ಮಂಗಳೂರು: ಮತ್ತೊಬ್ಬ ಮಹಿಳೆಗೆ ಕೊರೊನ ಸೋಂಕು ದೃಢ
ಮಂಗಳೂರು: ಮಂಗಳೂರಿನ ಬೋಳೂರು ಮಹಿಳೆಗೆ ಸೋಂಕು ಇರುವುದು ದೃಡ ಪಟ್ಟಿದೆ. ಬೋಳೂರಿನ 58 ವರ್ಷದ ಮಹಿಳೆಗೆ P501 ಸಂಪರ್ಕದಿಂದ ಸೋಂಕು ಮಹಿಳೆಗೆ ಹರಡಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಬೋಳೂರು ಪ್ರದೇಶ ಸಂಪೂರ್ಣವಾಗಿ ಸಿಲ್ ಡೌನ್ ಮಾಡಲು ಮುಂದಾಗಿದ್ದು, ಈಗಾಗಲೇ ಜಿಲ್ಲಾಡಳಿತದ ಸಿಬ್ಬಂದಿಗಳು ಮತ್ತು ಪೊಲೀಸರು ಸ್ಥಳದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಬೋಳೂರಿನ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗುತ್ತಿದೆ.
ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ ವಿಧಿವಶ
ಉಡುಪಿ: ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ (67) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಿಗ್ಗೆ ನಿಧನರಾದರು. ಅವರು ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಉಡುಪಿ: ರಾಜಕಾರಣಿಗಳ ಕೈವಾಡದಿಂದ ದಕ್ಷ, ಪರಿಸರವಾದಿ ಯುವ ಅರಣ್ಯಾಧಿಕಾರಿ ಎತ್ತಂಗಡಿ: ಜಿಲ್ಲೆಯ ಅನಿಷ್ಟ ರಾಜಕಾರಣಕ್ಕೆ ಪ್ರಾಮಾಣಿಕ ಅಧಿಕಾರಿ ಬಲಿಪಶು, ಎತ್ತಂಗಡಿಗೆ ಜನವಿರೋಧ!
ಉಡುಪಿ: ಹೆಬ್ರಿ ತಾಲೂಕು ವಲಯ ಅರಣ್ಯಾಧಿಕಾರಿಯಾಗಿರುವ ಮುನಿರಾಜ್, ದಕ್ಷ ಅರಣ್ಯಾಧಿಕಾರಿಯಾಗಿ ಪರಿಸರಕ್ಕೆ ಕಂಟಕವಾಗಿರುವ ಪ್ರಭಾವಿ ರಾಜಕಾರಣಿಗಳನ್ನು ಮಟ್ಟ ಹಾಕಿದ್ದರು. ತಾಲೂಕಿನಲ್ಲಿ ಪ್ರಾಮಾಣಿಕವಾಗಿ, ಪರಿಸರದ ಪರ ಹೋರಾಡಿದ ಈ ಯುವ ಅಧಿಕಾರಿಗೀಗ ಸಿಕ್ಕ ಉಡುಗೊರೆ ಏನು ಗೊತ್ತೆ? ಎತ್ತಗಂಡಿ. ಹೌದು, ಹೆಬ್ರಿ ತಾಲೂಕಿನಲ್ಲಿ ಆಗಾಗ ನಡೆಯುತ್ತಿದ್ದ ಅಕ್ರಮ ಮರ ಸಾಗಾಟ, ಅರಣ್ಯ ಒತ್ತುವರಿ ,ರಾಜಕಾರಣಿಗಳ, ಉದ್ಯಮಿಗಳ ಕೈವಾಡವಿತ್ತು ಎನನ್ನುವುದು ತಾನು ಅಧಿಕಾರ ವಹಿಸಿದ ಆರೇ ತಿಂಗಳಲ್ಲಿ ಬಯಲು ಮಾಡಿದ ಯುವ ದಕ್ಷ ಅಧಿಕಾರಿಯನ್ನು ಎತ್ತಂಗಡಿ ಮಾಡಿ ಪರಿಸರವಾದಿ ಅರಣ್ಯಾಧಿಕಾರಿಯವರ […]