‘ಕಾಣದ ಕಡಲಿಗೆ’ ಕಿರುಚಿತ್ರದ ಟ್ರೈಲರ್ ಬಿಡುಗಡೆ: ಜನರಿಂದ ಉತ್ತಮ ಪ್ರತಿಕ್ರಿಯೆ

ಉಡುಪಿ: ಶ್ರಾವಣಿ ಪ್ರೊಡಕ್ಷನ್ ಅರ್ಪಿಸುವ ಮೋಹನ್ ಕುಮಾರ್ ಕೆದೂರು ನಿರ್ಮಾಣ ಹಾಗೂ ನಿರ್ದೇಶನದ ‘ಕಾಣದ ಕಡಲಿಗೆ’ ಕಿರುಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಗೊಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪರ್ಕಳ ಹಾಗೂ ಸುತ್ತಮುತ್ತಲಿನ ಸುಂದರ ಪ್ರದೇಶಗಳಲ್ಲಿ ಚಿತ್ರದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ನಾಯಕ ಅಂಧ ಹುಡುಗಿಯೊಬ್ಬಳನ್ನು ಪ್ರೀತಿಸುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಮೋಹನ್ ನಿರ್ದೇಶನದ ಜತೆಗೆ ನಾಯಕ ನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಈ ಕಿರುಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಎರಡು ದಿನಗಳ […]

ಬೆಳ್ತಂಗಡಿ: ಶಿರ್ಲಾಲಿನಲ್ಲಿ ಮಹಿಳೆಗೆ ಕೊರೊನಾ ಪತ್ತೆ: ಗ್ರಾಮ ಸೀಲ್ ಡೌನ್ ಗೆ ಸಿದ್ದತೆ

ಮಂಗಳೂರು: ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮಹಿಳೆಗೆ ಕೊರೊನ ಪಾಸಿಟಿವ್ ಆತಂಕ ಸೃಷ್ಟಿಸಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ 34 ವರ್ಷದ ಮಹಿಳೆಗೆ ಕೊರೋನಾ‌ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಶಿರ್ಲಾಲು ಗ್ರಾಮ ಸಿಲ್ ಡೌನ್ ಗೆ ಸಿದ್ದತೆ ನಡೆಸಲಾಗಿದೆ. ಮಹಿಳೆಯನ್ನು ಇಂದು ಬೆಳಗ್ಗೆ ಕೋವಿಡ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ಉಸಿರಾಟದ ತೊಂದರೆ ಇದ್ದಿದ್ರಿಂದ ಗ್ರಾಮಸ್ಥರೆ ಒತ್ತಾಯ ಮಾಡಿ ಪರೀಕ್ಷೆ‌ ಮಾಡಿಸಲು ತಿಳಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

ಕಾರ್ಕಳದ ಬೋರ್ಡ್ ಹೈಸ್ಕೂಲಿನಲ್ಲಿ ನಿಯಮಾವಳಿ ಉಲ್ಲಂಘಿಸಿ ತರಗತಿ: ಹೊಣೆಗಾರಿಕೆಯಿಂದ ನುಣುಚಿಕೊಂಡ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕ

ಕಾರ್ಕಳ :ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ಶಾಲಾ ಕಾಲೇಜುಗಳನ್ನು ನಡೆಸಬಾರದು ಎನ್ನುವ ನಿಯಮವಿದ್ರೂ ಕಾರ್ಕಳದ ಬೋರ್ಡ್ ಹೈಸ್ಕೂಲ್ ನ ಮುಖ್ಯ ಶಿಕ್ಷಕ ರಾಜಾರೋಷವಾಗಿ ತರಗತಿ ನಡೆಸಿದ್ದಾರೆ.ತನ್ನ ವ್ಯಾಪ್ತಿಯ ಸರಕಾರಿ ಶಾಲೆಯೊಂದರಲ್ಲಿ ಹೀಗೆ ಏಕಾಏಕಿ ತರಗತಿ ನಡೆಯುತ್ತಿದ್ದರೂ ಇಲ್ಲಿನ ತಾಲೂಕು ಶಿಕ್ಷಣಾಧಿಕಾರಿಗೆ ಈ ವಿಷಯವೇ ಗೊತ್ತಿಲ್ಲ. ಇದೀಗ ಈ ಘಟನೆ ಸಾರ್ವಜನಿಕವಾಗುತ್ತಿದ್ದಂತೆಯೇ ಮುಖ್ಯ ಶಿಕ್ಷಕ ಮುರಳಿ ಪ್ರಭು ಮತ್ತು ತಾಲೂಕು ಶಿಕ್ಷಣಾಧಿಕಾರಿ ಶಶಿಧರ್ ಜಿ ಎಸ್ ಪರಸ್ಪರ  ದೂಷಣೆಯಲ್ಲಿ ತೊಡಗಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶುಕ್ರವಾರ ಮುಖ್ಯೋಪಾಧ್ಯಾಯರು‌ […]

ಮುಂಬೈಯಿಂದ ಉಡುಪಿಗೆ ಬಂದ ನಾಲ್ವರು ಸಹಿತ ಐದು ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ ಐದು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದು ಜಿಲ್ಲೆಯ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಬೈಯಿಂದ ಬಂದಿರುವ ನಾಲ್ವರು ಹಾಗೂ ವಿದೇಶದಿಂದ ಬಂದ ಓರ್ವನಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. 37, 55 ಹಾಗೂ 31 ವರ್ಷದ ಪುರುಷರು ಹಾಗೂ 48 ಮತ್ತು 34 ವರ್ಷದ ಇಬ್ಬರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ಜಗತ್ತಿನಾದ್ಯಂತ ಕೊರೊನಾಗೆ  3.40 ಲಕ್ಷ ಮಂದಿ ಬಲಿ, 53.03 ಲಕ್ಷ ಮಂದಿಗೆ ಸೋಂಕು ದೃಢ

ಜಗತ್ತಿನಾದ್ಯಂತ ವ್ಯಾಪಿಸಿರುವ ಕೊರೊನಾ ಸೋಂಕಿಗೆ ಶನಿವಾರದವರೆಗೆ 3.40 ಲಕ್ಷ ಮಂದಿ ಬಲಿಯಾಗಿದ್ದು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಟ್ಟು 53.03 ಲಕ್ಷ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 2019ರ ಅಂತ್ಯದಲ್ಲಿ ಚೀನಾದ ವೂಹಾನ್ ನಲ್ಲಿ  ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಬೆಳಕಿಗೆ ಬಂದಿದ್ದು ಜ.22ರಂದು 17 ಮಂದಿ ಮೃತಪಟ್ಟ ನಂತರ, ಫೆ.23 ರಿಂದ ಮಾ.22ರವರೆಗೆ 14, 739 ಮಂದಿ ಬಲಿಯಾದರು. ವಿಶ್ವದೆಲ್ಲೆಡೆ ಕೊರೊನಾ ಸೋಂಕು ವ್ಯಾಪಿಸುವುದನ್ನು ಅರಿತ ಹಲವು ರಾಷ್ಟ್ರಗಳು ಮಾ.22ರಿಂದ ಲಾಕ್ ಡೌನ್ ಜಾರಿಗೆ ತಂದು ಸಾವಿನ […]