಆನ್ ಲೈನ್ ನಲ್ಲೇ ತಿಥಿ ಕಾರ್ಯ ಮಾಡಿ ಮುಗಿಸಿದ ಮುಗಿಸಿರುವುದು ಹೊಸ ಸುದ್ದಿ. ಯಸ್. ಇಂತಹ ಅಪರೂಪದ ಆನ್ […]