ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಂದರ ಕೋಟ್ಯಾನ್ ನಿಧನ

ಉಡುಪಿ: ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷ ಸುಂದರ ಕೋಟ್ಯಾನ್ (59) ಅವರು ಇಂದು ಅಂಬಲಪಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಎಲ್ಐಸಿ ಏಜಂಟರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಸಮಾಜ ಸೇವೆಯಲ್ಲಿ ತೊಡಗಿದ್ದು, ಎರಡು ಅವಧಿಗೆ ಲಯನ್ಸ್ ಕ್ಲಬ್ ಉಡುಪಿ ಕಾರ್ಯದರ್ಶಿಯಾಗಿ ಹಾಗೂ ಪ್ರಸಕ್ತ ಸಾಲಿನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ರಾಜ್ಯದಲ್ಲಿ ಇಂದು ಒಂದೇ ದಿನ 216 ಕೊರೊನಾ ಸೋಂಕಿತರು ಪತ್ತೆ: ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1959ಕ್ಕೇರಿಕೆ

ಉಡುಪಿ: ರಾಜ್ಯದಲ್ಲಿ ಇಂದು ಹೊಸದಾಗಿ 216 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1959ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಬೆಳಿಗ್ಗಿನ ಬುಲೆಟಿನ್ ನಲ್ಲಿ 196 ಸೋಂಕಿತರು ಹಾಗೂ ಸಂಜೆಯ ಬುಲೆಟಿನ್ ನಲ್ಲಿ 20 ಸೋಂಕಿತರು ಪತ್ತೆಯಾಗಿದ್ದು, ಒಂದೇ ದಿನ ಒಟ್ಟು 216 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ನೀಡಿದೆ.

ಸ್ವ-ಉದ್ಯೋಗ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಇದೆಯೇ? ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕೊಡ್ತಿದೆ ನಿಮಗೊಂದು ಚಾನ್ಸ್ !

ಉಡುಪಿ:ಸ್ವದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಇರುವ ನಿರುದ್ಯೋಗ ಯುವಜನತೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಭರ್ಜರಿ ತರಬೇತಿ ನೀಡಲಿದೆ.ಇಲ್ಲಿದೆ ನೋಡಿ ಸಂಸ್ಥೆ ಯಾವ ಯಾವ ತರಬೇತಿ ಕೊಡಲಿದೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಏನೇನು ತರಬೇತಿ ಇದೆ? ಹೌಸ್ ವಯರಿಂಗ್ 30 ದಿನಗಳು, ದ್ವಿ ಚಕ್ರ ವಾಹನ ರಿಪೇರಿ 30 ದಿನಗಳು, ಹಪ್ಪಳ, ಸಂಡಿಗೆ, ವಿವಿಧ ಬಗೆಯ ಮಸಾಲ ಪೌಡರ್ ಗಳ ತಯಾರಿ 10 ದಿನಗಳು, ಪೇಪರ್ ಬ್ಯಾಗ್, ಎನ್ವಲಪ್, ಬಟ್ಟೆ ಬ್ಯಾಗ್‍ಗಳ ತಯಾರಿ […]

ಕೋರೋನಾ ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಸಿದ್ದಗೊಂಡಿದೆ:ಉಡುಪಿ ಜಿಲ್ಲಾಧಿಕಾರಿ

ಉಡುಪಿ : ಉಡುಪಿ ಜಿಲ್ಲೆಗೆ ಹೊರ ರಾಜ್ಯಗಳಿಂದ ಇದುವರೆಗೆ 8010 ಮಂದಿ ಆಗಮಿಸಿದ್ದು, ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಿದ್ದು, ಮುಂದಿನ ದಿನಗಳಲ್ಲಿ  ಜಿಲ್ಲೆಯಲ್ಲಿ   ಕಂಡುಬರುವ ಕೋವಿಡ್ -19 ಪಾಸಿಟಿವ್ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಗೊಂಡಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಡುಪಿ ಜಿಲ್ಲೆಗೆ ಇದುವರೆಗೆ , ಮಹಾರಾಷ್ಟçದಿಂದ 7226, ತಮಿಳುನಾಡು ನಿಂದ 74, ತೆಲಂಗಾಣದಿAದ […]

ಉಡುಪಿಯಲ್ಲಿ ಇಂದು, ನಾಳೆ ಬಿಗ್ ಲಾಕ್‌ಡೌನ್, ನಿಯಮ ಉಲ್ಲಂಘಿಸಿದ್ರೆ ಕಾದಿದೆ ಶಿಕ್ಷೆ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ :  ಉಡುಪಿ ಜಿಲ್ಲೆಯಲ್ಲಿ  ಮೇ 23 ಶನಿವಾರ  ರಾತ್ರಿ 7 ಗಂಟೆಯಿoದ  ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ಗಂಟೆಗಳ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ  ಜಾರಿಗೊಳಿಸುತ್ತಿದ್ದು,  ಲಾಕ್ ಡೌನ್ ಉಲ್ಲಂಘಿಸಿ ಅನಗತ್ಯವಾಗಿ  ತಿರುಗಾಡುವವರ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ 36 ಗಂಟೆಗಳ ಲಾಕ್ ಡೌನ್ ಅವಧಿಯಲ್ಲಿ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ,  ಔಷಧ ಅಂಗಡಿಗಳು ಮತ್ತು  […]