udupixpress
Home Trending ಕೊರೊನಾಗೆ ದ.ಕ. ಜಿಲ್ಲೆಯಲ್ಲಿ ಮೂರನೇ ಬಲಿ: ಬಂಟ್ವಾಳದ ವೃದ್ದೆ ಸಾವು

ಕೊರೊನಾಗೆ ದ.ಕ. ಜಿಲ್ಲೆಯಲ್ಲಿ ಮೂರನೇ ಬಲಿ: ಬಂಟ್ವಾಳದ ವೃದ್ದೆ ಸಾವು

ಮಂಗಳೂರು: ಮಂಗಳೂರಲ್ಲಿ ಕೊರೊನಾಗೆ ಮತ್ತೊಂದು ಬಲಿ ಯಾಗಿದೆ. ದ.ಕ. ಜಿಲ್ಲೆಯ ಬಂಟ್ವಾಳದ ಕೊರೊನ ಪೀಡಿತ ವೃದ್ದೆ(67) ಇಂದು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತ ‌ಪ್ರಕಟನೆ ನೀಡಿದೆ.
ವೃದ್ದೆಗೆ ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಏ. 18ರಂದು ಸಕ್ಕರೆ ಕಾಯಿಲೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.
ಏ. 23ರಂದು ಸಾವನ್ನಪ್ಪಿದ್ದ ಬಂಟ್ವಾಳದ ಮಹಿಳೆಯಿಂದ ವೃದ್ದೆಗೆ ಸೋಂಕು ಹರಡಿತ್ತು.
ದ.ಕ. ಜಿಲ್ಲೆಯ ಬಂಟ್ವಾಳದಲ್ಲಿ ತಾಲೂಕೊಂದರಲ್ಲೇ ಕೊರೊನಾಕ್ಕೆ ಒಟ್ಟು ಮೂವರು ಬಲಿಯಾಗಿದ್ದಾರೆ‌.

error: Content is protected !!