ಉಡುಪಿ ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಆಹಾರ ಧಾನ್ಯದ  ವಿತರಣೆ

ಉಡುಪಿ:   ಶ್ರೀ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ, ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆದೇಶಾನುಸಾರವಾಗಿ ಉಡುಪಿಯ ರಿಕ್ಷಾಚಾಲಕರು ಹಾಗೂ  ಸುತ್ತ ಮುತ್ತಲಿನ ಅರ್ಹ ಕುಟುಂಬಗಳಿಗೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ರಥಬೀದಿಯ ಮಂತ್ರಾಲಯ  ಶಾಖಾ ಮಠದಲ್ಲಿ ರಾಯರ ಪ್ರಸಾದ ರೂಪವಾಗಿ 25 ಕಿಲೋ ಅಕ್ಕಿಯ 100 ಕಿಟ್ ಗಳನ್ನು, ಮತ್ತು ಪಡುಕೆರೆ ಪರಿಸರದಅರ್ಹ 250 ಕುಟುಂಬಗಳಿಗೆ  ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು  25 ಕಿಲೋ ಅಕ್ಕಿಯ  250 ಕಿಟ್ ಗಳನ್ನು ರಾಯರ […]

ಪೊಲೀಸರ ಬಳಿ ಕೊರೋನಾ ಸುಳಿಯದಂತೆ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಭಿನ್ನ ವ್ಯವಸ್ಥೆ

ಕುಂದಾಪುರ: ಮುಂಬೈನಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿರುವುದರಿಂದ ಎಚ್ಚೆತ್ತುಕೊಂಡಿರುವ ಗಂಗೊಳ್ಳಿ ಪೊಲೀಸರು, ಪೊಲೀಸ್ ಸಿಬ್ಬಂದಿಗನ್ನು ಕೊರೋನಾ ವೈರಸ್‍ನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮ ಕೈಗೊಂಡು ಗಮನ ಸೆಳೆದಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರು ಹಾಗೂ ದೂರುದಾರರಿಗೆ ಠಾಣೆಯ ಹೊರಗಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಠಾಣೆಯ ಹೊರಗಡೆ ಶಾಮಿಯಾನ್ ಹಾಕಿ ಠಾಣಾಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹಾಗೂ ದೂರುದಾರರು ಠಾಣೆಗೆ ಬರುವಾಗ ಕೈಗಳನ್ನು ತೊಳೆದುಕೊಳ್ಳಲು ಠಾಣೆಯ […]

ಗಂಗೊಳ್ಳಿ: ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಬಾಡಿಗೆ ಮಾಡುತ್ತಿದ್ದ ಆಟೊಗಳ ವಶ

ಕುಂದಾಪುರ: ಕೊರೋನಾ ವೈರಸ್ ಹರಡದಂತೆ ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಉಡುಪಿ ಜಿಲ್ಲೆಯಲ್ಲಿ ಆಟೋ ರಿಕ್ಷಾ ಸಂಚಾರವನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ರಸ್ತೆಗಿಳಿದು ಬಾಡಿಗೆ ಮಾಡುತ್ತಿದ್ದ ಆಟೋ ರಿಕ್ಷಾಗಳನ್ನು ಸುಮಾರು 20 ಆಟೋ ರಿಕ್ಷಾಗಳನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ಗಂಗೊಳ್ಳಿಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳಿಂದ ಆಟೋ ರಿಕ್ಷಾಗಳು ಬಾಡಿಗೆಯಲ್ಲಿ ತೊಡಗಿಕೊಂಡಿದ್ದು, ದಿನದಿಂದ ದಿನಕ್ಕೆ ಆಟೋ ರಿಕ್ಷಾ ಸಂಚಾರ ಹೆಚ್ಚಾಗುತ್ತಿತ್ತು. ಜಿಲ್ಲಾಡಳಿತ ಮತ್ತು ಪೊಲೀಸರ ಕಟ್ಟುನಿಟ್ಟಿನ ಆದೇಶದ ಹೊರತಾಗಿಯೂ […]

ಕೊರೊನಾಗೆ ದ.ಕ. ಜಿಲ್ಲೆಯಲ್ಲಿ ಮೂರನೇ ಬಲಿ: ಬಂಟ್ವಾಳದ ವೃದ್ದೆ ಸಾವು

ಮಂಗಳೂರು: ಮಂಗಳೂರಲ್ಲಿ ಕೊರೊನಾಗೆ ಮತ್ತೊಂದು ಬಲಿ ಯಾಗಿದೆ. ದ.ಕ. ಜಿಲ್ಲೆಯ ಬಂಟ್ವಾಳದ ಕೊರೊನ ಪೀಡಿತ ವೃದ್ದೆ(67) ಇಂದು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತ ‌ಪ್ರಕಟನೆ ನೀಡಿದೆ. ವೃದ್ದೆಗೆ ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಏ. 18ರಂದು ಸಕ್ಕರೆ ಕಾಯಿಲೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಏ. 23ರಂದು ಸಾವನ್ನಪ್ಪಿದ್ದ ಬಂಟ್ವಾಳದ ಮಹಿಳೆಯಿಂದ ವೃದ್ದೆಗೆ ಸೋಂಕು ಹರಡಿತ್ತು. ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ತಾಲೂಕೊಂದರಲ್ಲೇ ಕೊರೊನಾಕ್ಕೆ ಒಟ್ಟು ಮೂವರು ಬಲಿಯಾಗಿದ್ದಾರೆ‌.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ

ಉಡುಪಿ ಏ.30: ಸಾರ್ವಜನಿಕ ವಿತರಣಾ ಪದ್ದತಿಯಡಿಯಲ್ಲಿ  ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಏಪ್ರಿಲ್ ಮತ್ತು ಮೇ-2020ರ ಮಾಹೆಗೆ ಬಿಡುಗಡೆಯಾಗಿರುವ ಆಹಾರಧಾನ್ಯವನ್ನು ಮೇ-2020ರ ಮಾಹೆಯ ಪಡಿತರ ಚೀಟಿದಾರರಿಗೆ ಈ ಕೆಳಗಿನಂತೆ ವಿತರಿಸಲಾಗುವುದು. 1) ಅಂತ್ಯೋದಯ ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಕಾರ್ಡಿಗೆ 1 ಕೆಜಿ ತೊಗರಿಬೇಳೆ ಉಚಿತವಾಗಿ ವಿತರಿಸಲಾಗುವುದು. 2)ಪಿಹೆಚ್.ಹೆಚ್ (ಬಿಪಿಎಲ್) ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಕಾರ್ಡಿಗೆ 1 ಕೆಜಿ ತೊಗರಿಬೇಳೆ ಮತ್ತು […]