ಇ ಪಾಸ್ ಮೂಲಕ ಮಾತ್ರ ಪಾಸ್‌ಗಳ ವಿತರಣೆ: ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ, ಮೇ 3: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿರ್ಬಂದಾಜ್ಞೆ ಜ್ಯಾರಿಯಲ್ಲಿದ್ದು ಈ ಸಂದರ್ಭದಲ್ಲಿ ಯಾವುದೇ ನಾಗರೀಕರ ಓಡಾಟವನ್ನು ನಿರ್ಬಂಧಿಸಲಾಗಿರುತ್ತದೆ. ಪ್ರಸ್ತುತ ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಆಥವಾ ಹೊರಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವುದಕ್ಕೆ ನಿರ್ಬಂಧಗಳಿವೆ, ಅಲ್ಲದೇ ಈ ಬಗ್ಗೆ ಸಾರ್ವತ್ರಿಕವಾದ ಅನುಮತಿ ಇರುವುದಿಲ್ಲ, ಕೇವಲ ತುರ್ತು ವೈದ್ಯಕೀಯ ಕಾರಣಗಳಿಂದಾಗಿ ಹೋಗ ಬೇಕಾದಲ್ಲಿ ಆಥವಾ ವೈದ್ಯಕೀಯ ಉಪಕರಣಗಳ ಉತ್ಪಾದನಾ ಘಟಕ, Defence Production ಮುಂತಾದ ಅಗತ್ಯ ಕರ್ತವ್ಯಕ್ಕೆ (Essential Services Sector) ಹಾಜರಾಗಲು ಅಂತರ್ […]

ಸಮಾಜಸೇವಕ ವಿಶು ಶೆಟ್ಟಿಯವರಿಂದ 42 ದಿನಗಳಲ್ಲಿ 20 ಸಾವಿರಕ್ಕೂ ಅಧಿಕ ಜನರಿಗೆ ಊಟ ವಿತರಣೆ 

ಉಡುಪಿ: ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ, ಭಿಕ್ಷುಕರಿಗೆ, ನಿರ್ಗತಿಕರಿಗೆ, ಊಟ ಮತ್ತು ಉಪಹಾರಗಳನ್ನು ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ವಿತರಿಸುತ್ತಿದ್ದರು. ಮಾ,23 ರಿಂದ ಪ್ರಾರಂಭಗೊಂಡ ಹಸಿದವರಿಗೆ ಉದರ ತಣಿಸುವ ಅವರ ಪರಮಸೇವೆಯು ಮೇ 3 ವರೆಗೆ ನಡೆದು, ಸಮಾಪನ ಪಡೆಯಿತು. ಜಿಲ್ಲೆಯಲ್ಲಿ ಪ್ರಥಮವಾಗಿ ಜನ ಸಾಮನ್ಯನೊರ್ವನು ಏಕ ವ್ಯಕ್ತಿಯಾಗಿ ಸ್ವಂತ ಖರ್ಚಿನಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಊಟ ವಿತರಿಸಿದ ಸೇವಾಕಾರ್ಯು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ […]

ಕೆಲ ಷರತ್ತಿನೊಂದಿಗೆ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಲು ತೀರ್ಮಾನ: ಡಿಸಿ ಜಗದೀಶ್ 

ಉಡುಪಿ: ಉಡುಪಿ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಬರುವುದರಿಂದ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ. ಎರಡು ದಿನಗಳೊಳಗೆ ಯಾಂತ್ರೀಕೃತ ಮೀನುಗಾರಿಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಕೆಲ ನಿಯಮಗಳೊಂದಿಗೆ ಯಾಂತ್ರೀಕೃತ ಮೀನುಗಾರಿಕೆ ಆರಂಭಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರಿಕಾ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದರು. ಎಲ್ಲರು ಮೀನುಗಾರಿಕೆಗೆ ಒಟ್ಟಿಗೆ ಹೋಗಿ ಒಟ್ಟಿಗೆ ಬರುವಂತಿಲ್ಲ. ಬಂದರುಗಳಲ್ಲಿ ಜನ ಸೇರಲು ಅವಕಾಶ […]

ದ.ಕ.ಜಿಲ್ಲೆ ಲಾಕ್ ಡೌನ್ ಸಡಿಲಿಕೆ: ಕಾರ್ಯಕ್ರಮಗಳು ನಿಷೇಧ; ರಾತ್ರಿ ‌7ರಿಂದ ಎಲ್ಲವೂ ಬಂದ್

ಮಂಗಳೂರು: ನಾಳೆ‌‌‌ಯಿಂದ ದ.ಕ ಜಿಲ್ಲೆಯಲ್ಲಿ ಬೆ.7 ರಿಂದ ರಾತ್ರಿ 7ರ ವರೆಗೆ ಲಾಕ್ ಡೌನ್ ಸಡಿಲಿಕೆ ಕುರಿತು‌ ದ.ಕ ಜಿಲ್ಲಾಧಿಕಾರಿ ಸಿಂಧೂ.ಬಿ‌.ರೂಪೇಶ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಆಟೋ ರಿಕ್ಷಾ, ಕ್ಯಾಬ್ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು,  ಆಟೋ ಮತ್ತು ಕ್ಯಾಬ್ ಗಳಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಖಾಸಗಿ ವಾಹನಗಳಾದ ಬೈಕ್ ಮತ್ತು ಕಾರುಗಳು ಸಂಚರಿಸಬಹುದಾಗಿದ್ದು, ಕಾರುಗಳಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಮತ್ತು ಬೈಕ್ ಗಳಲ್ಲಿ ಒಬ್ಬರಷ್ಟೇ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಸ್ಥಳೀಯ […]

ಸವಿತ ಸಮಾಜದ 2000 ಮಂದಿಗೆ ಉಚಿತ ಆಹಾರ ಕಿಟ್ ವಿತರಣೆ

ಉಡುಪಿ, ಮೇ 3:  ಕೊರೋನ ನಿಂದ ಸಂಕಷ್ಟದಲ್ಲಿರುವ ಉಡುಪಿ ಜಿಲ್ಲೆಯ ಸವಿತ ಸಮಾಜದ 2000 ಮಂದಿಗೆ , ಡಾ.ಜಿ.ಶಂಕರ್ ಶ್ಯಾಮಿಲಿ ಟ್ರಸ್ಟ್ ವತಿಯಿಂದ , ಜಿಲ್ಲಾಡಳಿತ ಮೂಲಕ ಉಚಿತ ಆಹಾರದ ಕಿಟ್ ಗಳನ್ನು , ಉಡುಪಿ ತಾಲೂಕು ಕಛೇರಿಯಲ್ಲಿ ಭಾನುವಾರ ವಿತರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿಸ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯ ಜನತೆ ಲಾಕ್ ಡೌನ್ ಅವಧಿಯಲ್ಲಿ ಕಾನೂನುಗಳನ್ನು ಯಶಸ್ವಿಯಾಗಿ ಪಾಲನೆ ಮಾಡಿದ್ದರಿಂದ ಉಡುಪಿ ಜಿಲ್ಲೆ ಇಂದು ಹಸಿರು ವಲಯದಲ್ಲಿದೆ, ಜಿಲ್ಲೆಯಲ್ಲಿದ್ದ ಸುಮಾರು 20,000 ಕ್ಕೂ ಅಧಿಕ […]